Darshan Thoogudeepa: ರೇಣುಕಾಸ್ವಾಮಿ ಕೊ** ಮಾಡಿದ್ದು ದರ್ಶನ್ ತೂಗುದೀಪ್ ಅಲ್ಲ, ಬೆಂಗಳೂರಿನ ಶಾಸಕರ...?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಭರ್ಜರಿ & ಸಂಚಲನ ಸೃಷ್ಟಿಸುವ ಸುದ್ದಿ ಸಿಕ್ಕಿದೆ. ಅದು ಏನು ಅಂದರೆ ರೇಣುಕಾಸ್ವಾಮಿ ಕೊಲೆ ಮಾಡಿದ್ದು ದರ್ಶನ್ ತೂಗುದೀಪ್ ಅಲ್ಲವಂತೆ. ಈ ಕುರಿತು ಇಂದು ಸಂಚಲನ ಸೃಷ್ಟಿ ಮಾಡುವ ಸುದ್ದಿ ಹೊರಗೆ ಬಿದ್ದಿದ್ದು, ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪನ ಫ್ಯಾನ್ಸ್ ಈ ಸುದ್ದಿ ಕೇಳಿ ಖುಷಿ ಆಗಿದ್ದಾರೆ. ಇದೇ ಸಮಯದಲ್ಲಿ ಈಗ ರೇಣುಕಾಸ್ವಾಮಿ ಕೊ** ಮಾಡಿದ್ದು ದರ್ಶನ್ ತೂಗುದೀಪ್ ಅಲ್ಲ, ಬದಲಾಗಿ ಬೆಂಗಳೂರಿನ ಶಾಸಕರ...?

ದರ್ಶನ್ ತೂಗುದೀಪ್ ಇದೀಗ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಮರ್ಮಾಂಗ ಸುಲಿದು, ಆ ವ್ಯಕ್ತಿಯ ಎದೆ & ಕಣ್ಣಿಗೆ ಹಾಗೂ ತಲೆಗೆ ಬಡಿದು ಭೀಕರವಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ನಮ್ಮ ಡಿ-ಬಾಸ್ ಹಿಂಗೆಲ್ಲಾ ಮಾಡಿಲ್ಲ, ಡಿ-ಬಾಸ್ ಹಿಂಗೆಲ್ಲ ಮಾಡಲ್ಲ ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ವಾದ ಮಾಡುತ್ತಿದ್ದಾರೆ. ಈ ರೀತಿ ದರ್ಶನ್ ತೂಗುದೀಪ್ ಅಲಿಯಾಸ್ ಡಿ-ಬಾಸ್ ಅಭಿಮಾನಿಗಳು ವಾದ ಮಾಡುವಾಗಲೇ ಸ್ಫೋಟಕ ಆರೋಪ ಒಂದು ಕೇಳಿಬಂದಿದೆ. ರೇಣುಕಾಸ್ವಾಮಿಯ ಕೊಲೆ ಮಾಡಿದ್ದು ದರ್ಶನ್ ತೂಗುದೀಪ್ ಅಲ್ಲ, ಬೆಂಗಳೂರಿನ ಶಾಸಕರ...?

Munirathna Naidu Name Mentioned In The Darshan Thoogudeepa And Renukaswamy Matter

ಮುನಿರತ್ನ ನಾಯ್ಡು ಸಂಬಂಧಿ ಹೆಸರು...

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಸಹೋದರಿ ಮಗನನ್ನ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಳೆದು ತರಲಾಗಿದೆ. ಹೌದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬ ವ್ಯಕ್ತಿ ಇದೀಗ ಈ ಕುರಿತು ಸ್ಫೋಟಕ ಆರೋಪ ಮಾಡಿದ್ದಾರೆ. ಶಾಸಕ ಮತ್ತು ದರ್ಶನ್ ತೂಗುದೀಪ್ ಆಪ್ತರಾಗಿದ್ದ ಮುನಿರತ್ನ ನಾಯ್ಡು ವಿರುದ್ಧ ಲಂಚ ಕೇಳಿರುವ ಆರೋಪ ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರು.

ಮುನಿರತ್ನ ನಾಯ್ಡು ವಿರುದ್ಧ ಲಂಚ ಕೇಳಿದ ಆರೋಪ ಮಾಡುವ ವೇಳೆ. ಲಂಚ ಕೊಡದೆ ಇದ್ರೆ ನಿನ್ನ ಕಥೆಯನ್ನು ಕೂಡ ರೇಣುಕಾಸ್ವಾಮಿ ರೀತಿ ಮುಗಿಸಿ ಹಾಕುತ್ತೇವೆ ಎಂದು ಇದೇ ವೇಳೆ, ಬೆಂಗಳೂರಿನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡು ಆಪ್ತ ಬೆದರಿಕೆ ಹಾಕಿದ್ದಾನೆ ಎಂದು ಚಲುವರಾಜು ಆರೋಪಿಸಿದ್ದಾನೆ. ಈ ಮೂಲಕ, ರೇಣುಕಾಸ್ವಾಮಿ ಕೊಲೆ ಮಾಡಿದ್ದು ನಟ ದರ್ಶನ್ ಅಲ್ವಾ? ಶಾಸಕ ಮುನಿರತ್ನ ನಾಯ್ಡು ಅವರ ತಂಗಿಯ ಮಗನ ಪಾತ್ರ ಏನು? ಅಂತಾ ಇದೀಗ ದರ್ಶನ್ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ.

ಮುನಿರತ್ನ ನಾಯ್ಡು ತಂಗಿ ಮಗ...

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಆಪ್ತ ಬೆದರಿಕೆ ಹಾಕಿದ ಆರೋಪದ ಸಮಯದಲ್ಲೇ, ರೇಣುಕಾಸ್ವಾಮಿ ಕಥೆ ಮುಗಿಸಿದ್ದು ಶಾಸಕ ಮುನಿರತ್ನ ನಾಯ್ಡು ತಂಗಿಯ ಮಗ ಎಂಬ ವಿಚಾರವನ್ನು ಕೂಡ ಶಾಸಕ ಮುನಿರತ್ನ ನಾಯ್ಡು ಆಪ್ತ ಹೇಳಿದ್ದಾನೆ ಎಂದು ಆರೋಪ ಮಾಡಲಾಗಿದೆ. ಈ ಮೂಲಕ ರೇಣುಕಾಸ್ವಾಮಿ ಕೇಸ್‌ಗೆ ಟ್ವಿಸ್ಟ್ ಸಿಗುತ್ತಿದ್ದು ಈ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್‌ಗೆ ಅನ್ಯಾಯ ಆಗಿದೆ, ಶಾಸಕ ಮುನಿರತ್ನ ನಾಯ್ಡು ತಂಗಿ ಮಗನ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಇದೀಗ ಸೋಷಿಯಲ್ ಮೀಡಿಯಾ ಮೂಲಕ ದರ್ಶನ್ ತೂಗುದೀಪ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+