"ದರ್ಶನ್ ಜೈಲು ಸೇರಿದ್ದು ರಾಮನಗರದ ಆ ರಾಜಕಾರಣಿಯಿಂದ..."
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನು ಸಿಕ್ಕಿದ್ದರಿಂದ ರಿಲೀಫ್ ಆಗಿದ್ದರು. ಆದರೆ ಸುಪ್ರೀಂಕೋರ್ಟ್ ದರ್ಶನ್ ಅವರಿಗೆ ನೀಡಿದ್ದ ಜಾಮೀನು ರದ್ದು ಮಾಡಿದ್ದರಿಂದ ಅವರು ಮತ್ತೆ ಜೈಲು ಸೇರಿದ್ದಾರೆ. ಈ ಹಿಂದೆ ದರ್ಶನ್ ಕೇಸ್ ಹಾಗೂ ಅವರ ಬಂಧನದ ಹಿಂದೆ ರಾಜಕಾರಣಿಗಳ ಕೈವಾಡವೂ ಇದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. ನಟ ದರ್ಶನ್ ಜೈಲು ಸೇರಿದ್ದರ ಹಿಂದೆ ಪ್ರಭಾವಿ ರಾಜಕಾರಣಿಯ ಪಾತ್ರವಿದೆ ಎಂದು ಹೇಳಲಾಗುತ್ತಿದೆ.
ಹೌದು ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ದರ್ಶನ್ ನಿಜವಾಗಿ ಜೈಲು ಸೇರಲು ಪ್ರಭಾವಿ ರಾಜಕಾರಣಿಯೊಬ್ಬರು ಕಾರಣ ಎಂದು ಲಾಯರ್ ಜಗದೀಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಜಗದೀಶ್ ಸ್ಫೋಟಕ ವಿಚಾರಗಳನ್ನು ಹೇಳಿದ್ದಾರೆ. ದರ್ಶನ್ ಪ್ರಕರಣವನ್ನು ಪ್ರಸ್ತಾಪಿಸಿರುವ ಜಗದೀಶ್ ಇದರ ಹಿಂದೆ ರಾಜಕಾರಣಿಗಳ ಕೈವಾಡ ಇದೆ, ಮುಖ್ಯವಾಗಿ ರಾಮನಗರದ ಆ ರಾಜಕಾರಣಿ ಎಂದು ಆರೋಪ ಮಾಡಿದ್ದಾರೆ.

́'2028ಕ್ಕೆ ನಮ್ಮಂತವರು ಸಿಎಂ ಆಗಬೇಕು. ಯಾಕಂದ್ರೆ ಸಾಮಾನ್ಯ ಜನರ ಪರ ಕೆಲಸ ಮಾಡೋಕೆ ಯಾವ ಶಾಸಕನೂ ಇಲ್ಲ. ಎಲ್ಲರೂ ಶ್ರೀಮಂತರು ಹಾಗೂ ಪವರ್‌ನಲ್ಲಿರುವವರ ಪರವಾಗಿ ಇದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಹಾಗೂ ನಟ ದರ್ಶನ್ ಅವರ ಕೇಸ್‌ಗಳಲ್ಲಿ ತಮ್ಮ ರಾಜಕೀಯ ತೀಟೆಗಳನ್ನ ತೀರಿಸಿಕೊಳ್ಳೋಕೆ ಆ ರಾಜಕಾರಣಿಗಳು ಒಂದಾಗಿದ್ದಾರೆ' ಎಂದು ಜಗದೀಶ್ ವಿಡಿಯೋದಲ್ಲಿ ಹೇಳಿದ್ದಾರೆ.
'ದರ್ಶನ್ ಕೇಸ್ ಹಿಂದೆ ರಾಮನಗರದ ಒಬ್ಬರು ರಾಜಕಾರಣಿ ಇದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಕೇಸ್‌ನಲ್ಲಿ ಒಬ್ಬರು ರಾಜಕಾರಣಿ ಕೆಲಸ ಮಾಡಿದ್ದರಿಂದ ಅವರನ್ನು ಜೈಲಿಗೆ ಹಾಕಿದ್ರು. ಇನ್ನು ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಕನಕಪುರದ ರಾಜಕಾರಣಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ ಆಯ್ತು' ಎಂದು ಲಾಯರ್ ಜಗದೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.
'ಧರ್ಮಸ್ಥಳ ಕೇಸ್‌ನಲ್ಲಿ ಎಲ್ಲರೂ ಒಂದಾಗಿದ್ದಾರೆ'
'ಇನ್ನು ಧರ್ಮಸ್ಥಳ ಕೇಸ್‌ನಲ್ಲಿ ಎಲ್ಲ ಪಕ್ಷದವರು ಕೊಲೆಗಾರರ ಪರ ಇದ್ದಾರೆ. ಇದೇ ಕಾರಣಕ್ಕೆ ತನಿಖೆ ನಿಲ್ಲಿಸಲಾಯ್ತು. ಜನ ಕಾಂಗ್ರೆಸ್ ಹಾಗೂ ಬಿಜೆಪಿಗೆ ಬುದ್ಧಿ ಕಲಿಸದೇ ಬಿಡಲ್ಲ. ಸರ್ಕಾರ ಏನಾದರೂ ಎಸ್‌ಐಟಿ ರದ್ದು ಮಾಡಿ ತನಿಖೆ ನಿಲ್ಲಿಸಲು ಪ್ರಯತ್ನಿಸಿದರೆ ಇದು ಕೋರ್ಟ್ ಮುಂದೆ ಹೋಗುತ್ತೆ. ನೀವೆಲ್ಲ ಒಂದಾಗಿದ್ದೀರಿ ಅನ್ನೋದು ನಮಗೆ ಗೊತ್ತಿದೆ. ನಾನು ಯಾರಿಗೂ ಹೆದರಲ್ಲ' ಎಂದು ಜಗದೀಶ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications