Mata Guruprasad: ಗುರುಪ್ರಸಾದ್‌ ಮಗುವಿಗೆ ಸಹಾಯ ಮಾಡುವ ಸಂಕಲ್ಪ ಮಾಡಿದ ಜಗ್ಗೇಶ್

ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾದ ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಗುರುಪ್ರಸಾದ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ಜಗ್ಗೇಶ್ ಕೂಡ ಬೇಸರಗೊಂಡಿದ್ದು ತಮ್ಮ ಹಾಗೂ ಗುರುಪ್ರಸಾದ್‌ ನಡುವಿನ ಒಡನಾಟದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ತಮಗಾದ ನೋವನ್ನು ಮರೆಯಲು ಗುರುಪ್ರಸಾದ್ ಅವರ ಮಗಳಿಗೆ ಸಹಾಯ ಮಾಡಲು ಜಗ್ಗೇಶ್ ನಿರ್ಧರಿಸಿದ್ದಾರೆ.

ಹೌದು... ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, 'ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ವಿಷಯ ಕೇಳುತ್ತಿದ್ದಂತೆ, ನಾನು ಒಂದು ಸಂಕಲ್ಪ ಮಾಡಿಕೊಂಡೆ. ಅವರ ಮಗುವಿಗೆ ಏನಾದರು ಸಹಾಯ ಮಾಡಬೇಕು ಎನ್ನುವ ಸಂಕಲ್ಪ ಮಾಡಿಕೊಂಡಿದ್ದೇನೆ. ಅದು ಏನು ಅನ್ನೋದನ್ನು ನಾನು ಈಗಲೇ ಹೇಳುವುದಿಲ್ಲ. ಅದನ್ನು ಹೇಳಲು ಬಾರದು' ಎಂದರು. 'ನನಗೆ ಗುರುಪ್ರಸಾದ್ ಅವರು ನಿರ್ದೇಶನದ ಕೆಲ ಸಿನಿಮಾಗಳು ಒಳ್ಳೆಯ ಹೆಸರು ತಂದು ಕೊಟ್ಟಿವೆ. ಆ ಋಣಕ್ಕಾದರೂ ನಾನು ಮುಂದೊಂದು ದಿನ ಅವರ ಮಗುವಿಗೆ ಸಹಾಯ ಮಾಡುತ್ತೇನೆ' ಎಂದರು.

Mata Guruprasad Incident Actor Jaggesh is determined to help Guruprasad child

ಮದ್ಯವ್ಯಸನಿಯಾಗಿದ್ದರು ಗುರುಪ್ರಸಾದ್!

ಗುರುಪ್ರಸಾದ್ ಇತ್ತೀಚೆಗೆ ತುಂಬಾ ಮದ್ಯವ್ಯಸನಿಯಾಗಿದ್ದರು. ಶೂಟಿಂಗ್ ಸ್ಪಾಟ್‌ಗಳಿಗೆ ಮದ್ಯದ ಬಾಟಲಿಯೊಂದಿಗೆ ಬರುತ್ತಿದ್ದರು. ಸಿಕ್ಕಾಪಟ್ಟೆ ಕುಡಿಯಲು ಶುರು ಮಾಡಿದ್ದರು. ಅವರಿಗೆ ಈ ಮೊದಲೇ ಮದುವೆ ಆಗಿತ್ತು. ಅರುಂಧತಿ ಮೊದಲ ಪತ್ನಿಯ ಹೆಸರು. ಅವರಿಗೆ ಮೊದಲನೇ ಪತ್ನಿಗೆ ಹೆಣ್ಣು ಮಗು ಇದೆ. ಅರುಂಧತಿ ಯೋಗಾಪಟು. ಆದರೆ ಗುರುಪ್ರಸಾದ್ ಅವರು ಜೊತೆ ವಿಚ್ಚೇದನ ಮಾಡಿಕೊಂಡರು. ಸಿನಿಮಾ ಮಾಡಲು ಬಂದ ಅಮಾಯಕ ಹುಡುಗಿ ಸುಮಿತ್ರಾ ಜೊತೆ ಲಿವಿಂಗ್ ಟುಗೆದರ್ ಮಾಡಿಕೊಂಡು ಅವಳಿಗೂ ಮಗು ಇದೆ. ನಾನು ಅವರ ದಾಂಪತ್ಯವನ್ನು ಸರಿ ಮಾಡಲು ತುಂಬಾ ಪ್ರಯತ್ನ ಮಾಡಿದೆ. ಗುರುಪ್ರಸಾದ್‌ಗೆ ಹೆಂಡತಿಗೆ ಕ್ಷಮೆ ಕೇಳು ಅಂತ ಹೇಳಿದ್ದೆ. ಆದರೆ ಅವನು ಅದನ್ನ ಮಾಡಲಿಲ್ಲ ಎಂದು ಜಗ್ಗೇಶ್ ಹೇಳಿದರು.

