Year Ender 2024: ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಕಲಾವಿದರ ವಿವರ

Year Ender 2024: 2025ರ ಹೊಸವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ವಾರಗಳು ಮಾತ್ರ ಬಾಕಿಯಿವೆ. ಇನ್ನು ಇದಕ್ಕೂ ಮುನ್ನ 2024ರಲ್ಲಿ ಕೆಲವು ಕಹಿ ಘಟನೆಗಳು ನಡೆದಿವೆ. ಅದರಲ್ಲೂ ಈ ವರ್ಷ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಇಹಲೋಕ ತ್ಯಜಿಸಿದಂತಹ ಕಹಿ ಘಟನೆಗಳು ನಡಿದಿವೆ. ವಿವರ ಇಲ್ಲಿದೆ ನೋಡಿ.

ಚಂದನವನ ಈ ವರ್ಷ ಅನೇಕ ಕಲಾವಿದರನ್ನು ಕಳೆದುಕೊಂಡಿದೆ. ಕೆಲವರು ದುಡುಕಿನ ನಿರ್ಧಾರದಿಂದ ಸುಂದರ ಬದುಕನ್ನು ಅಂತ್ಯಗೊಳಿಸಿದರೆ, ಇನ್ನೂ ಕೆಲವರು ವಿಧಿಯಾಟದಿಂದ ಇಹಲೋಕ ತ್ಯಜಿಸಿದ ಕಹಿಘಟನೆಗಳು ನಡೆದಿವೆ.

Know Details of Kannada Film Industry Artists Who Passed Away This Year

* ನಟ ಕೆ.ಶಿವರಾಂ: ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದ ಕೆ.ಶಿವರಾಮ್ ಅವರು ಈ ವರ್ಷ ನಮ್ಮನ್ನೆಲ್ಲ ಅಗಲಿದ್ದಾರೆ. ಬರೀ ಚಿತ್ರರಂಗ ಅಲ್ಲದೆ, ರಾಜಕಾರಣಿ ಹಾಗೂ ಮಾಜಿ ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಅವರದ್ದಾಗಿದೆ.

ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದ್ದ ಶಿವರಾಂ, 1985ರಲ್ಲಿ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಕನ್ನಡದಲ್ಲಿಯೇ ಐಎಎಸ್‌ ಪರೀಕ್ಷೆ ಬರೆದು, ಐಎಎಸ್‌ ಅಧಿಕಾರಿಯೂ ಆಗಿದ್ದರು. 1993ರಲ್ಲಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಂ ಅವರು, ನಾಗತಿಹಳ್ಳಿ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು.

ಬಳಿಕ ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು. ಆದರೆ, ಈ ವರ್ಷದ ಅಂದರೆ ಫೆಬ್ರವರಿ 29, 2024ರಂದು ಹೃದಯಾಘಾತದಿಂದ ಅವರು ನಿಧನ ಹೊಂದಿದರು.

* ನಟ ದ್ವಾರಕೀಶ್:‌ ಕನ್ನಡ ಚಿತ್ರರಂಗದದಲ್ಲಿ ದ್ವಾರಕೀಶ್‌ ಅವರು ಕಾಮಿಡಿ ಮೂಲಕವೇ ಪ್ರಸಿದ್ಧಿಯಾಗಿದ್ದರು. ಅಲ್ಲದೆ ಕರ್ನಾಟಕದ ಪ್ರಚಂಡ ಕುಳ್ಳ ಅಂಲೂ ದ್ವಾರಕೀಶ್‌ ಅವರನ್ನು ಕರೆಯುತ್ತಿದ್ದರು. ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಒಂದು.. ಎರಡಲ್ಲ. ಆದರೆ ಇದೀಗ ಅವರು ನಮ್ಮನೆಲ್ಲ ಅಗಲಿದ್ದಾರೆ.

1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದ್ವಾರಕೀಶ್ ಅವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.

ಭಾಗ್ಯವಂತರು, ಮೇಯರ್ ಮುತ್ತಣ್ಣ, ಕುಳ್ಳ ಏಜೆಂಟ್ 000, ಕೌಬಾಯ್ ಕುಳ್ಳ, ಸಿಂಗಪೂರಿನಲ್ಲಿ ರಾಜಾ ಕುಳ್ಳ, ಪ್ರೀತಿ ಮಾಡು ತಮಾಷೆ ನೋಡುʼ ಹೀಗೆ ಸುಮಾರು 40 ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಾಣ ಸೇರಿದಂತೆ ನೀ ಬರೆದ ಕಾದಂಬರಿ, ಡಾನ್ಸ್ ರಾಜ ಡಾನ್ಸ್‌, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಮಜ್ನು, ಗಿಡ್ಡು ದಾದ, ಕಿಡ್ನಾಪ್‌, ಕಿಲಾಡಿಗಳು ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.

ಹೀಗೆ ದ್ವಾರಕೀಶ್‌ ಅವರ ಕೊಡುಗೆಗಳು ಕನ್ನಡ ಚಿತ್ರರಂಗಕ್ಕೆ ಅಮೋಘವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇದೇ ವರ್ಷ ಅಂದರೆ 2024ರ ಏಪ್ರಿಎಲ್‌ 16ರಂದು ವಿಧಿವಶರಾದರು.

* ಪವಿತ್ರಾ ಜಯರಾಮ್:‌ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದ ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಮ್‌ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದರು. ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸಿ ಜನರ ಮನ ಗೆದ್ದಿದ್ದರು.

ಕನ್ನಡದ ರೋಬೋ ಫ್ಯಾಮಿಲಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಪಡೆದಿದ್ದರು. ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟನೆ ಮಾಡಿದ್ದರು. ಆದರೆ ಇದೇ ವರ್ಷದ ಅಂದರೆ 2024ರ ಮೇ 11ರಂದು ಆಂಧ್ರಪ್ರದೇಶದ ಕರ್ನೂಲು ಸಮೀಪ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

* ನಟಿ, ನಿರೂಪಕಿ ಅಪರ್ಣಾ: ಕನ್ನಡ ಕಿರುತೆರೆಯಲ್ಲಿ ತನ್ನ ಅಚ್ಛ ಕನ್ನಡದ ಧ್ವನಿಯಿಂದಲೇ ಖ್ಯಾತಿಯನ್ನ ಗಳಿಸಿದ್ದ ನಟಿ ಅಪರ್ಣಾ ಅವರ ನಿಧನರಾಗಿದ್ದು, ಇದರಿಂದ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟಾದಂತಾಗಿದೆ.

ಅಪರ್ಣಾ ಅವರು ದೂರದರ್ಶನದಲ್ಲಿ ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಅಲ್ಲದೆ ಬೆಂಗಳೂರಿನ ನಮ್ಮ ಮೆಟ್ರೋಗೆ ಧ್ವನಿಯಾಗುವ ಮೂಲಕ ಕನ್ನಡ ಜನಪ್ರಿಯರಾಗಿದ್ದರು. 1990ರ ದಶಕದಲ್ಲಿ ದೂರ ದರ್ಶನದಲ್ಲಿದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದರು.

1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂವು ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 2015 ಮತ್ತು 2021ರ ನಡುವೆ ಕಾಮಿಡಿ ಶೋ, ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿಯೂ ಜನಪ್ರಿಯರಾಗಿದ್ದರು. ಆದರೆ, 2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ಅವರು ನಿಧರಾಗಿದ್ದರು. ಆದರೆ, ಅವರ ಮನಸಿಗೆ ಹಿತ ನೀಡುವ ಕನ್ನಡ ಮಾತ್ರ ಹಚ್ಚಹಸಿರಿನಂತೆ ಶಾಶ್ವತವಾಗಿದೆ.

* ದೀಪಕ್‌ ಅರಸ್:‌ ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಅವರ ಹಠಾತ್‌ ನಿಧನದ ಸುದ್ದಿ ಸ್ಯಾಂಡಲ್‌ವುಡ್‌ಗೆ ಶಾಕ್‌ ಆಗಿತ್ತು. ಕನ್ನಡದಲ್ಲಿ 2011ರಲ್ಲಿ ಬಂದಿದ್ದ ಮನಸಾಲಜಿ ಸಿನಿಮಾ ನಿರ್ದೇಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 2023ರಲ್ಲಿ ಶುಗರ್ ಫ್ಯಾಕ್ಟರಿ ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ ಅವರು ಕಿಡ್ನಿ ವೈಫಲ್ಯದಿಂದ ಅಕ್ಟೋಬರ್‌ 17ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

* ನಿರ್ದೇಶಕ ಗುರುಪ್ರಸಾದ್:‌ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕ-ನಟರಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್‌ ಅವರ ಆತ್ಮಹತ್ಯೆ ವಿಚಾರ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಅತೀ ದೊಡ್ಡ ಸುದ್ದಿಯಾಗಿತ್ತು.
ಮಠ, ಎದ್ದೇಳು ಮಂಜುನಾಥ ಮುಂತಾದ ಸಿನಿಮಾಗಳಿಂದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್‌ ಮಾದನಾಯಕನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ನವೆಂಬರ್ 3ರಂದು ಅವರ ಮೃತದೇಹ ಅಪಾರ್ಟ್‌ಮೆಂಟ್‌ನಲ್ಲ ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಸಾಲದ ಸುಳಿಯಲ್ಲಿ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಅವರ ನಿಧನದ ಬಳಿಕ ಕೆಲ ಕಲಾವಿದರು ಮಾತನಾಡಿದ ರೀತಿ ಚಂದನವನದಲ್ಲಿ ತುಂಬಾ ಚರ್ಚೆ ಆಗಿತ್ತು.

* ನಟಿ ಶೋಭಿತಾ: ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ಶೋಭಿತಾ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಸದ್ದು ಮಾಡಿತ್ತು. 2024ರ ನವೆಂಬರ್ 30ರ ಮಧ್ಯರಾತ್ರಿ ಹೈದರಾಬಾದ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ವಂದನ, ಎರಡೊಂದ್ಲ ಮೂರು. ಅಟೆಂಪ್ಟ್ ಟು ಮರ್ಡರ್ ಮುಂತಾದ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅವರ ಸಾವಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+