Richest Actress: ಐಶ್ವರ್ಯ ರೈ ಅಲ್ಲ, ಮಾಧುರಿನೂ ಅಲ್ಲ: 28 ಕೆಜಿ ಚಿನ್ನ ಹೊಂದಿದ್ದ ಭಾರತದ ಶ್ರೀಮಂತ ನಟಿ ಈಕೆ!
ಸಿನಿಮಾ ಸ್ಟಾರ್ ಆದವರಿಗೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಬರುತ್ತದೆ. ಕೋಟಿ, ಕೋಟಿ ರೂಪಾಯಿ ಖರ್ಚು ಕೂಡ ಇರುತ್ತದೆ. ಹೀಗೆ ಸಿನಿಮಾ ನಟ & ನಟಿಯರ ಆಸ್ತಿ ಬಗ್ಗೆ ಜನರಿಗೂ ಕುತೂಹಲ ಹೆಚ್ಚಾಗಿ ಇರುತ್ತದೆ. ಹಾಗಾದ್ರೆ ಭಾರತದ ಅತ್ಯಂತ ಶ್ರೀಮಂತ ನಟಿ ಯಾರು? ಈ ನಟಿ ಬಳಿ 28 ಕೆಜಿ ಚಿನ್ನ & 10 ಸಾವಿರಕ್ಕೂ ಹೆಚ್ಚು ಸೀರೆ ಬಂದಿದ್ದು ಹೇಗೆ? ಐಶ್ವರ್ಯ ರೈ ಅಲ್ಲ, ಮಾಧುರಿನೂ ಅಲ್ಲ... ಹಾಗಾದ್ರೆ ಯಾರು ಭಾರತದ ಅತ್ಯಂತ ಶ್ರೀಮಂತ & ಸುಂದರ ನಟಿ? ಬನ್ನಿ ತಿಳಿಯೋಣ.
ಸಿನಿಮಾ ಅನ್ನೋದು ಒಂದು ಮಾಯಾಲೋಕ, ಅಲ್ಲಿ ದುಡ್ಡು ಇದೆ & ಅಪಾಯ ಕೂಡ ಇದೆ. ಜೀವನದಲ್ಲಿ ಕೋಟಿ ಕೋಟಿ ರೂಪಾಯಿ ದುಡ್ಡು ಮಾಡಬೇಕು, ಜೀವನ ಪೂರ್ತಿ ನೆಮ್ಮದಿಯಾಗಿ ಬದುಕಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಸಿನಿಮಾ ನಟ ಅಥವಾ ನಟಿಗೆ ಕೋಟಿ ಕೋಟಿ ರೂಪಾಯಿ ಹಣ ಬರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು.

28 ಕೆಜಿ ಚಿನ್ನ & 10 ಸಾವಿರಕ್ಕೂ ಹೆಚ್ಚು ಸೀರೆ!
ಅದರಲ್ಲೂ, ಈ ಹೀರೋ & ಹೀರೋಯಿನ್ ಆಗಿ ಹೋದರೆ ದುಡ್ಡು, ಬಂಗಾರದ ಸುರಿಮಳೆ ಗ್ಯಾರಂಟಿ ಎಂಬ ಮಾತುಗಳು ಸಿನಿಮಾ ಮಂದಿ ಬಾಯಲ್ಲೇ ಬರುತ್ತದೆ. ಹೀಗಿದ್ದಾಗ ಭಾರತದ ಶ್ರೀಮಂತ ನಟಿಯ ಬಳಿ 28 ಕೆಜಿ ಚಿನ್ನ & 10 ಸಾವಿರಕ್ಕೂ ಹೆಚ್ಚು ಸೀರೆ, ಸೇರಿದಂತೆ ₹5000 ಕೋಟಿ ರೂಪಾಯಿ ಆಸ್ತಿ ಇತ್ತು. ಆದರೆ, ಇಷ್ಟೆಲ್ಲಾ ಬಂಗಾರ, ಆಸ್ತಿ ಹೊಂದಿದ್ದ ಭಾರತದ ಶ್ರೀಮಂತ ನಟಿ ಯಾರು ಗೊತ್ತೆ? ಐಶ್ವರ್ಯ ರೈ & ಮಾಧುರಿ ಕೂಡ ಇವರ ಮುಂದೆ ಸಮ ಅಲ್ಲ!
ಹೌದು, ಐಶ್ವರ್ಯ ರೈ & ಮಾಧುರಿ, ಹೇಮಾಮಾಲಿನಿ, ದೀಪಿಕಾ ಪಡುಕೋಣೆ ಕೂಡ ಈ ನಟಿಯ ಎದುರು ಸಮರಲ್ಲ. ಅಂದಹಾಗೆ ತಮಿಳುನಾಡು ಮುಖ್ಯಮಂತ್ರಿ ಕೂಡ ಆಗಿದ್ದ ಕನ್ನಡ ನಾಡು ಮಂಡ್ಯ ಮೂಲದ ತಮಿಳು ಸಿನಿಮಾ ರಂಗದ ಹೀರೋಯಿನ್ ಜಯಲಲಿತಾ ಅವರೇ ಇಡೀ ಭಾರತ ಕಂಡ ಅತ್ಯಂತ ಶ್ರೀಮಂತ ನಟಿಯಾಗಿದ್ದರು. ಜಯಲಲಿತಾ ಅವರು ಭ್ರಷ್ಟಾಚಾರ ಆರೋಪಗಳನ್ನ ಎದುರಿಸಿ ಜೈಲಿಗೆ ಕೂಡ ಹೋಗಿ ಬಂದರು. ಹಾಗಾದ್ರೆ ಎಷ್ಟಿತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ & ತಮಿಳು ಸಿನಿಮಾ ರಂಗದ ಸೂಪರ್ ಹೀರೋಯಿನ್ ಜಯಲಲಿತಾರ ಒಟ್ಟು ಆಸ್ತಿ? ಮುಂದೆ ಓದಿ.
ಒಟ್ಟು ₹5000 ಕೋಟಿ ರೂಪಾಯಿ ಆಸ್ತಿ?
ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಅವರು ತಮ್ಮ ಆದಾಯಕ್ಕೆ ಮೀರಿದ ಆಸ್ತಿಯನ್ನ ಹೊಂದಿದ್ದರು ಎಂಬ ಗಂಭೀರ ಆರೋಪ ಇತ್ತು. ಅಂದಹಾಗೆ, 1997 ರಲ್ಲಿ ಜಯಲಲಿತಾರ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಹೀಗೆ ಆದಾಯ ತೆರಿಗೆ ಇಲಾಖೆಯ ರೇಡ್ ಆಗಿದ್ದ ಸಮಯದಲ್ಲಿ ಜಯಲಲಿತಾ ಅವರ ಬಳಿ ಸುಮಾರು ₹900 ಕೋಟಿ ರೂಪಾಯಿಗೂ ಹೆಚ್ಚಾಗಿ ಆಸ್ತಿ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಆದರೆ ಆ ಸಮಯದಲ್ಲಿ ಜಯಲಲಿತಾ ಅವರು ತಮ್ಮ ಬಳಿ ₹188 ಕೋಟಿ ರೂಪಾಯಿ ಆಸ್ತಿ ಇದೆ ಅಂತ ಹೇಳಿಕೊಂಡಿದ್ದರು. ಈ ಮೂಲಕ ಆಗಿನ ಕಾಲಕ್ಕೆ, ಅಂದ್ರೆ 1997ರ ಕಾಲಕ್ಕೆ 700 ಕೋಟಿ ರೂಪಾಯಿಗೂ ಹೆಚ್ಚು ಆದಾಯಕ್ಕೆ ಮೀರಿದ ಆಸ್ತಿಯು ಇತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನ ಸೇರಿ 750 ಜೋಡಿ ಚಪ್ಪಲಿಗಳು ಹಾಗೂ ಲೆಕ್ಕವಿಲ್ಲದಷ್ಟು ಬೆಲೆಬಾಳುವ ವಸ್ತುಗಳು ಜಯಲಲಿತಾ ಅವರ ಚೆನ್ನೈ ಮನೆಯಲ್ಲೇ ಸಿಕ್ಕಿದ್ದವು ಎಂದು ಆರೋಪ ಮಾಡಲಾಗಿತ್ತು.
ಈ ಆಸ್ತಿಯನ್ನು 1997ರ ಕಾಲದಿಂದ ಈಗಿನ ಕಾಲಕ್ಕೆ ಹೋಲಿಕೆ ಮಾಡಿದರೆ ಅದರ ಮೌಲ್ಯ ಸುಮಾರು ₹5000 ಕೋಟಿ ರೂಪಾಯಿ ಮೀರಿಸುತ್ತದೆ. ಈ ಮೂಲಕ ತಮಿಳುನಾಡು ಮಾಜಿ ಸಿಎಂ & ದಿವಂಗತ ಜಯಲಲಿತಾ ಅವರೇ ಭಾರತದ ಅತ್ಯಂತ ಶ್ರೀಮಂತ ನಟಿ ಎನ್ನಲಾಗುತ್ತೆ. ಈ ಮೂಲಕ ಕೊನೆಯವರೆಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಆಸ್ತಿ ವಿಚಾರದಲ್ಲಿ ದೊಡ್ಡ ವಿವಾದಗಳ ಮೂಲಕ ಸದ್ದು ಮಾಡಿದ್ದರು.
ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications