Kichcha Sudeep: ಬರಿಗಾಲಿನಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಬಂದಿದ್ದೇಕೆ?
ಬಿಗ್ ಬಾಸ್ ಕನ್ನಡ ಸೀಸನ್ 11' ಶೋ ಕಾರ್ಯಕ್ರಮ ಆರಂಭವಾಗಿ ಒಂದು ವಾರವಾಗಿದೆ. ಬಿಗ್ಬಾಸ್ ಸೀಸನ್ 11 ಶುರುವಾಗಿ ಮೊದಲ ವಾರದ ಕಿಚ್ಚನ ಪಂಚಾಯ್ತಿನೂ ನಡೆದಿದೆ. ಕಿಚ್ಚನ ಪಂಚಾಯ್ತಿ ಅಂದ್ರೆ ಎಲ್ಲಾ ಅಭಿಮಾನಿಗಳು ಸಹ ಕಾತುರದಿಂದ ನೋಡುತ್ತಾರೆ.
ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ಉಡುಗೆ ಮೇಲೆ ಎಲ್ಲಾರ ಕಣ್ಣೀರುತ್ತದೆ. ಸುದೀಪ್ ಯಾವ ಡ್ರೆಸ್ ಹಾಕಿರ್ತಾರೆ? ಯಾವ ಗೆಟಪ್ನಲ್ಲಿ ಬರ್ತಾರೆ? ಯಾರನ್ನು ರುಬ್ತಾರೆ? ಯಾರನ್ನ ದಬ್ತಾರೆ ಅನ್ನೋ ಹತ್ತಾರು ಪ್ರಶ್ನೆಗಳು ಕಾಡ್ತಿವೆ. ಆದರೆ, ಈ ಸಲದ ಬಿಗ್ಬಾಸ್ನ ಮೊದಲ ಕಿಚ್ಚನ ಪಂಚಾಯ್ತಿ ಫುಲ್ ಡಿಫರೆಂಟಾಗಿತ್ತು. ಕಿಚ್ಚ ಸುದೀಪ್ ಅವರ ಎಂಟ್ರಿಯಿಂದ ಸಾಕಷ್ಟು ಜನ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಂತಾಗಿದೆ. ಅಲ್ಲದೇ ಯಾಕೆ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಏನಿದು ಅಚ್ಚರಿ ಅಂದ್ರೆ. ವಾರದ ಕಥೆ ಕಿಚ್ಚನ ಜೊತೆ ಶೋ ಗೆ ಕಿಚ್ಚ ಸುದೀಪ್ ಅವರು ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾರಿಗೂ ಅಚ್ಚರಿಯನ್ನ ಉಂಟು ಮಾಡಿದೆ.

ಸ್ಟೈಲ್ಗೆ ಹೆಚ್ಚು ಪ್ರಾಮುಖ್ಯತೆ ಕೊಡೋ ಸುದೀಪ್ ಬಿಗ್ಬಾಸ್ ಸೀಸನ್ 11 ಶುರುವಾಗಿ ಮೊದಲ ವಾರದ ಕಿಚ್ಚನ ಪಂಚಾಯ್ತಿಗೆ ಕಾಶಿ ಫ್ರಮ್ ವಿಲೇಜ್ ಸಿನಿಮಾ ಪಾತ್ರಧಾರಿಯಂತೆ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಬರಿಗಾಲಿನಲ್ಲಿ ಕಿಚ್ಚ ಸುದೀಪ್ ಶನಿವಾರ ಹಾಗೂ ಭಾನುವಾರದ ಶೋಗೆ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕಿಚ್ಚ ಸುದೀಪ್ ಕಟ್ಟು ನಿಟ್ಟಿನ ನವರಾತ್ರಿ ವ್ರತ ಆಚರಣೆಯಾಗಿದೆ.
ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರನ್ನ ಪೂಜಿಸಲಾಗುತ್ತದೆ. ನವ ಪುಷ್ಪಗಳಿಂದ, ನವ ಬಣ್ಣಗಳಿಂದ ಆರಾಧಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಅಂದ್ರೆ ಶನಿವಾರ ತಾಯಿ ದುರ್ಗೆಯನ್ನ ಚಂದ್ರಘಂಟಾ ಹೆಸರಿನಲ್ಲಿ ಪೂಜಿಸಲಾಗುತ್ತದೆ. ತದಿಗೆಯ ದಿನ ಬರುವ ಈ ತಾಯಿಗೆ ಬೂದು ಬಣ್ಣ ಅಂದ್ರೆ ಅಚ್ಚು ಮೆಚ್ಚು. ಅದೇ ರೀತಿ ಕಿಚ್ಚ ಸುದೀಪ್ ಸಹ ಬೂದು ಬಣ್ಣದ ಸಾಂಪ್ರದಾಯಿಕ ಡ್ರೆಸ್ನಲ್ಲಿ ಕಾಣಿಸಿಕೊಂಡ್ರು. ಇದಕ್ಕೆ ಪೂರಕ ಎನ್ನುವಂತೆ ಬರಿಗಾಲಿನಲ್ಲಿ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.
ಬರಿಗಾಲಿನಲ್ಲಿ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಿರುವ ನಟ ಸುದೀಪ್ ಅವರು ನವರಾತ್ರಿಯ ಸಂದರ್ಭದಲ್ಲಿ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ ಸುದೀಪ್ ಕಠಿಣ ವ್ರತಾಚರಣೆಯಲ್ಲಿದ್ದಾರೆ ಎಂಬ ಮಹತ್ವದ ಖಚಿತ ಮಾಹಿತಿ ಲಭ್ಯವಾಗಿದೆ.
ಕನ್ನಡ ಬಿಗ್ ಬಾಸ್ 10 ಸೀಸನ್ ಗಳು ನಡೆದರು ಸಹ ಇತಿಹಾಸದಲ್ಲೇ ಇದೇ ಮೊದಲು ಸುದೀಪ್ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ವಾರದ ಕತೆ ಹಾಗೂ ಸೂಪರ್ ಸಂಡೇ ಎರಡೂ ಶೋವನ್ನು ಕಿಚ್ಚ ಸುದೀಪ್ ಅವರು ಬರಿಗಾಲಲ್ಲಿ ನಡೆಸಿಕೊಟ್ಟಿದ್ದಾರೆ. ಶನಿವಾರ ಬೂದು ಬಣ್ಣ ಮತ್ತು ಭಾನುವಾರ ಕೇಸರಿ ಬಣ್ಣದ ಇಂಡೋ ವೆಸ್ಟ್ರರ್ನ್ ಶೈಲಿಯ ಕುರ್ತಾ ಹಾಕಿರುವ ಕಿಚ್ಚ ಸುದೀಪ್ ಸೂಪರ್ ಸಂಡೇಗೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡದ ಪ್ರಖ್ಯಾತ ನಟ ಸುದೀಪ ವ್ರತ ಆಚರಿಸುತ್ತಿದ್ದಾರೆ ಅನ್ನೋದು ಖಚಿತವಾಗಿದೆ. ಭಾನುವಾರ ಕಿಚ್ಚ ಸುದೀಪ್ ಅವರು ಕೇಸರಿ ಬಣ್ಣ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ರೂಪದಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ಕೇಸರಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಕಠಿಣ ವ್ರತವನ್ನು ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಖಚಿತವಾಗಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications