ನಟ ಕಮಲ್ ಹಾಸನ್ ಬೆನ್ನಲ್ಲೇ ಸಂಗೀತ ಮಾಂತ್ರಿಕ ಇಳಯರಾಜ "ಗ್ರೇಟ್" ಕಮೆಂಟ್‌ಗೆ ಟೀಕೆ!
ಕನ್ನಡದ ಭಾಷಾ ವಿಚಾರವಾಗಿ ನಟ ಕಮಲ್ ಹಾಸನ್ ಅವರು ತೀವ್ರ ಟೀಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಸಂಗೀತ ಮಾಂತ್ರಿಕ ಖ್ಯಾತಿಯ ಇಳಯರಾಜ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರ ಗ್ರೇಟ್ ... ಹೇಳಿಕೆಗೆ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದಾರೆ. ದಕ್ಷಿಣ ಭಾರತದ ಬಹುಭಾಷಾ ನಟ ಕಮಲ್ ಹಾಸನ್ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳು ತಮಿಳಿನಿಂದಲೇ ಬಂದಿದೆ ಎಂದು ವಾದಿಸಿ ವಿವಾದಕ್ಕೆ ಸಿಲುಕಿದ್ದಾರೆ. ಈ ರೀತಿ ಇರುವಾಗಲೇ ಭಾರತೀಯ ಸಿನಿಮಾದ ಸಂಗೀತ ಸಂಯೋಜಕ ಹಾಗೂ ದಕ್ಷಿಣ ಭಾರತದ ಪ್ರಮುಖ ಸಂಗೀತ ನಿರ್ದೇಶಕ ಇಳಯರಾಜ ಅವರು ವಿವಾದಕ್ಕೆ ಸಿಲುಕಿದ್ದಾರೆ. ಆದರೆ, ಇದು ಭಾಷಾ ವಿವಾದವಲ್ಲ. ಹಾಗಾದರೆ ಏನು ಎನ್ನುವುದನ್ನು ನೋಡೋಣ.
ಕನ್ನಡ, ತಲುಗು, ತಮಿಳು ಹಾಗೂ ಮಲೆಯಾಳಂನ ನೂರಾರು ಸಿನಿಮಾಗಳ ಸಾವಿರಾರು ಹಾಡುಗಳಿಗೆ ಜೀವ ತುಂಬಿರುವ ಇಳಯರಾಜ ಅವರು ಇದೀಗ ಹೊಸ ವಿವಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೇ ಜೂನ್ 3ಕ್ಕೆ ಇಳಯರಾಜ ಅವರಿಗೆ ಭರ್ತಿ 81 ವರ್ಷಗಳು ತುಂಬಲಿವೆ. ದೇಶದಾದ್ಯಂತ ಇವರ ಹಾಡಿಗೆ ವಿಶೇಷ ಅಭಿಮಾನಿಗಳ ಬಳಗವೇ ಇದೆ. ಆದರೆ, ಇವರು ತಮ್ಮ ಹಾಡುಗಳಿಗೆ ಕ್ಲೈಮ್ ಮಾಡಿಕೊಳ್ಳುವುದು ಅಥವಾ ಕಾಪಿರೈಟ್ಸ್ ಹಾಕುವುದು ಇತ್ತೀಚಿನ ವರ್ಷಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬದುಕಿನ ಸುಂದರ ಸಂಧ್ಯಾ ಕಾಲದಲ್ಲಿರುವ ಅವರು ಬೇಡದ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.

ಇಳಯರಾಜ ಅವರು ನನ್ನ ತರ ಇದಕ್ಕೂ ಮೊದಲು ಯಾರೂ ಇರಲಿಲ್ಲ... ಮುಂದೆಯೂ ಯಾರೂ ಬರುವುದಿಲ್ಲ ಅಂತ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಇವರ ಮಾಂತ್ರಿಕ ಸಂಗೀತವನ್ನು ನಾವೆಲ್ಲಾರೂ ಮೆಚ್ಚಿಕೊಂಡಿದ್ದೇವೆ. ಆದರೆ ಈ ರೀತಿ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಅಂತ ಹಲವರು ವಾದ ಮಾಡಿದ್ದಾರೆ.
ಮುಂದುವರಿದು ಇಳಯರಾಜ ಅವರು, ನನ್ನ ಬಗ್ಗೆ ನಾನೇ ಮಾತನಾಡಬೇಕು ತಾನೆ. ಯಾಕೆಂದರೆ ನನ್ನ ತರ ಇದಕ್ಕೂ ಮೊದಲು ಯಾರೂ ಇರಲಿಲ್ಲ. ಇನ್ಮುಂದೆಯೂ ಬರಲ್ಲ ಬಿಡಿ ಅಂತ ಹೇಳಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಿದ್ದಾರೆ ನಿಜ ಆದರೆ ನನ್ನ ಎತ್ತರಕ್ಕೆ ಯಾರೂ ಬೆಳೆಯಲಿಲ್ಲ ಅಂತ ಹೇಳಿರುವುದು ಇವರನ್ನು ಆರಾಧಿಸುವ ಅಭಿಮಾನಿಗಳಲ್ಲೂ ಇದು ಯಾಕೋ ಅತಿ ಆಯ್ತು ಎನ್ನುವ ಭಾವನೆ ಮೂಡಿಸಿದೆ.
ನೋಟಿಸ್‌ಗಳ ಮೂಲಕವೇ ಫೇಮಸ್: ಇನ್ನು ಇಳಯರಾಜ ಅವರು ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕವೇ ಅವರು ಫೇಮಸ್ ಆಗಿದ್ದರು. ವಿವಿಧ ಸಿನಿಮಾಗಳಲ್ಲಿ ಅವರ ಹಾಡುಗಳನ್ನು ಅನಧಿಕೃತವಾಗಿ ಬಳಸಲಾಗಿದೆ. ಇಲ್ಲವೇ ಹಳೆಯ ಅವರ ಸಿನಿಮಾ ಹಾಡುಗಳನ್ನು ಹೊಸ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಕಾಪಿರೈಟ್ಸ್ ಕ್ಲೈಮ್ ಮಾಡಿ ಅವರು ವಿವಿಧ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿರುವುದೂ ಇದೆ.
ಈಚೆಗೆ ಬಿಡುಗಡೆಯಾದ ಗುಡ್ ಬ್ಯಾಡ ಅಗ್ಲಿ ತಮಿಳು ಸಿನಿಮಾದಲ್ಲಿ ಅವರ ಹಾಡುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದ ಅವರು ಚಿತ್ರ ತಂಡಕ್ಕೆ ಎರಡು ಬಾರಿ ಲೀಗಲ್ ನೋಟಿಸ್ ಜಾರಿ ಮಾಡಿದ್ದರು.
ಸಂಗೀತ ಮಾಂತ್ರಿಕನಿಗೆ ಇದು ಬೇಡವಾಗಿತ್ತು: ಇನ್ನು ಸಂಗೀತ ಮಾಂತ್ರಿಕ ಎಂದೇ ಖ್ಯಾತಿ ಗಳಿಸಿರುವ ಇಳಯರಾಜ ಅವರಿಗೆ ಈ ರೀತಿ ಗ್ರೇಟ್ ಅಂತ ಹೇಳಿಸಿಕೊಂಡು ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಳಯರಾಜ ಮೇಲೆ ಅಪಾರ ಗೌರವವಿದೆ. ಆದರೆ, ಅವರು ಇದನ್ನು ಈ ರೀತಿ ಮಿಸ್ ಯೂಸ್ ಮಾಡಿಕೊಳ್ಳಬಾರದಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications