Mungaru Male: 16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ 'ಮುಂಗಾರು ಮಳೆ' ಜೋಡಿ
ಬೆಂಗಳೂರು, ಜೂನ್. 09: 'ಮುಂಗಾರು ಮಳೆ' ಕನ್ನಡ ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ಎವರ್‌ಗ್ರೀನ್ ಸಿನಿಮಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಹೊಸ ಅಲೆ ಸೃಷ್ಟಿಸಿದ ಸಿನಿಮಾಗಳಲ್ಲಿ ಮುಂಗಾರು ಮಳೆಗೆ ದೊಡ್ಡ ಸ್ಥಾನವಿದೆ. ಸಿನಿಮಾದ ಹಾಡುಗಳು ಇಂದಿಗೂ ಹಲವರು ಗುನುಗುತ್ತಾರೆ.
ಕನ್ನಡ ಸಿನಿಮಾ ರಂಗದಲ್ಲಿ ಗೋಲ್ಡನ್ ಹಿಟ್ ಮುಂಗಾರು ಮಳೆಯು ಗಣೇಶ್ ಅವರನ್ನು ಗೋಲ್ಡನ್ ಸ್ಟಾರ್ ಮಾಡಿದೆ. ನಟಿ ಪೂಜಾ ಗಾಂಧಿ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿತು. ನಿರ್ಮಾಪಕ ಇ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಮತ್ತಷ್ಟು ಹಿಟ್ ಆದರು. ಈಗ ಸಿನಿಮಾ ಬಿಡುಗಡೆಯಾಗಿ 16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ ಮುಂಗಾರು ಮಳೆ ಜೊಡಿ
ನಿರ್ಮಾಪಕ ಇ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ 16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಹೊಸ ಚಿತ್ರವೊಂದಕ್ಕೆ ಈ ಹಿಟ್ ಜೋಡಿ ಸಿದ್ಧರಾಗುತ್ತಿದ್ದು, ತಮ್ಮ ಮುಂದಿನ ಸಿನಿಮಾಕ್ಕೆ ಮತ್ತೆ ಹೊಸ ಮುಖಗಳನ್ನು ಪರಿಚಯಿಸುವ ಕೆಲಸದಲ್ಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
ನಟ ಗಣೇಶ್ ಅಭಿನಯದ 'ಮುಂಗಾರು ಮಳೆ' ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಮೊದಲಿಗೆ ಎಲ್ಲರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಿನಿಮಾ ಬಾಯಿ ಮಾತಿನಿಂದಲೇ ಜನರು ಪ್ರಚಾರ ನೀಡಿದ್ದರು. ದಿನ ಕಳೆದಂತೆ ಪ್ರದರ್ಶನಗಳು ಹೆಚ್ಚಾದವಿ, ಸಿನಿಮಾ ಮಂದಿರಗಳ ಸಂಖ್ಯೆ ಹೆಚ್ಚಾಯಿತು.

ಇನ್ನು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಉಡೀಸ್ ಮಾಡಡಿದ ಮುಂಗಾರು ಮಳೆ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಓಡಿದ ಭಾರತದ ಮೊದಲ ಚಲನಚಿತ್ರವಾಗಿ ಇದು ಇತಿಹಾಸವನ್ನು ನಿರ್ಮಿಸಿತು. ಕನ್ನಡ ಸಿನಿಮಾವನ್ನೇ ನೋಡದ ಅನೇಕ ಬೆಂಗಳೂರಿಗರು ಮುಂಗಾರು ಮಳೆಯಲ್ಲಿ ನೆಂದಿದ್ದು ಇತಿಹಾಸವೇ ಸರಿ.
ಎಲ್ಲಾ ಅಡೆತಡೆಗಳನ್ನು ಮುರಿದು, ಇದು ದಕ್ಷಿಣ ಭಾರತದ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು ಸ್ಥಾಪಿಸಿದ ಈ ಸಿನಿಮಾ ಹಲವು ಭಾಷೆಗಳಲ್ಲಿ ರಿಮೇಕ್ ಆಯಿತು. ಚಿತ್ರರಂಗದಲ್ಲಿ ವೃತ್ತಿ ಕಟ್ಟಿಕೊಳ್ಳಲು ಕಷ್ಟಪಡುತ್ತಿದ್ದ ಹಾಸ್ಯ ನಟ ಗಣೇಶ್ ಅವರನ್ನು 'ಗೋಲ್ಡನ್ ಸ್ಟಾರ್' ಪಟ್ಟಕ್ಕೆ ಏರಿಸಿ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಒದಗಿಸಿತು.
ಇಂತಹ ಅದ್ಭುತ ಸೃಷ್ಟಿಸಿದ್ದ ನಿರ್ಮಾಪಕ ಈ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ 16 ವರ್ಷಗಳ ನಂತರ ಮತ್ತೆ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ಸದ್ಯ ಹೊಸ ಚಿತ್ರದ ಪ್ರಿ-ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕರು ಇದೇ ತಿಂಗಳು ಚಿತ್ರೀಕರಣ ಆರಂಭಿಸುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಘೋಷಣೆಗಳು ಬಾಕಿಯಿದೆ.












Click it and Unblock the Notifications