ಅವರೊಂದಿಗೆ ತುಂಬಾ ಕಹಿ ಘಟನೆಗಳು ಆಗಿದೆ. ಕುಡಿದು ಕೆಟ್ಟದಾಗಿ ಮಾತನಾಡಿ, ಬೆಳಿಗ್ಗೆ ಕರೆ ಮಾಡಿ ಕ್ಷಮಿಸಿ ಅಂತ ಹೇಳ್ತಾಯಿದ್ದ ಗುರುಪ್ರಸಾದ್. ಏನು ಹೇಳೋದು ಇಂಥವರಿಗೆ. ನಾನು ತುಂಬಾ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ಅವರೆಲ್ಲರಿಂದ ನಾನು ಕಲಿತ ಪಾಠ ಮೊದಲು ಮನುಷ್ಯನಾಗಿ ಬದುಕುವುದು. ಅವರೆಲ್ಲರು ಕಲಿಸಿದ ಜೀವನ ಪಾಠದಿಂದ ಇವತ್ತು ಮೋದಿ ಅವರೊಂದಿಗೆ ಕೆಲಸ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ ಎಂದು ಜಗ್ಗೇಶ್ ಹೇಳಿದರು.

ಆರಂಭದ ದಿನ ಗುರು ತುಂಬಾ ಡಿಸಿಪ್ಲೇನ್ ಇದ್ದ. ತುಂಬಾ ಓದುತ್ತಿದ್ದ. ಒಳ್ಳೆಯ ಕೆಲಸಗಾರರು ಅವನೊಂದಿಗೆ ಇದ್ದರು. ಅವನ ಈ ಕೆಟ್ಟ ಚಟಗಳಿಂದಾಗಿ ಅವರೆಲ್ಲರೂ ದೂರವಾಗಿ ಹೋದ್ರು. ನಮಗೂ ಕೂಡ ಕೊಡಬೇಕಾದ ಗೌರವ ಕೊಡಲಿಲ್ಲ. ಪ್ರೆಸ್‌ ಮೀಟ್‌ಗೆ ಕರೆಸಿ ಅಗೌರವದಿಂದ ನಡೆದುಕೊಂಡರು. ಆಗಿನಿಂದ ನಾನು ಅಂತರ ಕಾಯ್ದುಕೊಂಡೆ ಎಂದು ಜಗ್ಗೇಶ್ ಹೇಳಿದರು.

90 ಲಕ್ಷ ಸಾಲ

ಗುರುಪ್ರಸಾದ್ ಸಾಲಗಾರರ ಕಾಟಕ್ಕೆ ಬೇಸತ್ತು ವರ್ಷಕ್ಕೆ ಮೂರು ಮನೆ ಚೇಂಜ್ ಮಾಡಿದ್ದರು. ಬಸವೇಶ್ವರನಗರದಲ್ಲಿ ಬಾಡಿಗೆ ಮನೆ, ಜಯನಗರ ಕನಕನಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ನಂತ್ರ ಸಾಲಗಾರರು ಅಲ್ಲಿಗೆ ಬರಲು ಹೆಚ್ಚಾದಾಗ ಹೋಟೇಲ್ ನಲ್ಲಿ ವಾಸ ಮಾಡಲು ಶುರು ಮಾಡಿದ್ದರು. ದಾಸನಪುರ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡ್ತಾಯಿದ್ದರು. ಮಾದನನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. 90 ಲಕ್ಷ ಸಾಲ ಇದೆ ಅಂತ ಹೇಳಿದ್ದರು ಎಂದು ನಿರ್ಮಾಪಕ ಮೈಸೂರು ರಮೇಶ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+