'ಯಶ್‌ಗೆ ಚಾನ್ಸ್ ಕೊಡಿಸಿದ್ದೇ ನಾನು, ಈಗ ನನ್ ರೇಂಜ್ ಗೊತ್ತಾ ಅಂದ್ರು'
ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ವರ್ಲ್ಡ್ ಈಸ್ ಮೈ ಟೆರಿಟರಿ ಅನ್ನೋ ಡೈಲಾಗ್ ಹೊಡೆದಿದ್ರು. ಅದೇ ರೀತಿ ಅವರು ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ, ಈಗ ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್ ಇಡೀ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ್ದಾರೆ. ಯಶ್ ಅವರು ಏಕಾಏಕಿ ಅಥವಾ ರಾತ್ರೋರಾತ್ರಿ ದೊಡ್ಡ ಸ್ಟಾರ್ ಆದವರಲ್ಲ, ಸಿನಿ ಕುಟುಂಬದ ಹಿನ್ನೆಲೆಯೂ ಅವರಿಗಿಲ್ಲ. ಆದರೆ ಯಶ್ ಇಂದು ಈ ಮಟ್ಟಕ್ಕೆ ಬೆಳೆಯಲು ಹಲವರ ಪ್ರೋತ್ಸಾಹ, ಬೆಂಬಲ, ನೆರವು ಇದೆ.
ಸಾಮಾನ್ಯವಾಗಿ ಯಶ್ ಇಂದು ದೊಡ್ಡ ಸ್ಟಾರ್ ಆಗಿ ಬೆಳೆಯಲು ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಆದರೆ ಯಶ್ ಮೇಲೆ ಮೈಸೂರ್ ನಾಗರಾಜ್ ಎಂಬುವವರು ಶಾಕಿಂಗ್ ಆರೋಪಗಳನ್ನು ಮಾಡಿದ್ದಾರೆ. ಯಶ್ ಹತ್ತಿದ ಏಣಿಯನ್ನೇ ಒದ್ದಿದ್ದಾನೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮೈಸೂರು ನಾಗರಾಜ್ ಅವರು ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 'ಯಶ್ ಸಿನಿಮಾಗೂ ಮೊದಲು ನಂದಗೋಕುಲ ಸೀರಿಯಲ್‌ನಲ್ಲಿ ನಟಿಸಿದ್ದರು. ಆಗ ಯಶ್ ನವೀನ್ ಗೌಡ ಆಗಿದ್ದರು. ನಮ್ಮಿಬ್ಬರ ಪರಿಚಯ ಆಗಿದ್ದು ಆಗಲೇ ಎಂದಿದ್ದಾರೆ. ನವೀನ್ ಗೌಡ ಜಂಭದ ಹುಡುಗಿ ಸಿನಿಮಾದಲ್ಲಿ ಹೀರೋ ಆಗಿ ನಟಿಸಲು ನಾನೇ ಕಾರಣ' ಎಂದು "ವಿಜಯ ವಾಹಿನಿ" ಯೂಟ್ಯೂಬ್ ಸಂದರ್ಶನದಲ್ಲಿ ಮೈಸೂರು ನಾಗರಾಜ್ ಹೇಳಿದ್ದಾರೆ.

'ಸಿನಿಮಾ ಚಾನ್ಸ್ ಕೊಡಿಸಿ ಅಂತಿದ್ರು'
'ಯಶ್ ನಟಿಸುತ್ತಿದ್ದ ನಂದಗೋಕುಲ ಸೀರಿಯಲ್‌ನಲ್ಲಿ ನಾನು ಅಸೋಸಿಯೇಟ್ ಡೈರೆಕ್ಟ್ ಆಗಿದ್ದೆ. ನಾನು ಸಿನಿಮಾಗಳಲ್ಲಿ ಕೆಲಸ ಮಾಡಿರುವ ವಿಚಾರ ಯಶ್ ಅವರಿಗೆ ತಿಳಿದಿತ್ತು. ಹಾಗಾಗಿ ಸಿನಿಮಾಗಳಲ್ಲಿ ಅವಕಾಶ ಕೊಡಿಸಿ ಎಂದು ನನ್ನತ್ರ ಕೇಳಿಕೊಂಡ್ರು. ಅವರ ಫೋಟೊ, ಫೋನ್ ನಂಬರ್ ನನಗೆ ಕೊಟ್ಟಿದ್ರು. ಯಶ್ ಆಗ ತುಂಬಾ ಮುಗ್ಧ. ಎರಡು ವರ್ಷಗಳ ಕಾಲ ನಾನು ಯಶ್‌ಗಾಗಿ ಪ್ರೊಡ್ಯೂಸರ್‌ಗಳನ್ನ ಹುಡುಕಿದ್ದೆ ಎಂದಿದ್ದಾರೆ' ಮೈಸೂರು ನಾಗರಾಜ್.
