ಹ್ಯಾಂಡ್‌ಸಮ್‌ ನಟ ಸುನಿಲ್‌ ಸಾವಿನ ರಹಸ್ಯವೇನು? ಅಪಘಾತದ ಹಿಂದೆ ಯಾರ ಕೈವಾಡ ಇತ್ತು?

90ರ ದಶಕದ ಚಾಕೊಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಬೆಳ್ಳಿ ಕಾಲುಂಗುರ ಖ್ಯಾತಿಯ ಸುನಿಲ್ 1994ರ ಜೂನ್ 24ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಸಾವಿಗೀಡಾದರು. ಈ ಘಟನೆ ಚಿತ್ರರಂಗದಲ್ಲಿ ಆಘಾತ ನೋವು ಮತ್ತು ಬೇಸರವನ್ನುಂಟುಮಾಡಿತ್ತು. ಆದರೆ ಸುನಿಲ್‌ ಅವರ ಸಾವಿನ ಹಿಂದೆ ಯಾರದ್ದೋ ಕೈವಾಡ ಇದೆ, ಇದು ಅಪಘಾತ ಅಲ್ಲ, ಹತ್ಯೆ ಎಂದೆಲ್ಲ ಸುದ್ದಿ ಹರಿದಾಡಿತ್ತು.

1990ರಿಂದ 1994ರವರೆಗೆ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದ ಸುನೀಲ್ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳಲ್ಲಿ ಕಾಣಿಸಿದ್ದರು. ಆಗಿನ ಕಾಲಕ್ಕೇ ಸುನೀಲ್‌ ಕನ್ನಡ ಚಿತ್ರರಂಗದ ಹ್ಯಾಂಡ್‌ಸಮ್‌ ಹೀರೋ ಆಗಿದ್ರು. ನಟಿ ಮಾಲಾಶ್ರೀ ಹಾಗೂ ಸುನೀಲ್‌ ಅವರ ಜೋಡಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿತ್ತು. ಕನ್ನಡ ಸಿನಿ ಪ್ರೇಕ್ಷಕರಿಗೆ ಸುನೀಲ್ ಮತ್ತು ಮಾಲಾಶ್ರೀ ಜೋಡಿ ಸಿಕ್ಕಾಪಟ್ಟೆ ಫೇವರೇಟ್‌ ಆಗಿತ್ತು. ಕೆಲವೇ ಸಿನಿಮಾಗಳ ಮೂಲಕ ಸುನಿಲ್‌ ಕನ್ನಡದ ಟಾಪ್‌ ಹೀರೋ ಆಗಿದ್ದರು. ಆದರೆ ಎಷ್ಟು ಬೇಗ ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಬೇಗ ಈ ಲೋಕಕ್ಕೆ ಗುಡ್‌ಬೈ ಹೇಳಿದ್ದರು.

Mystery Behind Kannada Actor Sunil Death Accident Or Foul Play

ಸುನೀಲ್ 1994ರ ಜುಲೈ 24ರಂದು ನಿರ್ಮಾಪಕ ಸಚಿನ್ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುನೀಲ್‌ ಇಹಲೋಕ ತ್ಯಜಿಸಿದರು. ಆದರೆ ನಟಿ ಮಾಲಾಶ್ರೀ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದರು. ಡ್ರೈವರ್ ಸೇರಿದಂತೆ ನಾಲ್ಕು ಜನ ಆ ಕಾರಿನಲ್ಲಿದ್ದರು.

ಅಸಲಿಗೆ ಆ ದಿನ ನಡೆದಿದ್ದೇನು?

ಅಂದು ಅಪಘಾತ ನಡೆದಾಗ ಏನಾಯ್ತು ಎಂದು ಕಾರಿನಲ್ಲಿದ್ದ ಸಚಿನ್‌ ಅವರು ಹೇಳಿಕೊಂಡಿದ್ದರು. 'ಅಪಘಾತವಾದಾಗ ನಾನು ನಿದ್ದೆ ಮಾಡುತ್ತಿದ್ದೆ, ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ ಎಂದಿದ್ದರು. ಹೈದಾರಾಬಾದ್‌ನಲ್ಲಿ ಕಾರ್ಯಕ್ರಮ ಮುಗಿಸಿ ರಾತ್ರಿ 11.30ರ ಸುಮಾರಿಗೆ ಹೈದರಾಬಾದ್ನಿಂದ ಕರ್ನಾಟಕದತ್ತ ಬರುತ್ತಿದ್ದೆವು. ನಮ್ಮ ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್ಗೆ ಬಂದು ಅಲ್ಲಿಂದ ಸುನೀಲ್ ಹಾಗೂ ನಮ್ಮೆಲ್ಲರನ್ನ ಕರೆದುಕೊಂಡು ಹೊರಟರು. ಬಹುಶಃ ಡ್ರೈವರ್ಗೆ ಆ ದಿನ ಸರಿಯಾಗಿ ನಿದ್ದೆ ಆಗಿರಲಿಲ್ಲ. ಇದರಿಂದಲೇ ಈ ಅವಘಡ ಸಂಭವಿಸಿದ್ದು' ಎಂದಿದ್ದರು.

'ಆ ದಿನ ನಾವು ಹೊರಡುವ ಪ್ಲ್ಯಾನ್‌ ಇರಲಿಲ್ಲ. ಅಲ್ಲೇ ಉಳಿಯೋಣ ಅಂದುಕೊಂಡಿದ್ವಿ. ಆದರೆ ಮರುದಿನ ಡ್ರೈವರ್ ಮಗಳ ಹುಟ್ಟುಹಬ್ಬಕ್ಕೆ ಹೋಗಬೇಕು ಎಂದಿದ್ದರಿಂದ ನಾವೆಲ್ಲ ಕಾಂಟೆಸಾ ಕಾರಿನಲ್ಲಿ ಹೊರಟಿದ್ವಿ. ಸುನಿಲ್‌ ಅವರು ಕೂಡ ನಿದ್ರೆ ಬಂದ್ರೆ ಹೇಳು ಅಂದಿದ್ರು. ಬಳಿಕ ನಾನು ನಿದ್ರೆಗೆ ಜಾರಿದ್ದೆ. ಅಪಘಾತವಾಗಿದ್ದು ನನ್ನ ಅರಿವಿಗೆ ಬರಲೇ ಇಲ್ಲ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಅಪಘಾತ ಆದ ನಂತರ ನಮ್ಮನ್ನೆಲ್ಲ ಬೆಂಗಳೂರಿಗೆ ಕರೆದೊಯ್ಯುವಾಗ ಸುನೀಲ್ ಕೊನೆಯುಸಿರೆಳೆದಿದ್ದರಂತೆ. ನನಗೆ ಬಹಳ ದಿನಗಳ ನಂತರ ಪ್ರಜ್ಞೆ ಬಂದಿತ್ತು' ಎಂದು ಸಚಿನ್‌ ವಿವರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+