Bigg Boss: ಬಿಗ್‌ಬಾಸ್‌ ಮನೆಯಿಂದ ಲಾಯರ್‌ ಜಗದೀಶ್‌ ಔಟ್‌.?

ಬೆಂಗಳೂರು, ಅಕ್ಟೋಬರ್‌ 04: ಸಿಟ್ಟಿನ ವ್ಯಕ್ತಿತ್ವ, ಮಾತುಗಾರ. ಏಕವಚನಗಳು ಲಾಯರ್‌ ಜಗದೀಶ್‌ ಅವರಿಗೆ ತೀರಾ ಸಾಮಾನ್ಯ. ‌ ಬಿಗ್‌ ಬಾಸ್‌ ಆರಂಭವಾಗಿ ಒಂದು ವಾರ ಕಳೆಯುವ ಮೊದಲೇ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಗಲಾಟೆ ಹೆಚ್ಚಾಗಿದೆ.

ಲಾಯರ್‌ ಜಗದೀಶ್‌ ಗಲಾಟೆಗೆ ಬಿಗ್‌ ಬಾಸ್‌ ನ ಇಡೀ ಮಂದಿ ಲಾಯರ್‌ ಜಗದೀಶ್‌ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಮನೆ ಮಂದಿಗಳ ಜೊತೆಗೆ ಗಲಾಟೆ ಮಾಡುತ್ತಾ, ಕಿತ್ತಾಟ ಆಡುತ್ತಲೇ ಇಡೀ ಮನೆ ಮಂದಿಯ ನೆಮ್ಮದಿ ಹಾಳುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ..

Lawyer Jagadish will be eliminated from Bigg Boss Kannada

ಕಳೆದು ಹತ್ತು ಸೀಸನ್‌ ಗೆ ಹೋಲಿಸಿದರೇ ಈ ಬಾರಿಯ ಸೀಸನ್‌ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲಕಾರಿಯಾಗುತ್ತಿದೆ.ಮನೆಯವರ ಕೆಲವರ ವರ್ತನೆಗೆ ಮನೆ ಮಂದಿಯ ನೆಮ್ಮದಿ ಹಾಳಾಗುತ್ತಿದೆ. ಯಾವುದೇ ವಿಚಾರವಾದ್ರೂ ಸಹ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬರುತ್ತಿದ್ದ ಲಾಯರ್‌ ಜಗದೀಶ್‌ ಅವರು ಹೊರಗೆ ಎಷ್ಟು ರೆಬಲ್‌ ಆಗಿದ್ದರೋ ಅಷ್ಟೇ ಆಂಗ್ರಿಮ್ಯಾನ್‌ ಆಗಿ ಬಿಗ್‌ ಬಾಸ್‌ ಮನೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಇನ್ನೂ ದೊಡ್ಮನೆಯಲ್ಲಿ ಕ್ಯಾಮಾರಾಗಳ ಮುಂದೆ ಬಂದು ಲಾಯರ್‌ ಜಗದೀಶ್‌ ಅವರು ಬಿಗ್‌ಬಾಸ್‌ಗೆ ಅವಾಜ್‌ ಹಾಕಿದ್ದಾರೆ. ನನಗೆ ನಾನೇ ಬಿಗ್‌ಬಾಸ್‌. ನನ್ನನ್ನು ಹೊರಗೆ ಕಳಿಸೋದು ಬೆಸ್ಟ್.. ಇಲ್ಲಾ ಅಂದ್ರೆ ಅಂತ ಸಿಟ್ಟಿನಲ್ಲಿ ಬಿಗ್‌ಬಾಸ್‌ಗೆ ಅವಾಜ್‌ ಹಾಕಿದ್ದಾರೆ. ನಾನು ಮನಸ್ಸು ಮಾಡಿದರೆ ನಿಮಗೆಲ್ಲಾ ಹೆಲಿಕಾಪ್ಟರ್‌ನಲ್ಲಿ ಊಟ ತರಿಸ್ತೀನಿ, ನನಗೆ ನಾನೇ ಬಿಗ್‌ ಬಾಸ್‌ ಅಂತ ಕೊಚ್ಚಿಕೊಂಡಿದ್ದಾರೆ.. ಈ ಕುರಿತ ದೃಶ್ಯ ಇತ್ತೀಚಿಗೆ ರಿಲೀಸ್‌ ಆದ ಪ್ರೋಮೋದಲ್ಲಿದೆ..

ಇತ್ತೀಚಿಗೆ ಮನೆ ಮಂದಿ ಜೊತೆ ಜಗಳಕ್ಕೆ ಬಿದ್ದ ಲಾಯರ್‌ ಜಗದೀಶ್‌ ಕ್ಯಾಮರಾಗೆ ಮುಂದೆ ಬಂದ ಲಾಯರ್‌, ನನಗೆ ಇಲ್ಲಿ ಇರಲು ಇಷ್ಟವಿಲ್ಲ, ನನ್ನ ಹೊರಗೆ ಕಳುಹಿಸಿ.ಇಲ್ಲದಿದ್ದರೆ, ಒಳಗಡೆ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರಿ ಎಲ್ಲವೂ ಎಕ್ಸ್‌ಪೋಸ್‌ ಮಾಡುತ್ತೇನೆ, ನಾನು ಸರ್ಕಾರವನ್ನೇ ಅಲುಗಾಡಿಸುವ ವ್ಯಕ್ತಿ ಅಂತ ಕ್ಯಾಮಾರದ ಮುಂದೆ ಜಗದೀಶ್‌ ಅವರು ಅವಾಜ್‌ ಹಾಕಿದ್ದಾರೆ..

ಇನ್ನೂ ಈ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರನ್ನು ಬೇರೆ ಇಡಿ, ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ನಡೆಸುತ್ತೀರಾ..?, ನನ್ನನ್ನು ಹೊರಗೆ ಕಳಿಸಿ ಲಾಯರ್‌ ಜಗದೀಶ್‌ ಕೂಗಾಡಿದ್ದಾರೆ.

ಇನ್ನು ಲಾಯರ್‌ ಜಗದೀಶ್‌ ಅವರ ಅತಿಯಾದ ವರ್ತನೆ ನೋಡುಗರಿಗೆ ಬೇಸರ ತರಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜಗದೀಶ್‌ ವಿರುದ್ಧ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಲಾಯರ್‌ ಜಗದೀಶ ವಿರುದ್ದ ಕಿಡಿಕಾರಿದ್ದು, ಜಗದೀಶ್ ಅವರನ್ನು ಬಿಗ್ ಬಾಸ್‌ಗೆ ಕರೆದುಕೊಂಡು ಬಂದಿದ್ದು ದೊಡ್ಡ ತಪ್ಪು.. ಬಿಗ್‌ ಬಾಸ್‌ ಈ ಸ್ಪರ್ಧಿಯನ್ನು ಎಲಿಮಿನೇಟ್‌ ಮಾಡಿ ಆಚೆ ಕಳಿಸಲಿಲ್ಲ ಅಂದ್ರೆ ನಿಮಗೆ ಮರ್ಯಾದೆ ಇರೋದಿಲ್ಲ ಸೇರಿದಂತೆ ಹಲವಾರು ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಒಟ್ನಾಲಿ ಬಿಗ್‌ ಬಾಸ್‌ ಸೀಸನ್‌ 11 ರ ಕಾರ್ಯಕ್ರಮ ಶುರುವಾಗಿ 5 ದಿನ ಕಳೆಯುತ್ತಾ ಬಂದಿದ್ದು, ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಮತ್ತು ವಕೀಲ ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಹೆಚ್ಚಿದೆ. ಲಾಯರ್‌ ಜಗದೀಶ್‌ ಅವರು ಆಡಿದ ಮಾತಿನ ಕುರಿತು ನಟ ಸುದೀಪ್‌ ಅವರು ವಿವರಣೆಯನ್ನ ಕೇಳಲಾಗಿದ್ದಾರೆ. ಅಲ್ಲದೇ ಸುದೀಪ್‌ ಅವರಿಗೆ ಲಾಯರ್‌ ಜಗದೀಶ್‌ ವಿಚಾರವಾಗಿ ತಲೆ ಕೆಟ್ರೆ ಲಾಯರ್‌ ಲಗೇಜ್‌ ಸಮೇತ ಮನೆಗೆ ಹೋಗಬೇಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+