Guruprasad: ಗುರು ಸಾವಿನಲ್ಲಿ ನಟ ಜಗ್ಗೇಶ್ ವಿಕೃತಿ, ನೀನು ಮನುಷ್ಯನಾ?: ಲಾಯರ್ ಜಗದೀಶ್ ವಿಡಿಯೋ
ಬೆಂಗಳೂರು, ನವೆಂಬರ್ 04: ಕನ್ನಡ ಸಿನಿಮಾ ನಿರ್ದೇಶಕ ಮಠ ಖ್ಯಾತಿಯ ಗುರುಪ್ರಸಾದ್ ಅವರು ಆತ್ಮಹ* ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ದೊರೆತಿದೆ. ಇದಾದ ಬಳಿಕ ಒಂದಷ್ಟು ಸಿನಿಮಾ ಕಲಾವಿದರು, ಅವರೊಂದಿಗೆ ಮೊದಲು ಒಡನಾಟದಲ್ಲಿದ್ದವರು ಮಾತನಾಡಿದ್ದಾರೆ. ಗೊತ್ತಿಲ್ಲದ ವಿಷಯಗಳನ್ನು ತಿಳಿಸಿದ್ದಾರೆ. ಇದೇ ವೇಳೆ ನಟ ನವರಸನಾಯಕ ಹಾಗೂ ಬಿಜೆಪಿ ಸಂಸದ ಜಗ್ಗೇಶ್ ಅವರು ಗುರುಪ್ರಸಾದ್ ವ್ಯಕ್ತಿತ್ವ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಅವರ ಹೇಳಿಕೆಗಳ ವಿರುದ್ಧ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ತೀವ್ರ ಬೇಸರ ಹೊರ ಹಾಕಿದ್ದಾರೆ.
ಗುರುಪ್ರಸಾದ್ ಬಗ್ಗೆ ಹಲವು ವಿಚಾರ ಹಂಚಿಕೊಂಡಿರುವ ನಟ ಜಗ್ಗೇಶ್ ಅವರ ಕುರಿತು ಲಾಯರ್ ಜಗದೀಶ್ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಜಗ್ಗೇಶ್ vs ಜಗದೀಶ್ ಎಂದು ಮಾತನಾಡುತ್ತಿದ್ದಾರೆ. ಸತ್ತ ವ್ಯಕ್ತಿಯ ಬಗ್ಗೆ ಅವರ ಸಾವಿನಲ್ಲಿ ವಿಕೃತಿ ಕಾಣಬಹುದು ಎಂಬುದನ್ನು ನಿನ್ನಿಂದ ಕಲಿಯಬೇಕು ಎಂದು ಜಗದೀಶ್ ಅವರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಏಕವಚನದಲ್ಲಿ ಲಾಯರ್ ಜಗದೀಶ್ ತರಾಟೆ
ಸತ್ತ ವ್ಯಕ್ತಿಯೊಬ್ಬರ ಬಗ್ಗೆ ಅದೆಂಥಾ ವಿಶ್ಲೇಷಣೆ ನಿಮ್ಮದು ಜಗ್ಗೇಶ್... ಎಂದು ತಮ್ಮದೇ ಶೈಲಿಯಲ್ಲಿ ಸಂಸದರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ನಿಮ್ಮ ಸಂಸ್ಕೃತಿ ಹೀಗಿದೆಯಾ? ಇಲ್ಲವೇ ನಿಮ್ಮ ಮನಸ್ಸು ಅಷ್ಟು ವಿಕೃತವಾಗಿದಿಯೋ ಗೊತ್ತಿಲ್ಲ. ಗುರುಪ್ರಸಾದ್ ಅವರ ಬಗ್ಗೆ ಹೀಗೆ ಮಾತನಾಡಿದ ನಿಮ್ಮನ್ನು ಮನುಷ್ಯ ಎಂದು ಹೇಗೇ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
'ಮಠ' ಸಿನಿಮಾದಿಂದ ನಿಮಗೆ ಲೈಪ್ ಕೊಟ್ಟಿದ್ದು ಗುರು...
