90'sನಲ್ಲಿ ಬಾಲ ಕಲಾವಿದರಿಗೆ ಇಂಜೆಕ್ಷನ್‌: ಮಾಸ್ಟರ್‌ ಆನಂದ್‌ ಹೇಳಿದ್ದೇನು?

ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಇದೀಗ ಕನ್ನಡದ ಬಹುಬೇಡಿಕೆಯ ನಟ, ನಿರ್ದೇಶಕ ಹಾಗೂ ನಿರೂಪಕ. ಈಗ ಅವರ ಮಗಳು ವಂಶಿಕಾ ಅಂಜನಿ ಕಶ್ಯಪ ಕೂಡ ತಂದೆಯಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾಮರಾ ಎದುರಿಸಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾಳೆ. ನನ್ನಮ್ಮ ಸೂಪರ್‌ ಸ್ಟಾರ್‌ ಶೋ ಮೂಲಕ ಮೊದಲು ಕ್ಯಾಮರಾ ಮುಂದೆ ಕಾಣಿಸಿಕೊಂಡ ವಂಶಿಕಾ ತನ್ನ ಮುದ್ದಾದ ಮಾತುಗಳು ಹಾಗೂ ನಟನೆಯಿಂದ ಜನರಿಗೆ ಚಿರಪರಿಚಿತರಾಗಿದ್ದಾಳೆ.

ಪುಟ್ಟ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ವಂಶಿಕಾ ಕೆಲ ಸಮಯದ ಹಿಂದೆ ಕಾಮಿಡಿ ಶೋ, ಕಿರು ಚಿತ್ರಗಳಲ್ಲಿ ನಟಿಸುತ್ತಾ ಮನೋರಂಜನಾ ಕ್ಷೇತ್ರದಲ್ಲಿ ಸಖತ್‌ ಬ್ಯೂಸಿಯಾಗಿದ್ದಳು. ಈ ಸಮಯದಲ್ಲಿ ಮಾಸ್ಟರ್‌ ಆನಂದ್ ದಂಪತಿ, ಮಗಳು ವಂಶಿಕಾಳಿಂದ ಚಿಕ್ಕ ವಯಸ್ಸಿನಲ್ಲೇ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಕಮೆಂಟ್‌ನಲ್ಲಿ ಆರೋಪ ಮಾಡಿದ್ದರು. ಇದೀಗ ಮೊದಲ ಬಾರಿಗೆ ಮಾಸ್ಟರ್‌ ಆನಂದ್‌ ಈ ಬಗ್ಗೆ ಮೌನ ಮುರಿದಿದ್ದು, ಈ ವೇಳೆ ತಮ್ಮ ಬಾಲ್ಯದ ಸಮಯದಲ್ಲಿ ಬಂದ ದೊಡ್ಡ ಆರೋಪದ ಬಗ್ಗೆ ಮಾತನಾಡಿದ್ದಾರೆ.

Master Anand Talks About Allegations of Injecting Child Artist in 90 s

'ನಾವು ಯಾವುದೇ ಒಂದು ಹೆಜ್ಜೆ ಇಡಬೇಕಾದರೆ ಅದರ ಮುಂದಿನ ಐದು ಹೆಜ್ಜೆಯ ಅಂದಾಜು ಇರಬೇಕು. ನನ್ನ ಮಗಳು ರಿಯಾಲಿಟಿ ಶೋಗೆ ಬಂದ ಮೇಲೆ ನನ್ನ ಮಗಳ ಕೈಯಲ್ಲಿ ದುಡಿಸಿಕೊಳ್ಳುತ್ತಿದ್ದೇವೆ ಎಂದು ಆರೋಪ ಮಾಡುತ್ತಾರೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಇದೇ ಅಪವಾದ ನಮ್ಮ ತಂದೆಗೂ ಬಂದಿತ್ತು. ಇನ್ನೂ ಎನೇನೋ ಆರೋಪವೆಲ್ಲಾ ಬಂದಿತ್ತು.

ಮಾಸ್ಟರ್‌ ಮಂಜುನಾಥ್‌ ಅವರಿಗೂ ಕೂಡ ಈ ರೀತಿಯ ಆರೋಪ ಬಂದಿತ್ತು. ಅವರ ತಂದೆಯೂ ಈ ರೀತಿಯ ಅಪವಾದಗಳನ್ನು ಎದುರಿಸಿದ್ದರು. ಅವರು ಕೂಡ ನನ್ನ ಬಳಿ ಈ ವಿಚಾರ ಹಂಚಿಕೊಂಡಿದ್ದರು. ನನಗೂ ಏನೇನೋ ಆರೋಪ ಬಂದಿತ್ತು. ಆಮೇಲೆ ಇವರಿಗೇನೋ ಇಂಜಕ್ಷನ್‌ ಕೊಡುತ್ತಾರೆ. ಬೆಳೆಯದೇ ಇರುವ ತರ. ಎಷ್ಟು ವರ್ಷವಾದರೂ ಬಾಲ ಕಲಾವಿದರಾಗಿಯೇ ಉಳಿಯಲಿ ಎಂದು ಇಂಜಕ್ಷನ್‌ ಕೊಡುತ್ತಾರೆ ಎನ್ನುವ ಆರೋಪ ಎಲ್ಲಾ ಮಾಡಿದ್ದರು. ಇದೆಲ್ಲಾ ಬರೀ ಸುಳ್ಳು' ಎಂದು ಮಾಸ್ಟರ್‌ ಆನಂದ್‌ ಹೇಳಿದರು.

ಈ ವೇಳೆ ಯಶಸ್ವಿನಿ ಮಾಸ್ಟರ್‌ ಆನಂದ್‌ 'ನಮ್ಮ ಮಗಳು ವಂಶಿಕಾಗೂ ಕೂಡ ಈ ರೀತಿಯ ಕಮೆಂಟ್‌ ಮಾಡುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಮಾತು ಮುಂದುವರಿಸಿದ ಮಾಸ್ಟರ್‌ ಆನಂದ್‌ 'ಈ ರೀತಿಯ ಆರೋಪಗಳೆಲ್ಲಾ ಶುದ್ಧ ಸುಳ್ಳು. ಮಕ್ಕಳ ಬೆಳವಣಿಗೆಯಲ್ಲಾ ಫ್ಯಾಮಿಲಿ ಜೀನ್‌ ಮೇಲೆ ಹೋಗುತ್ತದೆ. ನನ್ನ ಮಗ ಈಗ ಎಂಟನೇ ತರಗತಿಯಷ್ಟೇ ಆದರೆ ನನಗಿಂತ ಎತ್ತರವಾಗಿದ್ದಾನೆ. ಅವನು ಅವರ ತಾಯಿಯ ಅಣ್ಣ ಅಂದರೆ ಸೋದರ ಮಾವನಂತೆ ಇದ್ದಾನೆ. ಅವನ ಮೈ ಕಾಲು ಕೈಯಲ್ಲಾ ಅವರ ತಾಯಿ ಫ್ಯಾಮಿಲಿಯಂತೆ. ಅವನು ನೋಡಲು ನನ್ನಂತೆ ಆದರೆ ದೇಹ ರಚನೆ ತಾಯಿ ಫ್ಯಾಮಿಲಿ ಅಂತೆ. ಆದರೆ ಮಗಳು ನನ್ನ ರೀತಿ ಇದ್ದಾಳೆ' ಎಂದು ಮಾಸ್ಟರ್‌ ಆನಂದ್‌ ವಿಶ್ವವಾಣಿ ಟಿವಿ ಸ್ಪೆಷಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+