ಹೃದಯಾಘಾತದಿಂದ ನಟ ನವೀನ್ ಶಂಕರ್ ಜಸ್ಟ್ ಮಿಸ್: ಆಗಿದ್ದೇನು?
ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲ ನಟರು ಹೀರೋ ಹಾಗೂ ವಿಲನ್ ಎರಡೂ ಪಾತ್ರಗಳಿಗೂ ಜೀವ ತುಂಬುತ್ತಾರೆ. ಅಂತವರ ಪೈಕಿ ಸದ್ಯ ನಟ ನವೀನ್ ಶಂಕರ್ ಪ್ರಮುಖರಾಗಿದ್ದಾರೆ. ಇತ್ತ ಹೀರೋ ಲುಕ್‌ಗೂ ಮ್ಯಾಚ್ ಆಗುವ ನವೀನ್ ಶಂಕರ್, ಅತ್ತ ಖಡಕ್ ವಿಲನ್ ಪಾತ್ರಕ್ಕೂ ಸೈ. ಕ್ಷೇತ್ರಪತಿ, ಹೊಂದಿಸಿ ಬರೆಯಿರಿ ಅಂತಹ ಚಿತ್ರಗಳಲ್ಲಿ ಹೀರೋ ಲುಕ್‌ನಲ್ಲಿ ಮುಂಚಿದ ನವೀನ್ ಶಂಕರ್ ಇದೀಗ ಮತ್ತೊಂದು ಚಿತ್ರದಲ್ಲಿ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುವ ನಟ ನವೀನ್ ಶಂಕರ್ ಅಭಿನಯದ ನೋಡಿದವರು ಏನಂತಾರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ನೋಡಿದವರು ಏನಂತಾರೆ ಸಿನಿಮಾ ಟ್ರೈಲರ್‌ನಲ್ಲಿ ನಟ ನವೀನ್ ಶಂಕರ್ ಅವರನ್ನು ಕಂಡ ಸಿನಿ ಪ್ರೇಕ್ಷಕರು ಒಂದು ಕ್ಷಣಕ್ಕೆ ಶಾಕ್ ಆಗಿದ್ದಾರೆ. ಯಾಕೆಂದರೆ ನವೀನ್ ಶಂಕರ್ ಈ ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದಾರೆ.

ಒಂದು ಸಿನಿಮಾಗಾಗಿ ಯುವ ನಟರು ಈ ರೀತಿ ಅತಿಯಾಗಿ ತೂಕ ಇಳಿಸಿಕೊಳ್ಳುವುದು ಎಷ್ಟು ಸರಿ? ಈ ರೀತಿ ತೂಕ ತಿಳಿಸಿಕೊಂಡರೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲವೇ ಎನ್ನುವ ಪ್ರಶ್ನೆಗೆ ನವೀನ್ ಶಂಕರ್ ಉತ್ತರಿಸಿದ್ದು, ತಮಗಾದ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ನೋಡಿದವರು ಏನಂತಾರೆ ಸಿನಿಮಾದ ಪ್ರಚಾರದ ವೇಳೆ ಹೃದಯಾಘಾತ ಆಗುವ ಸಾಧ್ಯತೆಯಿತ್ತು ಎನ್ನುವ ವಿಚಾರವನ್ನು ನವೀನ್ ಶಂಕರ್ ಹೇಳಿಕೊಂಡಿದ್ದಾರೆ.
'ಅದನ್ನು ಬ್ರೆಡಿಕಾರ್ಡಿಯಾ ಅಂತ ಕರೆಯುತ್ತಾರೆ. ಅದರ ಅರ್ಥನೂ ನನಗೆ ಗೊತ್ತಿಲ್ಲ. ಹಾರ್ಟ್ ಬೀಟ್ ಸ್ಲೋ ಆಗುತ್ತದೆ. ಅದನ್ನು ನನಗೆ ಮೊದಲು ಡಾಕ್ಟರ್ ಹೇಳಿರಲಿಲ್ಲ. ಇಸಿಜಿ ಮಾಡಿಸಿ ಎಲೆಕ್ಟ್ರೊಲೆಟ್ ಬ್ಯಾಲೆನ್ಸ್ ಮಾಡುವುದಕ್ಕೆ ಕುಡಿಯುವುದಕ್ಕೆ ಕೊಟ್ಟರು. ಮಾತ್ರೆಗಳನ್ನು ಕೂಡ ಕೊಟ್ಟರು. ಡಾಕ್ಟರ್ ಬೈದು ಡಯೆಟ್ ನಿಲ್ಲಿಸಲು ಹೇಳಿದರು. ರೆಗ್ಯೂಲರ್ ಟೆಸ್ಟ್‌ಗಳನ್ನು ಮಾಡಿದ್ದರು'.

'ಬಳಿಕ ಡಾಕ್ಟರ್ ಮೆಸೇಜ್ ಹಾಕಿದರು. ಫಸ್ಟ್ ಡಿಗ್ರಿ ಆಫ್ ಸ್ಟ್ರೋಕ್ ಅಂದರೆ ಮೊದಲ ಹಂತದ ಹಾರ್ಟ್ ಅಟ್ಯಾಕ್ ಎನ್ನುವ ರೀತಿ. ಒಂದು ವೇಳೆ ಹಾಗೆ ಮುಂದುವರೆಸಿದ್ದರೆ. ಅಥವಾ ಒಂದು ವೇಳೆ ನೀವು ಇಲ್ಲಗೆ ಬಂದಿರಲಿಲ್ಲ ಅಂದರೆ ಹೃದಯಾಘಾತ ಆಗುವ ಸಾಧ್ಯತೆಯಿತ್ತು ಅಂತ ಹೇಳಿದರು. ನನಗೆ ಅಲ್ಲೇ ಗೊಂದಲ ಶುರುವಾಯ್ತು. ಇಷ್ಟು ದಿನ ಕಷ್ಟ ಪಟ್ಟಿದ್ದೇವೆ. ಈಗ ಚೆನ್ನಾಗಿ ತಿನ್ನು ಅಂತಾ ಹೇಳುತ್ತಿದ್ದಾರಲ್ಲ ಎಂದು. ಕೊನೆಗೆ ಧೈರ್ಯ ಮಾಡಿ ಡಾಕ್ಟರ್ ಹತ್ತಿರ ಆಯ್ತು ಅಂತ ಹೇಳಿ, ಎಂಟು ಗಂಟೆ ಹಾಗೆ ಇದ್ದು, ಶೂಟಿಂಗ್ ಮುಗಿಸಿ ಮತ್ತೆ ಚೆನ್ನಾಗಿ ತಿನ್ನುವುದಕ್ಕೆ ಶುರು ಮಾಡಿದೆ' ಎಂದು ನಟ ನವೀನ್ ಶಂಕರ್ ಪವರ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.












Click it and Unblock the Notifications