Amulya Gowda: ಕೊನೆಗೂ ರಿವೀಲ್‌ ಆಯ್ತು ಶ್ರೀಗೌರಿ ಲವ್‌ ಸೀಕ್ರೇಟ್‌: ಹುಡುಗ ಯಾರು?

ಮನೋರಂಜನಾ ಕ್ಷೇತ್ರದಲ್ಲಿ ಕಿರುತೆರೆ ಅತಿದೊಡ್ಡ ವೇದಿಕೆ. ಇಲ್ಲಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳದ್ದೇ ಕಾರುಬಾರು. ಅದರಲ್ಲೂ ಪ್ರತಿ ದಿನ ಪ್ರಸಾರವಾಗುವ ಧಾರವಾಹಿಗಳದ್ದೇ ಕಿರುತೆರೆಯಲ್ಲಿ ಮೇಲು ಗೈ. ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರಸಾರವಾಗುವ ಧಾರಾವಾಹಿ ವೀಕ್ಷಿಸಲು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಧಾರಾವಾಹಿ ವೀಕ್ಷಕರ ಬಳಗಕ್ಕೆ ವಯಸ್ಸಿನ ಮಿತಿ ಇಲ್ಲ. ದೊಡ್ಡವರಿಂದ ಚಿಕ್ಕವರ ತನಕ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ.

ಹೀಗಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ನಟ-ನಟಯರಿಗೆ ಬಹಳ ಜನಪ್ರಿಯತೆ ಇದೆ. ಕನ್ನಡ ಕಿರುತೆರೆ ಮೂಲಕ ನಟನೆ ಆರಂಭಿಸಿ ಚಿತ್ರರಂಗಗಳಲ್ಲಿ ಮಿಂಚಿದ, ಈಗಲೂ ಮಿಂಚುತ್ತಿರುವ ನಟ-ನಟಿಯರು ಅನೇಕರಿದ್ದಾರೆ. ಇನ್ನೂ ಕೆಲವರು ಕನ್ನಡ ಕಿರುತೆರೆಯಲ್ಲೇ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡು ಇತರ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಈ ಪೈಕಿ ನಟಿ ಅಮೂಲ್ಯ ಗೌಡ ಒಬ್ಬರು.

Love Gossip Spreading About Actress Amulya gowda And Actor Niranjan BS

ಅರಮನೆ, ಕಮಲಿ, ಬಿಗ್ ಬಾಸ್ ಶೋ ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿಯಾಗಿ ಮತ್ತೆ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಕಮಲಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದ ಪ್ಯಾಟೆ ಹುಡುಗಿ ಅಮೂಲ್ಯ ಗೌಡ, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಕಳೆದಿದ್ದರು.

ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರುವಾಗಿರುವ ನಟಿ ಅಮೂಲ್ಯ ಗೌಡ ವೈಯಕ್ತಿಕ ವಿಚಾರವಾಗಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ನಟಿ ಅಮೂಲ್ಯ ಗೌಡ ಪ್ರೀತಿಯಲ್ಲಿ ಬಿದ್ದಿದ್ದು, ಕನ್ನಡ ಕಿರುತೆರೆಯ ನಟನನ್ನೇ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್‌ ಬಿಎಸ್‌ ಹಾಗೂ ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಗುಡ್‌ನ್ಯೂಸ್‌ ಕೊಡಲಿದ್ದಾರೆ ಎನ್ನುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Love Gossip Spreading About Actress Amulya gowda And Actor Niranjan BS

ಇನ್ನು ಈ ಬಗ್ಗೆ ನಟಿ ಅಮೂಲ್ಯ ಗೌಡ ಆಗಲೀ, ನಟ ನಿರಂಜನ್‌ ಬಿಎಸ್‌ ಆಗಲೀ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗೆ ತೆಲುಗು ಶೋವೊಂದರಲ್ಲಿ ನಟಿ ಅಮೂಲ್ಯ ಗೌಡ ವೇದಿಕೆ ಮೇಲೆ ನಿರಂಜನ್‌ ಕರೆ ಮಾಡಿ ಮೊದಲು ಕನ್ನಡದಲ್ಲಿ ನಾನು ಶೋನಲ್ಲಿದ್ದೇನೆ ಎಂದು ಹೇಳಿ ಮಾತು ಶುರು ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಇದರಿಂದ ರಿಷಿ-ಕಮಲಿ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗಿದೆ. ಅದೇನೆ ಇರಲಿ ತೆರೆ ಮೇಲೆ ಕ್ಯೂಟ್‌ ಕಪಲ್‌ ಎನಿಸಿಕೊಂಡಿರುವ ಈ ಜೋಡಿ ನಿಜ ಜೀವನದಲ್ಲಿಯೂ ಜೋಡಿಯಾಗಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+