Mata Guruprasad: ‘ಧನಂಜಯ್ ನೀನು ಸತ್ತೋಗು, ಸಿನಿಮಾಗೆ ಒಳ್ಳೆಯ ಪ್ರಚಾರ ಸಿಗುತ್ತೆ’ ಅಂತಾ ಡಾಲಿ ಧನಂಜಯ್‌ಗೆ...
ಡಾಲಿ ಧನಂಜಯ್ ಯಾರು ಅಂತಾ ನಿಮಗೆ ಗೊತ್ತಿರಬಹುದು, ಆದರೆ ಇದೇ ಡಾಲಿ ಧನಂಜಯ್ ಯಾರು? ಅಂತಾ ಕೇವಲ 10 ವರ್ಷಗಳ ಹಿಂದೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಯಾಕಂದ್ರೆ ಡಾಲಿ ಧನಂಜಯ್ ಆಗ ತಾನೆ ಇನ್ನೂ ಅಂಬೆಗಾಲು ಇಟ್ಟುಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿ ಬಾಗಿಲಿಗೆ ಬಂದಿದ್ದರು. ಆದರೆ ಇಂತಿಪ್ಪ ಕನ್ನಡಿಗರ ಅಚ್ಚುಮೆಚ್ಚಿನ ಡಾಲಿ ಧನಂಜಯ್ ಕೂಡ ಒಂದು ಕಾಲದಲ್ಲಿ ಮಠ ಗುರುಪ್ರಸಾದ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ರು! ಅದು ಸಾಯುವ...
ಮಠ ಗುರುಪ್ರಸಾದ್ ಎಲ್ಲರ ಜೊತೆಗೂ ಜಗಳ ಮಾಡಿಕೊಂಡ ಮನುಷ್ಯ, ಹಾಗೇ ತನಗೆ ಬಿಟ್ಟು ಬೇರೆ ಯಾರಿಗೂ ಬುದ್ಧಿ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ ಎಂಬ ಆರೋಪ ಮಾಡುತ್ತಿದ್ದಾರೆ ಅವರ ಜೊತೆಗಾರರು & ಹಳೆಯ ಸ್ನೇಹಿತರು. ಅದರಲ್ಲೂ ಡಾಲಿ ಧನಂಜಯ್ ಸಾಯುವಷ್ಟು ಖಿನ್ನತೆಗೆ ಕೂಡ ಜಾರಿದ್ದರು, ಅದಕ್ಕೆ ಕಾರಣ ಆಗಿದ್ದೇ ಮಠ ಗುರುಪ್ರಸಾದ್ ಸಹವಾಸ ಎಂಬ ಆರೋಪ ಇದೆ. ಇಂತಹ ಸಮಯದಲ್ಲೇ 'ಧನಂಜಯ್ ನೀನು ಸತ್ತೋಗು, ಸಿನಿಮಾಗೆ ಒಳ್ಳೆಯ ಪ್ರಚಾರ ಸಿಗುತ್ತೆ' ಅಂತಾ ಡಾಲಿ ಧನಂಜಯ್‌ಗೆ...

ಸಾಯಲು ಮುಂದಾಗಿದ್ದರಾ ಡಾಲಿ ಧನಂಜಯ್?
ಡಾಲಿ ಧನಂಜಯ್ ಈಗ ಏನೋ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡ್ತಿರಬಹುದು. ಆದರೆ ಇದೇ ಡಾಲಿ ಧನಂಜಯ್ 10 ವರ್ಷಗಳ ಹಿಂದೆ ಚಿತ್ರನ್ನಾ ತಿನ್ನೋದಕ್ಕೂ ಜೇಬಿನಲ್ಲಿ ಕಾಸು ಇಲ್ಲದೆ ನರಳಾಡಿದ್ದಾರೆ. ಡಾಲಿ ಧನಂಜಯ್ ಈಗ ಏನೋ ಬೆಂಝ್, ಆಡಿ, ರೇಂಜ್ ರೋವರ್ ಅಂತಾ ಓಡಾಡುತ್ತಾ, ಒಳ್ಳೆ ಬ್ರಾಂಡ್ ಸಿಗರೇಟ್ ಸೇದುತ್ತಾ ಇರಬಹುದು ಆದರೆ, 10 ವರ್ಷಗಳ ಹಿಂದೆ ಇದೇ ಡಾಲಿ ಧನಂಜಯ್ ಬೀಡಿ ಹೊಡೆಯುವುದಕ್ಕೂ ಪರದಾಡುತ್ತಿದ್ದರು ಅಂತಾ ಡಾಲಿ ಧನಂಜಯ್ ವಿರೋಧಿಗಳು ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಡಾಲಿ ಧನಂಜಯ್ ಸಾಯುವ ಸುದ್ದಿ...