'ಯಶ್ ನಟಿಸಿದ ಮೊದಲ ಸಿನಿಮಾ ಜಂಭದ ಹುಡುಗಿ. ನಂತರ ಮೊಗ್ಗಿನ ಮನಸು ಸಿನಿಮಾದಲ್ಲಿ ಅವಕಾಶ ಪಡೆದರು. ನಾನು ಯಶ್ ಅವರನ್ನ ಹೀರೊ ಮಾಡಲು ನಿರ್ಮಾಪಕರನ್ನು ಹುಡುಕುತ್ತಿದ್ದೆ. ಆಗ ಪ್ರಿಯಾ ಹಾಸನ್ ಅವರು ಸಿನಿಮಾ ಮಾಡಲು ಮುಂದಾಗಿದ್ದರು. ಆಗ ನಮ್ಮ ಹುಡುಗ ಒಬ್ಬ ಇದ್ದಾನೆ, ಅವನಿಗೆ ಅವಕಾಶ ಕೊಡಿ ಎಂದು ಯಶ್ ಬಗ್ಗೆ ಮಾತನಾಡಿದ್ದೆ. ಆದರೆ ಅವರು ಮಹಿಳಾ ಪ್ರಧಾನ ಸಿನಿಮಾ ಅಂದ್ರು. ಬಳಿಕ ಜಂಭದ ಹುಡುಗಿ ಕಥೆ ಸಿಕ್ಕಿ, ಅದೇ ಸಿನಿಮಾದಲ್ಲಿ ಯಶ್ ನಟಿಸಿದ್ರು' ಎಂದಿದ್ದಾರೆ.
'ನಾನು ಆ ಸಿನಿಮಾ ನಿರ್ದೇಶಿಸಲ್ಲ, ಯಶ್‌ಗೆ ಅವಕಾಶ ಕೊಡಿ ಎಂದು ಕೇಳಿಕೊಂಡೆ. ನನಗೆ ನಿರ್ದೇಶಕನಾಗುವ ಅವಕಾಶ ಇದ್ದರೂ ಅವರಿಗೆ ಅವಕಾಶ ಕೊಡಿಸಿದೆ. ಯಶ್ ಅವರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು. ಇದಾದ ನಂತರ ನಾನು ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡಿಕೊಂಡಿದ್ದೆ. ಯಶ್ ಕೂಡ ತಮ್ಮದೇ ಸಿನಿಮಾಗಳಲ್ಲಿ ಮುಂದುವರಿದುಬಿಟ್ಟರು.'
'ಸಿನಿಮಾ ಮಾಡೋಣ ಅಂದಿದ್ದಕ್ಕೆ ಯಶ್...'
'ಕೆಜಿಎಫ್-2 ರಿಲೀಸ್ ಬಳಿಕ ಯಶ್ ಅವರನ್ನ ಒಮ್ಮೆ ಭೇಟಿಯಾಗಲು ಹೋಗಿದ್ದೆ. ಆಗ ಚೆನ್ನಾಗಿಯೇ ಮಾತನಾಡಿಸಿದ್ರು. ನಂತರ ಅವರ ಭೇಟಿಗೆ ಮತ್ತೊಂದು ಸಲ ಹೋದಾಗ ಅವರ ನಡೆ ಬೇರೆಯಾಗಿತ್ತು. ಒಂದು ಸಿನಿಮಾ ಮಾಡೋಣ ಸರ್ ಎಂದು ಕೇಳಿದ್ದಕ್ಕೆ, ನನ್ನ ರೇಂಜ್ ಏನ್ ಗೊತ್ತಾ? ಅಂದ್ರು ಯಶ್. ಇದರ ಜೊತೆ ಇನ್ನೊಂದು ಮಾತು ಅಂದ್ರು, ಅದನ್ನ ಹೇಳೋಕಾಗಲ್ಲ. ಯಶ್ ಅವರ ತಾಯಿ ಈಗ ತನ್ನ ಮಗನಿಗೆ ಯಾರೂ ಸಹಾಯ ಮಾಡಲಿಲ್ಲ, ಅವನೇ ಬೆಳೆದ ಅಂತಾರೆ. ಯಶ್ ಹತ್ತಿದ ಏಣಿ ಒದ್ದಿದ್ದಾನೆ. ನಾನು ಯಶ್ ಜೊತೆ ಸಿನಿಮಾ ಮಾಡಬೇಕು ಅಂದ್ರೆ ಹಂತ ಹಂತವಾಗಿ ಬೆಳೆದು ಬರಬೇಕಂತೆ ಎಂದು ನನಗೆ ಯಶ್ ಹೇಳ್ದ' ಎಂದು ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications