Darshan Thoogudeepa: ಏನ್ರೀ ಮೀಡಿಯಾ ಅಂತಾ ಮಾಧ್ಯಮಗಳ ಮೇಲೆ ದರ್ಶನ್ ತೂಗುದೀಪ್ ಅಭಿಮಾನಿಗಳಿಂದ ಹಲ್ಲೆ...

ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗಡೆ ಬಂದಿದ್ದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕಂಟಕ ತಪ್ಪುತ್ತಿಲ್ಲ. 'ಡಿ-ಬಾಸ್' ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಹೇಳಿಕೊಳ್ಳುವ ಕೆಲವರು, ಮಾಧ್ಯಮಗಳು & ಪೊಲೀಸರಿಗೆ ಆವಾಜ್ ಹಾಕುತ್ತಿರುವ ಆರೋಪ ಕೇಳಿ ಬಂದಿದೆ.

ಅದರಲ್ಲೂ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ, ನಮ್ಮ ಬೆಂಗಳೂರಿಗೆ ಬಂದ ದಿನವೇ, ಕೆಲ ವಿಕೃತ ಮನಸ್ಕರು ಏನ್ರೀ ಮೀಡಿಯಾ ಅಂತಾ ಮಾಧ್ಯಮಗಳ ಮೇಲೆ ಹಲ್ಲೆ ನಡೆಸಲು ಬಂದಿದ್ದರು ಎನ್ನುವ ಗಂಭೀರ ಆರೋಪವು ಕೇಳಿ ಬಂದಿದೆ. ಈ ಕುರಿತು ಖುದ್ದು ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ...

Lawyer Jagadish Said This To The Darshan Thoogudeepa Fans

ಮಾಧ್ಯಮಗಳ ಮೇಲೆ ದರ್ಶನ್ ಫ್ಯಾನ್ಸ್ ಹಲ್ಲೆ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಕರ್ನಾಟಕದ ಕೋಟ್ಯಂತರ ಅಭಿಮಾನಿಗಳಿಗೆ ಅಭಿಮಾನ ಇದೆ. ಆದರೆ ಯಾರೋ ಕೆಲವರು ಮಾಡುತ್ತಿರುವ ಕಿರಿಕ್ ಕೆಲಸವೇ ಈಗ ದರ್ಶನ್ ತೂಗುದೀಪ್ ಅವರಿಗೆ ಕಂಟಕ ತರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ನಟ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವುದು ಷರತ್ತಿನ ಮೇಲೆ.

ಹೀಗೆ ಇದ್ದಾಗ, ನಾವು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತ ಹೇಳುವ ಕೆಲವರು ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿದೆ. ಖುದ್ದಾಗಿ ಲಾಯರ್ ಜಗದೀಶ್ ಅವರೇ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ! ಹಾಗಿದ್ರೆ ಲಾಯರ್ ಜಗದೀಶ್ ಅವರು ಹೇಳಿರುವುದು ಏನು? ಮುಂದೆ ವಿಡಿಯೋ ನೋಡಿ.

ದರ್ಶನ್ ತೂಗುದೀಪ್ ಫ್ಯಾನ್ಸ್‌ಗೆ ಪೊಲೀಸರ...

ಲಾಯರ್ ಜಗದೀಶ್ ಅವರು, ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಹುಚ್ಚಾಟವನ್ನ ಮಾಡಿರುವ ಕೆಲವರಿಗೆ ಹೀಗೆ ಎಚ್ಚರಿಕೆ ನೀಡಿದ್ದಾರೆ. ನೋಡಿದ್ರಲ್ಲ ವಿಡಿಯೋ, ಈ ವಿಡಿಯೋ ಮೂಲಕ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಅಲ್ಲದೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಿರುವ ಲಾಯರ್ ಜಗದೀಶ್, ಜನರಿಗೆ & ಮಾಧ್ಯಮದವರಿಗೆ ತೊಂದರೆ ನಿಡುತ್ತಿರುವ ಕೆಲವು ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು. ಹೀಗಾಗಿ ಬೆಂಗಳೂರು ಪೊಲೀಸ್ ಪಡೆ ಅಂತಹ ಕಿರಿಕ್ ಮಾಡುವ & ಅಭಿಮಾನದ ಹೆಸರಲ್ಲಿ ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕುದುರೆ ಮೇಲಿಂದ 11 ವರ್ಷಗಳ...

2013ರ ಸಮಯದಲ್ಲಿ ಸಿನಿಮಾ ಶೂಟಿಂಗ್ ಒಂದು ನಡೆಯುವ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಅವರು ಕುದುರೆ ಮೇಲಿಂದ ಜಾರಿ ಬಿದ್ದಿದ್ದರು. ಬೃಂದಾವನ ಸಿನಿಮಾ ಶೂಟಿಂಗ್ ಸಮಯದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಓಡಾಡ್ತಿದೆ. ಹೀಗೆ ಸುಮಾರು 11 ವರ್ಷದ ಹಿಂದೆ ಬಿದ್ದು ನೋವು ಮಾಡಿಕೊಂಡಿದ್ದರಂತೆ ದರ್ಶನ್ ತೂಗುದೀಪ್ ಅವರು, ಹೀಗಾಗಿ ಅವರಿಗೆ ಇದೀಗ ಬೆನ್ನು ನೋವು ಜೋರಾಗಿದೆ. ಈ ಸಮಯದಲ್ಲಿ ಕೆಲವರು ಅಭಿಮಾನದ ಹೆಸರಲ್ಲಿ ಮತ್ತೆ ಮತ್ತೆ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ತರುತ್ತಿದ್ದಾರೆ ಎಂಬ ಆರೋಪ ಕೇಳಿಬರ್ತಿದೆ.

ಡಿ-ಬಾಸ್ ಬೇಗ ಗುಣಮುಖರಾಗಲಿ...

ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+