ಡಾಲಿ ಧನಂಜಯ್ & ಮಠ ಗುರುಪ್ರಸಾದ್ ಸೇರಿ 'ಡೈರೆಕ್ಟರ್ ಸ್ಪೆಷಲ್' ಎಂಬ ಸಿನಿಮಾ ಕನ್ನಡ ಅಭಿಮಾನಿಗಳ ಎದುರಿಗೆ ತಂದರು. ಹೀಗೆ ಡೈರೆಕ್ಟರ್ ಮಠ ಗುರುಪ್ರಸಾದ್ ಅವರು, ಡಾಲಿ ಧನಂಜಯ್ ಎಂಬ ಅದ್ಭುತ ಪ್ರತಿಭೆಗೆ ಹೊಸ ಬಾಳು ಕೊಟ್ಟರು. ಹೀಗಿದ್ದರೂ ಇಂತಿಪ್ಪ ಡಾಲಿ ಧನಂಜಯ್ & ಮಠ ಗುರುಪ್ರಸಾದ್ ಕಿತ್ತಾಡಿದ್ದರು. ಹಾವು & ಮುಂಗುಸಿ ರೀತಿ ಬಡಿದಾಡಿದ್ದರು. ಅದರಲ್ಲೂ ಡಾಲಿ ಧನಂಜಯ್, ಇದೇ ಮಠ ಗುರುಪ್ರಸಾದ್ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
ಮಠ ಗುರುಪ್ರಸಾದ್‌ಗೆ ವಿಕೃತ ಮನಸ್ಸು?
ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂದ್ರೆ, ಡಾಲಿ ಧನಂಜಯ್ & ಮಠ ಗುರುಪ್ರಸಾದ್ ಸೇರಿ ನಟಿಸಿ ನಿರ್ದೇಶನ ಮಾಡಿದ್ದ '2ನೇ ಸಲ' ಸಿನಿಮಾ ಹೀನಾಯವಾಗಿ ಸೋತು ಬಾಕ್ಸ್ ಆಫಿಸ್‌ನಲ್ಲಿ ದಬಾಕ್ಕೊಂಡು ಹೋಗಿತ್ತು. ಆಗ ಡಾಲಿ ಧನಂಜಯ್ & ಮಠ ಗುರುಪ್ರಸಾದ್ ಮಧ್ಯೆ ದೊಡ್ಡ ಗಲಾಟೆ ನಡೆದಿತ್ತು. ಹೀಗಿದ್ದಾಗಲೇ ಡಾಲಿ ಧನಂಜಯ್ ಅವರು ಮಠ ಗುರುಪ್ರಸಾದ್ ವಿಕೃತ ಮನಸ್ಸಿನ ಬಗ್ಗೆ ಮಾತನಾಡಿದ್ದರು.
'ನಾನು ಡೈರೆಕ್ಟರ್ ಸ್ಪೆಷಲ್ ಸಿನಿಮಾಗಾಗಿ ಏನೆಲ್ಲಾ ತ್ಯಾಗ ಮಾಡಿದ್ದೆ, ಆದ್ರೆ ಮಠ ಗುರುಪ್ರಸಾದ್ ನನಗೆ ಹೋಗಿ ಸೂಸೈಡ್ ಮಾಡಿಕೋ. ನನ್ನ ಸಿನಿಮಾಗೂ ದೊಡ್ಡ ಪ್ರಮಾಣದಲ್ಲಿ ಒಳ್ಳೆಯ ಪ್ರಚಾರ ಸಿಗುತ್ತೆ' ಎಂದಿದ್ದರು ಎಂದು ಕೆಲವು ವರ್ಷಗಳ ಹಿಂದೆ ಡಾಲಿ ಧನಂಜಯ್ ಅವರು, ಮಠ ಗುರುಪ್ರಸಾದ್ ವಿರುದ್ಧ ಆರೋಪವನ್ನ ಮಾಡಿದ್ದರು. ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಮಠ ಗುರುಪ್ರಸಾದ್ ಬಗ್ಗೆ....
ಜಯನಗರ 4ನೇ ಬ್ಲಾಕ್ ಮೂಲಕ...
ಡಾಲಿ ಧನಂಜಯ್ ಬದುಕು ಹೇಗೆ ಆಗಿತ್ತು ಅಂದ್ರೆ, ಜೀವ & ಜೀವನ ಎರಡರ ಬಗ್ಗೆ ಕೂಡ ನಟ ಡಾಲಿ ಧನಂಜಯ್‌ಗೆ ನಿರೀಕ್ಷೆಗಳೇ ಇರಲಿಲ್ಲ. ಹೀಗಿದ್ದಾಗ ನಟ ಡಾಲಿ ಧನಂಜಯ್ ಆ ಸಮಯದಲ್ಲಿ ಏನಾದರೂ ಬೇರೆ ಮಾಡಬೇಕು ಅಂತಾ ಅಂದುಕೊಂಡಿದ್ದರು. ಅಲ್ಲದೆ ತನ್ನ ಬಗ್ಗೆ ಮಾತನಾಡಿದ್ದ ಮಠ ಗುರು ಪ್ರಸಾದ್‌ಗೆ ಉತ್ತರ ನೀಡಲು ಜಯನಗರ 4ನೇ ಬ್ಲಾಕ್... ಎಂಬ ಒಂದು ಶಾರ್ಟ್ ಮೂವಿ ಮಾಡುತ್ತಾರೆ ನಟ ಡಾಲಿ ಧನಂಜಯ್. ಕೊನೆಗೆ ಡಾಲಿಗೆ ಈ ಶಾರ್ಟ್ ಮೂವಿ ಅಥವಾ ಕಿರು ಚಿತ್ರದ ಮೂಲಕ ದೊಡ್ಡ ಹೆಸರು ಸಿಗುತ್ತದೆ. ಇದನ್ನೇ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದರು ಡಾಲಿ ಧನಂಜಯ್.












Click it and Unblock the Notifications