Bigg Boss kannada season 10: ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ ಮನೆಗೆ ಎಂಟ್ರಿ!

ಕನ್ನಡದ ಜನಪ್ರಿಯ ಶೋ ಬಿಗ್‌ಬಾಸ್‌ ಸೀಸನ್ 10 ಆರಂಭವಾಗಿದ್ದು, ಆರಂಭದ ಮೊದಲನೇ ದಿನವೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನೆಗೆ ಎಂಟ್ರಿಯಾಗಿದ್ದಾರೆ. ಕಲರ್ಸ್ ಕನ್ನಡದ ಪ್ರೋಮೋದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ ಮನೆಗೆ ಎಂಟ್ರಿ ಆಗಿರುವುದನ್ನು ತೋರಿಸಲಾಗಿದೆ.

ಇದು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಒಂದೇ ಮನೆಯಲ್ಲಿ ನೂರು ದಿನಗಳ ಕಾಲ ಇರಿಸುವುದು ಬಿಗ್ ಟಾಸ್ಕ್. ಈ ಟಾಸ್ಕ್‌ ಅನ್ನು ಯಾರು ಜಯಿಸುತ್ತಾರೆ ಅನ್ನೋ ಕುತೂಹಲವನ್ನು ಬಿಗ್‌ಬಾಸ್‌ ಮನೆ ನೂರು ದಿನಗಳವರೆಗೆ ಕಾಯ್ದಿರಿಸುತ್ತದೆ. ಭಾನುವಾರದಿಂದ ಆರಂಭವಾದ ಬಿಗ್‌ಬಾಸ್ ಶೋನಲ್ಲಿ ಈಗಾಗಲೇ ಹಲವಾರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ಇಂದು ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ದೊಡ್ಮನೆ ಸೇರಿದ್ದು ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.

mla-pradeep-eshwar

ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಶೋನಲ್ಲಿ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ ಮನೆಗೆ ಹೋಗುತ್ತಿರುವುದನ್ನು ತೋರಿಸಲಾಗುತ್ತದೆ. ಹೀಗಾಗಿ ಜನನಾಯಕರಾದ ಪ್ರದೀಪ್ ಈಶ್ವರ್ ಬಿಗ್‌ಬಾಸ್‌ ಮನೆಯಲ್ಲಿ ಎಷ್ಟು ದಿನ ಇರುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಕೆಲವೇ ದಿನಗಳವರೆಗೆ ಅವರು ಅತಿಥಿಯಾಗಿ ದೊಡ್ಮನೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.

"ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಆದರೆ ಇವತ್ತು ಬಂದಿದ್ದೇನೆ. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು, ಪ್ರತಿಸ್ಪರ್ಧಿಗಳು ಗೆಲ್ಲೋಕೆ" ಎಂದು ಪ್ರದೀಪ್ ಈಶ್ವರ್ ಪರೋಕ್ಷವಾಗಿ ಹೇಳಿದ್ದಾರೆ.

"ನಾವು ಎಂಎಲ್‌ಎ ಜೊತೆ ಸ್ಪರ್ಧೆ ಮಾಡ್ತಿದ್ದೇವೆ, ಇದು ತಮಾಷೆ ವಿಷಯವೇ ಅಲ್ಲ" ಎಂದು ಪ್ರದೀಪ್ ಈಶ್ವರ್ ಅವರಿಗೆ ಸಂತು ಹೇಳಿದ್ದಾರೆ. "ನಾನು ಎಂಟ್ರಿ ಅಂತಲೇ ಅಂತ ಅಂದುಕೊಂಡಿರಲಿಲ್ಲ" ಅಂತ ಸಿರಿ ಅವರು ಪ್ರದೀಪ್ ಎಂಟ್ರಿಗೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+