ಕನ್ನಡ ಚಿತ್ರ ನಿರ್ದೇಶಕರೊಬ್ಬರು ಬದುಕು ಸಾವಿನಲ್ಲಿ ಅಂತ್ಯವಾಗಿದೆ. ಅವರಿಗೆ ಕೆರೆತ ಇತ್ತು, ರಕ್ತ ಬರುತ್ತಿತ್ತು ಅಂತೆಲ್ಲ ಅವರ ಬಗ್ಗೆ ಮಾತನಾಡಿದ್ದೀರಿ. ನಿಮ್ಮನ್ನು ನೀವು ಶ್ರಿ ರಾಘವೇಂದ್ರ ಸ್ವಾಮಿ ಭಕ್ತ ಅಂತಲೂ ಹೇಳುತ್ತೀರಿ. ಒಬ್ಬ ರಾಘವೇಂದ್ರ ಸ್ವಾಮಿ ಭಕ್ತರಾಗಿ ಸಾವಿನಲ್ಲಿ ಅಂತ್ಯ ಕಂಡ ನಿರ್ದೇಶಕರೇ ನಿನಗೆ 'ಮಠ' ಸಿನಿಮಾ ಮೂಲಕ ಲೈಪ್ ಕೊಟ್ಟಿದ್ದಾರೆ ಎಂದು ಎಚ್ಚರಿಸಿದ್ದಾರೆ.
ನೀನೊಬ್ಬ ಸಾವಿನಲ್ಲೂ ವಿಕೃತಿ ಕಾಣುವ ವ್ಯಕ್ತಿ ಎಂಬುದು ಗೊತ್ತಿರಲಿಲ್ಲ. 'ಮಠ' ಸಿನಿಮಾ ದಲ್ಲಿ ನಿನಗೆ ಇದೇ ಗುರುಪ್ರಸಾದ್ ಅವರು ನಿಮಗೆ ಲೈಪ್ ಕೊಡದಿದ್ದರೆ ಜಗ್ಗೇಶ್ ಯಾರು ಎಂದು ಇಡಿ ಕರ್ನಾಟಕವೇ ಮರೆಯುತ್ತಿತ್ತು. ನೀವು ಲೈವ್ ಮೂಲಕ ನಾನು ಇದಿನಿ ಎಂದು ಬರೆದುಕೊಳ್ಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ನಟ ಜಗ್ಗೇಶ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ನಟ ಜಗ್ಗೇಶ್ ಅವರು ಗುರುಪ್ರಸಾದ್ ನಿಧನಾನಂತರ ಒಂದಷ್ಟ ಹೇಳಿಕೆ ನೀಡಿದ್ದರು. ಅವುಗಳು ಅವರಿಗೇ ಮುಳ್ಳಾಗುವ ಸಾಧ್ಯತೆ ಇದೆ. ಏಕೆಂದರೆ ಒಬ್ಬ ವ್ಯಕ್ತಿ ಬದುಕಿದ್ದಾಗ ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸಿ ಅವರು ಇರುತ್ತಾರೆ. ಆದರೆ ಸತ್ತಮೇಲೆ ಅವರ ಬಗ್ಗೆ ಅವರು ಎಷ್ಟೇ ಕೆಟ್ಟವರಾದರೂ ಒಳಿತನ್ನೇ ಹೇಳಬೇಕು ಎಂಬ ಮಾತಿದೆ. ಹೀಗಾಗಿ ಜಗ್ಗೇಶ್ ಅವರ ಹೇಳಿಕೆಗಳನ್ನು ಜಗದೀಶ್ ಅವರು ಬಹಿರಂಗವಾಗಿ ಖಂಡಿಸಿದ್ದಾರೆ. ಬೇಸರ ಹೊರ ಹಾಕಿದ್ದಾರೆ.












Click it and Unblock the Notifications