Ashwini Puneeth Rajkumar: ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಯಾರ ಮಗಳು ಹಾಗೂ ವಿದ್ಯಾಭ್ಯಾಸ ಏನು ಗೊತ್ತೇ.?
Ashwini Puneeth Rajkumar: ರಾಜ್ ಕುಟುಂಬದ ಸೊಸೆ, ಕನ್ನಡದ ಖ್ಯಾತ ನಟ ಪುನೀತ್ ಪತ್ನಿ ಅಶ್ವಿನಿ ಅವರು ಇಡೀ ರಾಜ್ಯಕ್ಕೆ ಪರಿಚಿತರು. ಆದರೆ, ಇವರ ತಂದೆ ಯಾರು, ಆಸ್ತಿ ಎಷ್ಟು, ವಿದ್ಯಾಭ್ಯಾಸ ಏನು ಹಾಗೂ ಇದೀಗ ಅವರು ಯಾವೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪುನೀತ್ ರಾಜ್‌ಕುಮಾರ್ ಬರೀ ಕರ್ನಾಟಕ ಅಲ್ಲದೆ, ದೇಶ, ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರಿಲ್ಲದಿದ್ದರೂ ಕೂಡ ಅದ್ಭುತ ಕೆಲಸಗಳಲ್ಲಿ ಅವರನ್ನು ಕಾಣುತ್ತಿದ್ದಾರೆ. ಇಂದು ಅಪ್ಪು ಅಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಅವರು ಮಾಡಿದ ಅಪಾರ ಸಾಧನೆಗಳನ್ನು ಬಿಚ್ಚಿಡುತ್ತಾರೆ. ಅಷ್ಟರ ಮಟ್ಟಿಗೆ ಪುನೀತ್ ರಾಜ್‌ಕುಮಾರ್ ಅವರು ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ. ಇನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಜವಾಬ್ದಾರಿಗಳು: ನಟ ಪುನೀತ್ ರಾಜಕುಮಾರ್ ನಿಧನದ ಬಳಿ ಅವರ ಪತ್ನಿ ಅಶ್ವಿನಿ ಅವರು ಪಿಆರ್‌ಕೆ ಪ್ರೊಡಕ್ಷನ್ ಹೌಸ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಚಲನಚಿತ್ರ ನಿರ್ಮಾಪಕರೂ ಆಗಿದ್ದು, ಫ್ರೆಂಚ್ ಬಿರಿಯಾನಿ ಸೇರಿದಂತೆ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ಅಪ್ಪು ಅವರ ಸಂಪೂರ್ಣ ಉದ್ಯಮ, ನಿರ್ಮಾಣ ಸಂಸ್ಥೆ, ಸಮಾಜ ಸೇವೆ, ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಅಶ್ವಿನಿ ಅವರ ಹುಟ್ಟೂರು ಯಾವ್ದು?: ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರಾಗಿದ್ದಾರೆ. ಮಾರ್ಚ್ 14, 1981ರಲ್ಲಿ ಜನಿಸಿದ್ದು, ಇದೀಗ ಅವರಿಗೆ 43 ವರ್ಷ ವಯಸ್ಸು. ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಅಶ್ವಿನಿ ಪುನೀತ್ ರಾಜಕುಮಾರ್ ಡಿಗ್ರಿ ಓದಿದ್ದು, ಅವರು ಫ್ಯಾಶನ್ ಡಿಸೈನರ್ ಸಹ ಆಗಿದ್ದಾರೆ.
ಇನ್ನು ಅಶ್ವಿನಿ ಅವರು ಡಿಸೆಂಬರ್ 1, 1999ರಂದು ಪುನೀತ್ ರಾಜ್‌ಕುಮಾರ್ ಅವರನ್ನು ವಿವಾಹವಾದರು. ಸ್ನೇಹಿತರೊಬ್ಬರ ಮೂಲಕ ಭೇಟಿಯಾದ ಅಶ್ವಿನಿ ಮತ್ತು ಪುನೀತ್ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದರು. ಇವರಿಗೆ ದೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರ ತಂದೆ ಬಾಗಮನೆ ರೇವನಾಥ್. ಇವರು ಬಿಬಿಎಂಪಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದವರಾಗಿದ್ದಾರೆ.
ಕಾರ್ ಕ್ರೇಜ್: ಪುನೀತ್ ರಾಜ್‌ಕುಮಾರ್‌ಗಿದ್ದ ಕಾರಿನ ಕ್ರೇಜ್ ಅಶ್ವಿನಿ ಅವರಿಗೂ ಇದೆ ಎನ್ನಲಾಗುತ್ತಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಐಷಾರಾಮಿ ಕಾರೊಂದನ್ನು ಖರೀದಿಸಿ ಸುದ್ದಿಯಾಗಿದ್ದರು. ಇನ್ನು ಅವರು ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಪತಿ ಪುನೀತ್ ರಾಜ್‌ಕುಮಾರ್ ಅವರ ಕನಸನ್ನು ನನಸು ಮಾಡಲು ತುಂಬಾ ಪರಿಶ್ರಮ ಪಡುತ್ತಿದ್ದಾರೆ. ಒಳ್ಳೆ ಕಥೆ ಹಾಗೂ ಪ್ರತಿಭಾವಂತರನ್ನು ಹುಡುಕಿ ಅವಕಾಶ ನೀಡುತ್ತಿದ್ದಾರೆ. ಅದರಲ್ಲೂ ನಿರ್ದೇಶಕಿಯರಿಗೆ, ಮಹಿಳಾ ತಂತ್ರಜ್ಞರಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಐಷಾರಾಮಿ ಆಡಿ ಕ್ಯೂ 7 ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಈ ಕಾರಿನ ಬೆಲೆ 1.10-1.20 ಕೋಟಿ ರೂಪಾಯಿಗಳವರೆಗೂ ಇರಬಹುದು ಎನ್ನಲಾಗುತ್ತಿದೆ. ಇನ್ನು ಇಷ್ಟೆಲ್ಲ ಇರುವ ಡೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಒಟ್ಟು ಆಸ್ತಿ ಎಷ್ಟು ಎನ್ನುವ ನೆಟ್ಟಿಗರ ಪ್ರಶ್ನೆಗೆ ಉತ್ತರ ಇಲ್ಲಿದೆ. ಮೂಲಗಳ ಪ್ರಕಾರ, ಅಶ್ವಿನಿ ಪುನೀತ್ ರಾಜಕುಮಾರ್ ಅವರ ಒಟ್ಟು ಆಸ್ತಿ 200ರಿಂದ 210 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಆದರೆ, ಇದು ಸಾಮಾಜಿಕ ಜಾಲತಾಣದಲ್ಲು ನೆಟ್ಟಿಗರು ಕಮೆಂಟ್ ಮಾಡುವ ಲೆಕ್ಕಾಚಾರವಾಗಿದೆ.












Click it and Unblock the Notifications