ನಟಿ ಸರೋಜಾದೇವಿ ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಎಡವಟ್ಟು; ಸಿದ್ದರಾಮಯ್ಯ ಕ್ಷಮೆ ಕೇಳಿದ ಮೆಟಾ!
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟಿ ಬಿ.ಸರೋಜಾದೇವಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅಲ್ಲದೇ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಿಂದ ಶ್ರದ್ಧಾಂಜಲಿ ತಿಳಿಸಿದ್ದರು. ಈ ವೇಳೆ ದೊಡ್ಡ ಎಡವಟ್ಟಾಗಿದ್ದು, ಸಿಎಂ ಕಚೇರಿಯಿಂದ ಕನ್ನಡದಲ್ಲಿ ಮಾಡಿದ್ದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಇಂಗ್ಲಿಷ್ ಭಾಷಾಂತರ ಕಾಣಿಸಿಕೊಂಡಿತ್ತು. ಇದು ಅಪಾರ್ಥ ಕಲ್ಪಿಸುವ ಹಾಗೂ ತಪ್ಪು ತಪ್ಪಾಗಿ ದೋಷದಿಂದ ಕೂಡಿತ್ತು ಎನ್ನಲಾಗಿದೆ. ಈ ತಪ್ಪಿಗೆ ಮೆಟಾ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೇಳಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಜುಲೈ 15ರಂದು ಮೃತರಾದ ಬಿ.ಸರೋಜಾದೇವಿ ಅವರ ಮನೆಗೆ ತೆರಳಿ, ನನ್ನ ಶ್ರದ್ಧಾಂಜಲಿ ಸಲ್ಲಿಸಿದ್ದೆ. ಈ ಸುದ್ದಿಯನ್ನು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಫೇಸ್‌ಬುಕ್ ಖಾತೆಯಾದ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕದಿಂದ ಕನ್ನಡ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಕೆಲವು ಫೇಸ್‌ಬುಕ್ ಬಳಕೆದಾರರ ವಾಲ್‌ನಲ್ಲಿ ನನ್ನ ಕನ್ನಡದ ಪೋಸ್ಟ್ ಇಂಗ್ಲಿಷ್ ಭಾಷಾಂತರದಲ್ಲಿ ಕಾಣಿಸಿಕೊಂಡಿತ್ತು ಎಂದಿದ್ದಾರೆ.

ಅಪಾರ್ಥ ಕಲ್ಪಿಸುವ, ಗಂಭೀರವಾದ ದೋಷದಿಂದ ಕೂಡಿದ್ದ ಈ ಪೋಸ್ಟ್ ಓದಿದ್ದ ಅನೇಕರು ನಮ್ಮ ಕಚೇರಿಯಿಂದಲೇ ಇಂಗ್ಲೀಷ್ ಪೋಸ್ಟ್ ಹಾಕಿರಬಹುದೆಂದು ತಿಳಿದು ಟೀಕೆ-ಟಿಪ್ಪಣಿ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಈ ಕಾರಣಕ್ಕಾಗಿ ಸ್ಪಷ್ಟೀಕರಣವನ್ನು ನೀಡುತ್ತಿದ್ದೇನೆ. ಫೇಸ್‌ಬುಕ್‌ನಲ್ಲಿ ಆಟೋ ಟ್ರಾನ್ಸ್‌ಲೇಷನ್ ಎಂಬ ಆಯ್ಕೆಯಿರುವುದೇ ಈ ಅವಾಂತರಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.
ಸ್ವಯಂ ಅನುವಾದ ಪ್ರಕ್ರಿಯೆ ದೋಷಪೂರ್ಣ
ಈ ಆಯ್ಕೆಯು ಮುಕ್ತವಾಗಿದ್ದು, ಇದನ್ನು ರದ್ದುಪಡಿಸುವ ಅವಕಾಶ ಪೋಸ್ಟ್ ಮಾಡುವ ಖಾತೆದಾರನಿಗೆ ಇರುವುದಿಲ್ಲ. ಇದರಿಂದಾಗಿ ಜಗತ್ತಿನ ಯಾವುದೇ ಭಾಷಿಕರು ಇದನ್ನು ತಮ್ಮ ಭಾಷೆಗೆ ಭಾಷಾಂತರಿಸಿಕೊಂಡು ಓದಬಹುದು. ಈ ಸ್ವಯಂ ಅನುವಾದದ ಪ್ರಕ್ರಿಯೆಯೇ ದೋಷಪೂರ್ಣವಾಗಿದೆ. ನಮ್ಮ ಕಚೇರಿ ಕನ್ನಡದಲ್ಲಿ ಮಾಡಿದ್ದ ಮೂಲ ಪೋಸ್ಟ್ ಕೆಲವರ ನ್ಯೂಸ್ ಫೀಡ್‌ನಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಕಾಣಿಸಿಕೊಂಡಿದೆ. ಈ ಭಾಷಾಂತರವೇ ದೋಷಪೂರ್ಣವಾಗಿತ್ತು ಎಂದು ವಿವರಿಸಿದ್ದಾರೆ.

ಅಪಾರ್ಥ ಕಲ್ಪಿಸುವ ಇಂಗ್ಲೀಷ್ ಪೋಸ್ಟ್ ನೋಡಿದ ಕೆಲವರು ಕೂಡಲೇ ಅದರ ಕೆಳಭಾಗದಲ್ಲಿರುವ "See Original Post" ಆಯ್ಕೆಯ ಮೂಲಕ ಕನ್ನಡ ಪೋಸ್ಟ್ ನೋಡಿ ಸರಿಯಾದ ಸುದ್ದಿಯನ್ನು ಗ್ರಹಿಸಿಕೊಂಡಿದ್ದರು. ಅಲ್ಲದೆ ಫೇಸ್‌ಬುಕ್‌ನ ಸ್ವಯಂ ಭಾಷಾಂತರದಲ್ಲಿ ಕಂಡುಬಂದಿರುವ ದೋಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಮಾಧ್ಯಮ ಸಲಹೆಗಾರರು ಮೆಟಾ ಅವರನ್ನು ಸಂಪರ್ಕಿಸಿ ದೋಷ ಸರಿಪಡಿಸುವಂತೆ ಮನವಿ ಮಾಡಿದ್ದರು. ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷ ಸರಿಪಡಿಸುವುದಾಗಿ ಇ-ಮೇಲ್ ಮೂಲಕ ತಿಳಿಸಿದ್ದಾರೆ ಎಂದಿದ್ದಾರೆ.
ಈ ಹಿಂದೆಯೂ ಮೆಟಾ ಮೂಲ ಭಾಷೆಯನ್ನು ಸ್ವಯಂ ಅನುವಾದ ಮಾಡಿ, ಜಾಗತಿಕ ಮಟ್ಟದಲ್ಲಿ ಇಂತಹ ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಇಂತಹ ತಪ್ಪುಗಳಿಗಾಗಿ ಇತ್ತೀಚೆಗೆ ಮಲೇಷಿಯಾ ಸೇರಿದಂತೆ ಮಯನ್ಮಾರ್, ಪ್ಯಾಲೇಸ್ತೀನ್ ಮತ್ತಿತರ ಕಡೆಗಳಲ್ಲೂ ಸಾರ್ವಜನಿಕವಾಗಿ ತೀವ್ರ ವಿರೋಧ ಎದುರಿಸಿತ್ತು. ಸುಮಾರು ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್‌ಗೆ ದೊಡ್ಡ ಪ್ರಮಾಣದ ಕನ್ನಡಿಗರು ಸೇರಿದಂತೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರಿದ್ದಾರೆ. ಆದರೆ ಸ್ವಯಂ ಅನುವಾದ ನೀಡುವಾಗ ಮೂಲ ಭಾಷೆಯಲ್ಲಿ ಹೇಳಿದ್ದು ಅನರ್ಥವಾಗಿ ಭಾಷಾಂತರಗೊಳ್ಳುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೆಟಾ Auto translation ಮಾಡುವಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೇನೆ. ಫೇಸ್‌ಬುಕ್‌ನವರ ತಪ್ಪನ್ನು ಕೆಲವರು ಸ್ಕ್ರೀನ್‌ಶಾಟ್ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ಕಿಡಿಗೇಡಿತನ ಮಾಡುವವರಲ್ಲಿ ವಿರೋಧಪಕ್ಷದ ಕೆಲವು ಶಾಸಕರು, ಮಾಜಿ ಸಚಿವರು ಕೂಡ ಸೇರಿರುವುದು ವಿಷಾದನೀಯ. ಹಾಗಾಗಿ ಯಾರೂ ಈ ಸುಳ್ಳು ಸುದ್ದಿಯ ಬಗ್ಗೆ ಗೊಂದಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
-
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications