Bhoomika Ramesh: ಸಿನಿಮಾ ಬಿಡಿ, ತೆಲುಗು ಕಿರುತೆರೆಯಲ್ಲಿಯೂ ಕನ್ನಡಿಗರದ್ದೇ ಹವಾ! ತೆಲುಗಿಗೆ ಹಾರಿದ ಮತ್ತೊಬ್ಬ ನಟಿ
ಬೆಂಗಳೂರು, ಮೇ. 17: ಬೇರೆ ಸಿನಿಮಾ ಇಂಡಸ್ಟ್ರಿಗಳಲ್ಲಿ ಕನ್ನಡಿಗರು ತಮ್ಮದೆ ಛಾಪು ಮೂಡಿಸುತ್ತಿದ್ದಾರೆ. ಅದರಲ್ಲೂ ತೆಲುಗು ಸಿನಿಮಾ ಮತ್ತು ಕಿರುತೆರೆಯಲ್ಲಿ ಕನ್ನಡಿಗರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹಲವು ಕಲಾವಿದರು ತೆಲುಗು ಕಿರುತೆರೆಗಳಲ್ಲಿ ನಟಿಸುತ್ತಾ ಅಲ್ಲಿಯವರೇ ಆಗಿ ಹೋಗಿದ್ದಾರೆ.
ಗಟ್ಟಿಮೇಳ ಧಾರಾವಾಹಿ ಖ್ಯಾತಿಯಾ ನಿಶಾ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು ಬಿ ಗೌಡ, ಕನ್ಯಾಕುಮಾರಿ ಧಾರಾವಾಹಿಯ ನಟ, ಅಗ್ನಿ ಸಾಕ್ಷಿಯ ನಟಿ ಶೋಭಾ, ನಮ್ಮನೆ ಯುವರಾಣಿ ಧಾರಾವಾಹಿಯ ರಘು, ಇತ್ತೀಚೆಗೆ ನಮ್ಮನ್ನು ಅಗಲಿದ ನಟಿ ಪವಿತ್ರಾ ಜಯರಾಂ ಸೇರಿದಂತೆ ಹಲವು ಮಂದಿ ತೆಲುಗು ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇವರುಗಳ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗುತ್ತಿದ್ದಾರೆ. ಹೌದು.. ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ರಮೇಶ್ ತೆಲುಗಿಗೆ ಕಾಲಿಡುತ್ತಿದ್ದಾರೆ.

ತೆಲುಗಿಗೆ ಹಾರಿದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ 'ಲಕ್ಷ್ಮೀ' ಪಾತ್ರ ಮಾಡುತ್ತಿರುವ ನಟಿ ಭೂಮಿಕಾ ರಮೇಶ್ ಅವರು ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ತೆಲುಗು ಕಿರುತೆರೆ ಜೊತೆಗೆ ನಂಟು ಇಟ್ಟುಕೊಂಡಿರುವ ನಟಿ ಭೂಮಿಕಾ, ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಅವರು, ಈಗ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ಬರುತ್ತಿರುವ 'ಮೇಘ ಸಂದೇಶಂ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ 'ಭೂಮಿ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ 'ನನ್ನರಸಿ ರಾಧೆ' , ತ್ರಿಪುರ ಸುಂದರಿ ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ಮನೆ ಮಾತಾಗಿದ್ದ ನಟ ಅಭಿನವ್ ವಿಶ್ವನಾಥನ್ ಹೀರೋ. ಸೀರಿಯಲ್ ಪ್ರೋಮೋ ರಿಲೀಸ್ ಆಗಿದ್ದು, ಸದ್ದು ಮಾಡುತ್ತಿದೆ.

ಮುಖ್ಯಪಾತ್ರದಲ್ಲಿ ಕನ್ನಡಿಗರದ್ದೆ ಹವಾ
ಜೀ ತೆಲುಗು ವಾಹಿನಿ 'ಮೇಘ ಸಂದೇಶಂ' ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ ಮಾಡಿದೆ. ಇದೊಂದು ಭಾವನಾತ್ಮಕ ಕಥೆಯಾಗಿದ್ದು, ಅದರಲ್ಲಿ ಭೂಮಿಕಾ ಹಾಗೂ ಅಭಿನವ್ ವಿಶ್ವನಾಥನ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ತಿಳಿಯುತ್ತಿದೆ. ತಂದೆ - ತಾಯಿ ಪ್ರೀತಿ ಸಿಗದ ಭೂಮಿ ಮತ್ತು ಗಗನ ಅವರ ಕಥೆ ಈ ಧಾರಾವಾಹಿಯಲ್ಲಿದೆ. ಇದಕ್ಕೆ ನಾಟ್ಯದ ಅಂಶವನ್ನು ಸೇರಿಸಲಾಗಿದೆ.
ಕನ್ನಡದಲ್ಲಿ ಒಂದೆರಡು ಸೀರಿಯಲ್ ಮಾಡಿ ತೆಲುಗು, ತಮಿಳು ಕಡೆ ಮುಖ ಮಾಡುತ್ತಿದ್ದಾರೆ ನಟರು. ಭಾಷೆಗಳ ತಾರತಮ್ಯ ಇಲ್ಲದೆ ಕಲಾವಿದರು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಲೇ ತೆಲುಗು ಧಾರಾವಾಹಿ ಮಾಡಿ ಸಕ್ಸಸ್ ಕಂಡ ನಟ, ನಟಿಯರು ನಮ್ಮ ಮುಂದಿದ್ದಾರೆ. ಅವರ ಸಾಲಿಗೆ ಸೇರುತ್ತಾರಾ ಭೂಮಿಕಾ ರಮೇಶ್ ಎಂಬುದನ್ನು ಕಾದು ನೋಡಬೇಕಿದೆ.
ಅವರ ಭೂಮಿಕಾ ರಮೇಶ್ ಅವರ ಲಕ್ಷ್ಮೀ ಪಾತ್ರ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಟಿಆರ್‌ಪಿ ಪಟ್ಟಿಯಲ್ಲೂ ಉತ್ತಮ ಸ್ಥಾನದಲ್ಲಿದೆ ಧಾರಾವಾಹಿ. ಈ ಸಮಯದಲ್ಲಿ ತೆಲುಗಿಗೆ ಮುಖ ಮಾಡಿರುವ ಇವರಿಂದ ಧಾರಾವಾಹಿ ಮೇಲೆ ಪರಿಣಾಮ ಬೀರಲಿದೆಯೇ? ಎರಡು ಕಡೆ ಓಡಾಟದ ಕಾರಣಕ್ಕೆ ಧಾರಾವಾಹಿಯಲ್ಲಿ ಅವರ ಪಾತ್ರ ಕಡಿಮೆಯಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications