Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರೆಂದು ಹೇಳಿದ ಕಿಚ್ಚ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ವಾರದ ಕತೆ ಕಿಚ್ಚನ ಜೊತೆಗೆ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಮನೆಯ ಮಂದಿಗೆಲ್ಲಾ ಫಿನಾಲೆಗೆ ತಲುಪಲು ಹೇಗೆ ರೆಡಿಯಾಗಬೇಕು ಎನ್ನುವುದನ್ನು ಹೇಳಿದ್ದಾರೆ. ಈ ವಾರ ಫ್ಯಾಮಿಲಿ ರೌಂಡ್ ನಡೆದಿರುವುದರಿಂದ ಹೆಚ್ಚು ಜಗಳದ ಮಾತುಗಳು ಬರುವುದಿಲ್ಲ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಗ್ರಾಸರಿ ವಿಚಾರದಲ್ಲಿ ಹೆಚ್ಚು ಚರ್ಚೆ ನಡೆಯಿತು. ಕಿಚ್ಚ ಸುದೀಪ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಸ್ವಾಭಿಮಾನವನ್ನು ಬೇರೆಯವರ ಕೈಯಲ್ಲಿ ಕೊಟ್ಟು ಆಟ ಆಡುತ್ತಿದ್ದೀರಾ ಎಂದು ಸುದೀಪ್ ತ್ರಿವಿಕ್ರಮ್, ಹನುಮಂತುಗೆ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಎಲ್ಲಾ ವಿಚಾರಗಳನ್ನು ನೇರವಾಗಿ ಮಾತನಾಡುತ್ತಿದ್ದ ಹನುಮಂತ ಡೈರೆಕ್ಟ್ ಆಗಿ ಮಾತನಾಡಿಲ್ಲ ಎಂದು ಕಿಚ್ಚ ಬೈದಿದ್ದಾರೆ. ಈ ಮೂಲಕ ಸುದೀಪ್ ಅವರು ಸ್ಪರ್ಧಿಗಳು ಫಿನಾಲೆಗೆ ಯಾವ ರೀತಿ ಆಡ್ಬೇಕು ಎಂದು ಹೇಳಿದ್ದಾರೆ. ಯಾಕೆಂದರೆ ಇಲ್ಲಿರುವ ಸ್ಪರ್ಧಿಗಳಿಗೆಲ್ಲಾ ಗೆಲ್ಲುವ ಸಾಮಾರ್ಥ್ಯ ಇದೆ ಎಂದು ಡೈರೆಕ್ಟ್ ಆಗಿ ಸುದೀಪ್ ಹೇಳಿದ್ದಾರೆ.

ಯಾಕೆಂದರೆ ಇಷ್ಟು ದಿನ ಹನುಮಂತ ಅವರು ಯಾವ ರೀತಿ ಆಟ ಆಡಿಕೊಂಡು ಬಂದಿದ್ದಾರೆ ಅನ್ನೋದನ್ನು ನೀವು ನೋಡಿದ್ದೀರಾ. ಇಲ್ಲಿ ಹನುಮಂತ ಅವರು ಯಾರಿಗೆ ಏನೇ ಹೇಳಬೇಕು ಅಂದರು ಡೈರೆಕ್ಟ್ ಆಗೇ ಹೇಳ್ತಾಯಿದ್ದರು. ಆದರೆ ಟಾಸ್ಕ್ ವೊಂದರಲ್ಲಿ ಹನುಮಂತು ಡೈರೆಕ್ಟ್ ಆಗಿ ಹೇಳಲಿಲ್ಲ. ಮಂಜು ಅವರ ಬಳಿ ಹೋಗಿ ತ್ರಿವಿಕ್ರಮ್ ಬಗ್ಗೆ ಹೇಳಿದರು. ಹೀಗಾಗಿ ಕಿಚ್ಚಾ ಸುದೀಪ್ ಅವರು ಈ ರೀತಿ ಮಾಡಬಾರದು ಎಂದು ಹನುಮಂತುಗೆ ಬುದ್ಧಿ ಹೇಳಿದ್ದಾರೆ. ಅಲ್ಲದೆ ಹನುಮಂತುಗೆ ಸುದೀಪ್ ನಿಮಗೆ ಗೆಲ್ಲೋ ಸಾಮಾರ್ಥ್ಯ ಇದೆ ಎಂದು ಹಿಂಟ್ ಕೊಟ್ಟಿದ್ದಾರೆ.
ಆ ನಂತರ ಸುದೀಪ್ ತ್ರಿವಿಕ್ರಮ್ ಅವರಿಗೂ ಬೈಯುತ್ತಾರೆ. ದೇವರಾಗಲು ಹೋಗಬೇಡಿ ಎಂದು ಎರಡು ಬಾರಿ ಹೇಳುತ್ತಾರೆ. ನೀವು ತಪ್ಪು ಮಾಡ್ತಾಯಿದ್ದೀರಿ ಎಂದು ಸುದೀಪ್ ಹೇಳಿದ್ದಾರೆ. ಜೊತೆಗೆ ನೀವು ಗ್ರ್ಯಾಂಡ್ ಫಿನಾಲೆಗೆ ಬರಬೇಕು ಅಂದರೆ ಈ ರೀತಿ ನೀವು ದೇವರು ಆಗಬೇಡಿ ಎಂದು ಸುದೀಪ್ ಎಚ್ಚರಿಕೆ ಕೊಡುತ್ತಾರೆ.
ಹನುಮಂತನೇ ಚೆನ್ನಾಗಿ ಆಡೋದು- ಭವ್ಯಾ ಗೌಡ
ಭವ್ಯ ಗೌಡ ಅವರಿಗೆ ಸುದೀಪ್ ಅವರು ಕೇಳ್ತಾರೆ. ನೀವ್ಯಾಕೆ ಹನುಮಂತ ಅವರಿಗೆ ಆಟ ಬಿಟ್ಟು ಕೊಟ್ರಿ ಎಂದು. ಆಗ ಭವ್ಯ ಗೌಡ ಅವರು, ಹನುಮಂತ ನನಗಿಂತ ಚೆನ್ನಾಗಿ ಆಡ್ತಾರೆ ಎಂದು ನಾನು ಆಟವನ್ನು ಬಿಟ್ಟುಕೊಟ್ಟೆ ಎಂದು ಒಪ್ಪಿಕೊಳ್ಳುತ್ತಾರೆ. ಇದು ನಿಜ ಕೂಡ ಹೌದು. ಯಾಕೆಂದರೆ ಹನುಮಂತ ಅವರು ಭವ್ಯಾ ಗೌಡ ಅವರಿಗಿಂತ ಬೆಟರ್ ಆಗಿ ಆಡ್ತಾಯಿದ್ದಾರೆ.
ಕಶಾಯ ಟಾಸ್ಕ್ ಬಗ್ಗೆ ಚರ್ಚೆ
ಇನ್ನೂ ಬಿಗ್‌ಬಾಸ್ ಮನೆಯಲ್ಲಿ ಕಶಾಯ ಟಾಸ್ಕ್ ಕೊಟ್ಟಿರುತ್ತಾರೆ. ಆ ಟಾಸ್ಕ್ ಬಗ್ಗೆ ಕೂಡ ಸುದೀಪ್ ಚರ್ಚೆ ಮಾಡುತ್ತಾರೆ. ಇದರ ವೀಟಿಗಳನ್ನೂ ತೋರಿಸುತ್ತಾರೆ. ಯಾರಿಗೆ ಯಾರು ಯಾವ ಕಾರಣ ನೀಡಿದರು ಅನ್ನೋದನ್ನು ತೋರಿಸಲಾಗುತ್ತದೆ. ಇಲ್ಲೂ ಕೂಡ ಹನುಮಂತ ತುಂಬಾ ಸೇಫ್ ಆಗಿ ಆಡ್ತಾಯಿದಿರಾ ಎಂದು ಸುದೀಪ್ ಅವರು ಬೈದಿದ್ದಾರೆ. ಧನ್‌ರಾಜ್ ಹಾಗೂ ಹನುಮಂತ ತುಂಬಾ ಸೇಫ್ ಆಗಿ ಆಡ್ತಾಯಿದಿರಾ, ಹುಷಾರ್ ಎಂದು ಸುದೀಪ್ ಕಿವಿ ಮಾತು ಹೇಳಿದ್ದಾರೆ.
ಎರಡು ಟಾಸ್ಕ್‌ನಲ್ಲಿ ಹನು ಹಾಗೂ ತ್ರಿವಿಕ್ರಮ್‌ಗೆ ಗೆಲ್ಲುವ ಹಿಂಟ್
ಇನ್ನೂ ಎರಡು ಟಾಸ್ಕ್ ವಿಚಾರದಲ್ಲೂ ಹನುಮಂತ ಅವರು ಬೈಸಿಕೊಳ್ಳುತ್ತಾರೆ. ಇಂದು ಗ್ರಾಸರಿ ಟಾಸ್ಕ್‌ನಲ್ಲಿ ನೇರವಾಗಿ ಮಾತನಾಡಿಲ್ಲ ಎಂದು, ಜೊತೆಗೆ ಕಶಾಯ ಟಾಸ್ಕ್‌ನಲ್ಲೂ ಕೂಡ ಸುದೀಪ್ ಹನುಮಂತ ಅವರಿಗೆ ಬೈಯುತ್ತಾರೆ. ಯಾಕೆಂದರೆ ಗೆಲ್ಲೋ ಸಾಮಾರ್ಥ್ಯ ಇರೋರು ಈ ರೀತಿ ಮಾಡಬಾರದು ಎಂದು ಸುದೀಪ್ ಹೇಳುತ್ತಾರೆ.
ಹೀಗಾಗಿ ಶನಿವಾರ ಹನುಮಂತ ಹಾಗೂ ತ್ರಿವಿಕ್ರಮ್ ಅವರಿಗೆ ಸುದೀಪ್ ಹೆಚ್ಚಾಗಿ ಅಡ್ವೈಸ್ ಮಾಡಿದ್ದಾರೆ. ಮೇಲ್ನೋಟಕ್ಕೆ ಸುದೀಪ್ ಇವರನ್ನು ಬೈದಂತೆ ಕಾಣಿಸಿಲ್ಲ. ಬದಲಾಗಿ ನಿಮ್ಮಲ್ಲಿ ಗೆಲ್ಲೋ ಸಾಮಾರ್ಥ್ಯ ಇದೆ, ನೀವು ಗೆಲ್ಲಬಹುದು ಎನ್ನುವ ಹಿಂಟ್ ಕೊಟ್ಟಿದ್ದಾರೆ.
ಮ್ಯಾಕ್ಸ್ ಸಿನಿಮಾ ನೋಡಿ ಹಾರೈಸಿದ್ದಕ್ಕೆ ಕಿಚ್ಚನಿಂದ ಧನ್ಯವಾದ
ಭಾನುವಾರದ ಸಂಚಿಕೆಯಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅಭಿನಯದ ಮ್ಯಾಕ್ಸ್ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಒಂದು ರಾತ್ರಿಯಲ್ಲಿ ಮುಗಿಯುವ ಈ ಸಿನಿಮಾ ಕತೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಇದನ್ನು ನೋಡಿದ ಜನ ಸಿನಿಮಾ ಮತ್ತೆ ಮತ್ತೆ ನೋಡುವಂತಿದೆ. ಸುದೀಪ್ ಅವರ ಟಾಪ್ ಸಿನಿಮಾದಲ್ಲಿ ಇದು ಕೂಡ ಒಂದು. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ನೋಡಿ ಹಾರೈಸಿದ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications