Kodi Mutt Swamiji: ದರ್ಶನ್ ಬಗ್ಗೆ ಕೋಡಿಮಠ ಶ್ರೀಗಳ ಶಾಕಿಂಗ್ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ಗೆ ಒಂದಾದ ಮೇಲೊಂದು ಆಘಾತ ಎದುರಾಗುತ್ತಿವೆ. ಹೊಸ ಹೊಸ ಆರೋಪಗಳು ದರ್ಶನ್ ವಿರುದ್ಧ ಕೇಳಿಬರುತ್ತಿವೆ.
ಭಯದಿಂದ ಸುಮ್ಮನಿದ್ದ ಅನೇಕರು ಈಗ ದರ್ಶನ್ ಮಾಡಿರುವ ಕೃತ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾಟೇರ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಮತ್ತಷ್ಟು ದೊಡ್ಡ ಹಿಟ್ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದ ದರ್ಶನ್, ಕೋಪದ ಕೈಗೆ ಬುದ್ದಿ ಕೊಟ್ಟು ಪೊಲೀಸರ ಅತಿಥಿಯಾಗಿದ್ದಾರೆ.

ದರ್ಶನ್ ಬಗ್ಗೆ ಕೋಡಿಮಠ ಶ್ರೀಗಳು ಹೇಳಿಕೆ ನೀಡಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟರೆ ಈ ರೀತಿ ಅವಘಡಗಳು ನಡೆಯುತ್ತವೆ ಎಂದಿದ್ದಾರೆ. ಕರೆಯದೇ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಿಗಾಲಿನಲ್ಲಿ ನಡೆಯುವವನು ಕನಸು ಎಂದು ನಿರ್ಮಾಪಕ ಉಮಾಪತಿ ಬಳಿ ಹೇಳಿದ್ದಾಗಿ ತಿಳಿಸಿದ್ದಾರೆ.
ಕೋಪದ ಕೈಗೆ ಬುದ್ದಿ ಕೊಡದೇ ಇದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಉಮಾಪತಿ ಕೋಪವನ್ನು ನಿಯಂತ್ರಣ ಮಾಡಿಕೊಂಡಿದ್ದಕ್ಕೇ ಆತ ಇದರಲ್ಲಿ ಸಿಲುಕಲಿಲ್ಲ ಎಂದರು.
ರಾಜ್ಯದಲ್ಲಿ ಅತಿವೃಷ್ಠಿ ಸಾಧ್ಯತೆ
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಈ ವರ್ಷ ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ಜಲಕಂಟಕ, ಅಗ್ನಿಕಂಟಕ ಮತ್ತು ವಾಯು ಕಂಟಕಗಳು ಹೆಚ್ಚುತ್ತವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಭಾರಿ ಮಳೆಯಾಗುವ ಬಗ್ಗೆ ಕೂಡ ಕೋಡಿಮಠ ಶ್ರೀಗಳು ಮುನ್ಸೂಚನೆ ಕೊಟ್ಟಿದ್ದು, ಅತಿವೃಷ್ಠಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯಂದಿರೇ ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚುತ್ತದೆ, ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದೂ ಆಗಬಹುದು ಎಂದಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಕೇಂದ್ರ ಸರ್ಕಾರ ಮತ್ತು ಮೋದಿ ಬಗ್ಗೆ ಶ್ರಾವಣದಲ್ಲಿ ಭವಿಷ್ಯ ಹೇಳುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications