Mata Guruprasad: ಗುರುಪ್ರಸಾದ್ ಆತ್ಮಹ* ಪ್ರಕರಣ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸಂತಾಪ
ಸ್ಯಾಂಡಲ್‌ವುಡ್‌ನ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಗುರುಪ್ರಸಾದ್ ಅಗಲಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಕಿವಿ ಮಾತನ್ನೂ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, 'ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವುದು ತುಂಬಾ ದು:ಖದ ವಿಷಯ. ಉತ್ತಮ ನಿರ್ದೇಶಕನನ್ನು ಕಳೆದುಕೊಂಡಿದ್ದು ಮನಸ್ಸಿಗೆ ನೋವು ಉಂಟುಮಾಡಿದೆ. ಈ ಘಟನೆಯನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬಸ್ಥರಿಗೆ ಗುರುಪ್ರಸಾದ್ ಅವರನ್ನು ಕಳೆದುಕೊಂಡಿರುವ ದು:ಖ ಭರಿಸುವಂತಹ ಶಕ್ತಿ ಆ ಭಗವಂತ ಕರುಣಿಸಲಿ. ಜೊತೆಗೆ ಕನ್ನಡ ಚಿತ್ರರಂಗ ಬೇರೆ ಭಾಷೆಗಳ ಹೊಡೆತಕ್ಕೆ ಸಿಲುಕಿದೆ. ಯಾರೇ ಆಗಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಲಿ ಎಂಥಹ ಸಂದರ್ಭವೇ ಬರಲಿ ಧೈರ್ಯದಿಂದ ಎದುರಿಸಬೇಕು' ಎಂದರು.

5-6 ದಿನದ ಹಿಂದೆ ಆತ್ಮಹತ್ಯೆ ಶಂಕೆ- ಎಸ್‌ಪಿ ಸಿಕೆ ಬಾಬಾ
ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಅವರು ಮಾತನಾಡಿ, 'ಗುರುಪ್ರಸಾದ್ ಅವರನ್ನು ಲೇಬರ್ಸ್ ಐದಾರು ದಿನದ ಹಿಂದೆ ನೋಡಿದ್ದಾರೆ. ಅದಾದ ಬಳಿಕ ಅವರು ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಐದಾರು ದಿನದ ಹಿಂದೆ ಈ ಘಟನೆ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗುತ್ತಿದೆ. ಪರಿಶೀಲನೆ ನಡೆಸಿದ್ದಾರೆ. ಹಣಕಾಸು ವಿಚಾರದಲ್ಲಿ ಬೇಸರದಲ್ಲಿ ಇದ್ದರು ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ವಿಷಯಗಳು ಗೊತ್ತಾಗಲಿದೆ' ಎಂದರು.
ನನ್ನ ಗುರು ಗುರುಪ್ರಸಾದ್- ನಟ ತಬಲಾ ನಾಣಿ
ನಟ ತಬಲಾ ನಾಣಿ ಮಾತನಾಡಿ, 'ಗುರುಪ್ರಸಾದ್ ನನ್ನ ಗುರು. ನಮ್ಮನ್ನು ಬೆಳಸಿದ ಆಲದ ಮರ ಅದು.. ಅದು ತನಗೆ ತಾನೇ ಬೆಂಕಿ ಹಚ್ಚಿಕೊಂಡಿದೆ ಅಂದರೆ ನನಗೆ ನಂಬಲು ಆಗ್ತಾಯಿಲ್ಲ. ಜಗತ್ತಿನ ಬಗ್ಗೆ ಜ್ಞಾನ ಇರುವವರು ಯಾಕೆ ಹೀಗೆ ಮಾಡಿಕೊಂಡರು ಅನ್ನೋದೇ ಅರ್ಥ ಆಗ್ತಾಯಿಲ್ಲ. ಗೊಂದಲಕ್ಕೆ ಈಡಾದ್ರಾ, ಅವರ ಮನಸ್ಸಿಗೆ ಯಾರಾದ್ರು ಬೇಜಾರ್ ಮಾಡಿದ್ರಾ ಗೊತ್ತಾಗ್ತಿಲ್ಲ' ಎಂದರು.
'ಅವರು ಇಲ್ಲದ ವೇಳೆ ಕೆಟ್ಟದನ್ನು ಮಾತನಾಡಬಾರದು. ಕೆಲವರು ಮಾಧ್ಯಮದ ಮುಂದೆ ಮಾತನಾಡುವುದು ತುಂಬಾ ಬೇಸರ ಆಯ್ತು. ಅವರೊಂದಿಗೆ ತಿಂದು ಕುಡಿದು, ಮಜಾ ಮಾಡಿ ಅವರು ಖುಷಿಯಾಗಿ ಇದ್ದಾಗ ಚೆನ್ನಾಗಿ ಇದ್ದು ಅವರು ಇಲ್ಲದೇ ಇದ್ದಾಗ ಹೀಗೆ ಹೇಳುವುದು ಒಳ್ಳೆಯದಲ್ಲ' ಎಂದು ತಬಲಾ ನಾಣಿ ಹೇಳಿದರು.
'ತುಂಬಾ ಜ್ಞಾನ ಉಳ್ಳ ವ್ಯಕ್ತಿ ಗುರುಪ್ರಸಾದ್ ಅವರು. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಗೊತ್ತಿಲ್ಲ. ಸುಮಾರು ಜನ ಅವರನ್ನು ತಿದ್ದಲು ಸರಿಪಡಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅದು ಏನಾಗಿದೆ ನನಗೆ ಗೊತ್ತಿಲ್ಲಾ. ಹಲವಾರು ಸಿನಿಮಾ ಮಾಡಿ ಕೂಡ ಯಶಸ್ಸು ಆಗಿಲ್ಲ ಅಂತ ಬೇಸರ ಮಾಡಿಕೊಂಡ್ರಾ, ವೈಯಕ್ತಿ ಜೀವನದಲ್ಲಿ ಸಮಸ್ಯೆ ಇತ್ತಾ? ಹಣದ ಸಮಸ್ಯೆನಾ? ಏನಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಆರು ವರ್ಷದಿಂದ ಅವರನ್ನು ನೋಡಿಲ್ಲ' ಎಂದರು.
ಎರಡು ಮದುವೆ ಆಗಿದ್ದ ಗುರುಪ್ರಸಾದ್
ಗುರುಪ್ರಸಾದ್ ಎರಡು ಮದುವೆ ಆಗಿದ್ದರು. ಇಬ್ಬರೂ ಹೆಂಡತಿಗೆ ಒಂದೊಂದು ಹೆಣ್ಣು ಮಕ್ಕಳು ಇದ್ದಾರೆ. ಮೊದಲ ಪತ್ನಿಗೆ ಒಂದು ಹೆಣ್ಣು ಮಗು ಇದೆ. ಬಳಕ ಗುರುಪ್ರಸಾದ್ ಮೊದಲ ಪತ್ನಿಯೊಂದಿಗೆ ವಿಚ್ಚೇದನ ಪಡೆದಿದ್ದರು. ಎರಡನೇ ಪತ್ನಿಗೂ ಒಂದು ಹೆಣ್ಣು ಮಗು ಇದ್ದು, ಮತ್ತೊಂದು ಮಗುವಿಗೆ ಎರಡನೇ ಪತ್ನಿ ಗರ್ಭಿಣಿಯಾಗಿದ್ದು ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications