ಸಲ್ಲುಗೆ ಮ್ಯಾರೇಜ್ ಬ್ಯೂರೋ ಬರ್ತಡೇ ವಿಶ್: ಹುಡುಗಿಯನ್ನು ಹುಡುಕಿ ಎಂದ ನೆಟ್ಟಿಗರು!
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಹುಟ್ಟಿದ ಹಬ್ಬವನ್ನು ಅವರ ಅಭಿಮಾನಿಗಳು ನಿನ್ನೆಯಷ್ಟೇ ಅದ್ಧೂರಿಯಾಗಿ ಆಚರಿಸಿದರು. ಅವರ ಹುಟ್ಟುಹಬ್ಬಕ್ಕೆ ದೊಡ್ಡ ದೊಡ್ಡ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕಿರುವುದು ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬಂದಿದೆ. ಎಲ್ಲಾ ವಯಸ್ಸಿನವರನ್ನು ಸೆಳೆಯುವ ಸಲ್ಮಾನ್ ಖಾನ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ನಾನಾ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ಹಾಗೂ ವಿಶೇಷವಾಗಿ ಬ್ಯಾನರ್‌ಗಳನ್ನು ಮಾಡಿಸಿದ್ದು ಕಂಡು ಬಂದಿದೆ. ಹೀಗೆ ಸಲ್ಲು ಬಾಯ್ ಹುಟ್ಟುಹಬ್ಬಕ್ಕೆ ಮ್ಯಾರೇಜ್ ಬ್ಯೂರೋವೊಂದು ಶುಭಾಶಯವನ್ನು ತಿಳಿಸಿದೆ. ಈ ವಿಶ್‌ನ್ನು ಫ್ಲೆಕ್ಸ್ ಮೂಲಕ ಮಾಡಿಸಲಾಗಿದ್ದು ನೋಡುಗರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.

ಅಷ್ಟಕ್ಕೂ ಆ ಮ್ಯಾರೇಜ್ ಬ್ಯೂರೋ ಫ್ಲೆಕ್ಸ್‌ನಲ್ಲಿ ಏನಿದೆ ಗೊತ್ತಾ?
ಹ್ಯಾಪಿ ಬರ್ತಡೆ
ಸಲ್ಮಾನ್ ಖಾನ್ (ಸಲ್ಲು)
ಪ್ರಖ್ಯಾತ ಚಲನಚಿತ್ರ ನಟ
ಶುಭ ಕೋರುವವರು
ಸುಮಂಗಳ ಮ್ಯಾರೇಜ್ ಬ್ಯೂರೋ
ಶೀಘ್ರ ವಿವಾಹಕ್ಕಾಗಿ ಸಂಪರ್ಕಿಸಿ
ಉರ್ವ, ಚಿಲಿಂಬಿ, ಮಂಗಳೂರು

ಎಂದು ಶುಭಾಶಯ ತಿಳಿಸಲಾಗಿದೆ. ಹೇಳಿ ಕೇಳಿ ಸಲ್ಮಾನ್ ಖಾನ್‌ಗೆ ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಅವರು ಮದುವೆ ಯಾವಾಗ ಆಗ್ತಾರೆ ಅನ್ನೋದನ್ನು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಸುಮಂಗಳ ಮ್ಯಾರೇಜ್ ಬ್ಯೂರೋ ಅವರಿಗೆ ಶುಭ ಕೋರಿದ್ದು ನಗಪಾಟಲಿಗೆ ಗುರಿಯಾಗಿದೆ. ಹೀಗಾಗಿ ನೆಟ್ಟಿಗರು ಸಲ್ಮಾನ್ ಖಾನ್ ಅವರಿಗೆ ಹುಡುಗಿಯನ್ನು ಹುಡುಕಿ ಎಂದು ಸುಮಂಗಳ ಮ್ಯಾರೇಜ್ ಬ್ಯೂರೋಗೆ ಸಲಹೆಯನ್ನು ನೀಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.












Click it and Unblock the Notifications