ಕಿಚ್ಚ ಸುದೀಪ್ ಚಿಕ್ಕಣ್ಣ ಸಿನಿಮಾ ಬಗ್ಗೆ ಮಾತಾಡ್ತಾ.. ಮಾತಾಡ್ತಾ..

ಕನ್ನಡ ಸಿನಿಮಾ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ರು. ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಸಿನಿಮಾ ಆಫರ್ಸ್ ಬಂದಿದ್ದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿಮಾ ರಂಗದಲ್ಲಿ ಬಿಡುವೇ ಇಲ್ಲದ ನಟನಾಗಿ ಬೆಳೆದು ನಿಂತಿದ್ದಾರೆ ಚಿಕ್ಕಣ್ಣ. ಈ ನಟ ಇದೇ ಮೊದಲ ಬಾರಿ ಹೀರೋ ಆಗಿ ನಟಿಸುತ್ತಿದ್ದು ಈ ಸಿನಿಮಾ ಬಗ್ಗೆ ನಟ ಸುದೀಪ್ ಮನಸ್ಸು ತುಂಬಿ ಮಾತನಾಡಿದ್ದಾರೆ.

ಅಷ್ಟಕ್ಕೂ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ 'ಉಪಾಧ್ಯಕ್ಷ' ಇದೇ 26, ಅಂದರೆ ಜನವರಿ 26ಕ್ಕೆ ರಿಲೀಸ್ ಆಗಲಿದೆ. ಹೀಗಾಗಿ ನಟ ಚಿಕ್ಕಣ್ಣ ಅವರು, ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟರನ್ನು ಭೇಟಿ ಮಾಡಿ, 'ಉಪಾಧ್ಯಕ್ಷ' ಸಿನಿಮಾದ ಟೀಸರ್ & ಟ್ರೇಲರ್ ತೋರಿಸಿ ಅಭಿಪ್ರಾಯ ಪಡೆಯುತ್ತಿದ್ದಾರೆ. ಅದರಲ್ಲೂ, 'ಉಪಾಧ್ಯಕ್ಷ' ಸಿನಿಮಾದ ಟೀಸರ್ & ಟ್ರೇಲರ್ ನೋಡಿದ ಪ್ರತಿಯೊಬ್ಬ ಸ್ಟಾರ್ ಕೂಡ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿ ನಟ ಕಿಚ್ಚ ಸುದೀಪ್ ಕೂಡ, ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾ ಬಗ್ಗೆ ತಮ್ಮದೇ ಅಭಿಪ್ರಾಯ ತಿಳಿಸಿದ್ದಾರೆ.

Kichcha Sudeep Is Wished To Chikkanna For Upadhyaksha Movie

ಕಿಚ್ಚ ಸುದೀಪ್ ಚಿಕ್ಕಣ್ಣ ಸಿನಿಮಾ ಬಗ್ಗೆ...

ಅಂದಹಾಗೆ ಉಪಾಧ್ಯಕ್ಷ ಸಿನಿಮಾ ಟೀಸರ್ ನೋಡಿ ಮಾತನಾಡಿರುವ, ನಟ ಕಿಚ್ಚ ಸುದೀಪ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪೋಷಕ ನಟರಾಗಿದ್ದ ಚಿಕ್ಕಣ್ಣ ಮುಂದೆ ಹಾಸ್ಯ ನಟನ ಪಾತ್ರಕ್ಕೆ ಎಂಟ್ರಿ ಕೊಟ್ಟರು. ಆ ನಂತರ ದೊಡ್ಡ ದೊಡ್ಡ ಪಾತ್ರಗಳನ್ನೂ ಚಿಕ್ಕಣ್ಣ ನಿರ್ವಹಿಸಿ ಗೆದ್ದಿದ್ದಾರೆ. ಅವರ ಬೆಳವಣಿಗೆ ಬಗ್ಗೆ ಹೆಮ್ಮೆ ಇದೆ, ಹಾಗೇ 'ಉಪಾಧ್ಯಕ್ಷ' ಸಿನಿಮಾ ಟೀಸರ್ ಕೂಡ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದಿದ್ದಾರೆ. ಈ ಮೂಲಕ ಚಿಕ್ಕಣ್ಣ ನಟನೆಗೆ & ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಹೆಮ್ಮೆಯನ್ನ ವ್ಯಕ್ತಪಡಿಸಿದ್ದಾರೆ.

ನಟ ಚಿಕ್ಕಣ್ಣ ಈಗಲೂ ಬದಲಾಗಿಲ್ಲ!

ಹಾಗೇ ಇದೇ ವೇಳೆ ನಟ ಚಿಕ್ಕಣ್ಣ ಅವರ ಅಭಿನಯದ ಬಗ್ಗೆ ಕೂಡ ನಟ ಸುದೀಪ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಟ ಚಿಕ್ಕಣ್ಣ ಹಾಸ್ಯ ನಟನ ಜಾಗದಿಂದ ಈಗ ಹೀರೋ ಆಗಿದ್ರು ಕೂಡ, ತಾವು ಬೆಳೆದು ಬಂದ ಹಾದಿ ಮರೆತಿಲ್ಲ. ಹೀಗಾಗಿಯೇ ಮೊದಲ ಬಾರಿಗೆ ಹೀರೋ ಆಗಿದ್ದರೂ ಅಲ್ಲಿ ಫೈಟ್ & ಡಾನ್ಸ್‌ಗೆ ಮಾತ್ರ ಮಹತ್ವ ಕೊಡದೆ ಹಾಸ್ಯಕ್ಕೂ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಮಹತ್ವ ನೀಡಿದ್ದಾರೆ. ಈ ಮೂಲಕ ಅವರು ಮತ್ತಷ್ಟು ಎತ್ತರಕ್ಕೆ ಬೆಳೆದು ನಿಲ್ಲುತ್ತಾರೆ ಎಂದಿದ್ದಾರೆ ನಟ ಕಿಚ್ಚ ಸುದೀಪ್ ಅವರು.

Kichcha Sudeep Is Wished To Chikkanna For Upadhyaksha Movie

'ಅಧ್ಯಕ್ಷ' ಮೆಲುಕು ಹಾಕಿದ ಕಿಚ್ಚ

ಇದೇ ಸಮಯದಲ್ಲಿ 'ಅಧ್ಯಕ್ಷ' ಸಿನಿಮಾ ಬಗ್ಗೆಯೂ ನಟ ಸುದೀಪ್ ಅವರು ಮಾತನಾಡ್ತಾ, ಆ ಸಿನಿಮಾ ಮುಂದುವರಿದ ಭಾಗ ಎನ್ನುವಂತಿರುವ 'ಉಪಾಧ್ಯಕ್ಷ' ಫ್ರಾಂಚೈಸಿ ಸೃಷ್ಟಿಸಿದೆ. ಉಪಾಧ್ಯಕ್ಷರಿಗೆ ತೊಂದರೆ ಆದಾಗ ಅಧ್ಯಕ್ಷರು, ಅಂದರೆ ಶರಣ್ ಅವರು ಬರ್ತಾರೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಫ್ರಾಂಚೈಸಿ ಬಿಲ್ಡ್ ಮಾಡುತ್ತಿದೆ ಹಾಗೇ ಸಾಕಷ್ಟು ಗಮನ ಸೆಳೆಯುತ್ತಿದೆ ಎಂದಿದ್ದಾರೆ ನಟ ಸುದೀಪ್ ಅವರು. ಈ ಮೂಲಕ ಉಪಾಧ್ಯಕ್ಷ ಸಿನಿಮಾ ತಂಡಕ್ಕೆ ಕಿಚ್ಚನ ಶುಭ ಹಾರೈಕೆ ಕೂಡ ಸಿಕ್ಕಿದೆ. ಹಾಗೇ ನಟ ಚಿಕ್ಕಣ್ಣ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ ನಟ ಸುದೀಪ್ ಅವರು.

ನಟ ಚಿಕ್ಕಣ್ಣ ಕಾಮಿಡಿ ಮಾಡ್ತಾ.. ಮಾಡ್ತಾನೆ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅದರಲ್ಲೂ ಈ ನಟನ ಎಂಟ್ರಿ ಇಲ್ಲದೆ, ಬಹುತೇಕ ಸಿನಿಮಾಗಳು ಗೆಲ್ಲಲು ಸಾಧ್ಯವೇ ಆಗಿಲ್ಲ ಎನ್ನಬಹುದು. ಯಾಕಂದ್ರೆ ಕನ್ನಡ ಸಿನಿಮಾ ರಂಗಕ್ಕೆ ಚಿಕ್ಕಣ್ಣ ಅವರಂತಹ, ಒಬ್ಬ ನಟರು ಬೇಕಿದ್ರು. ಆ ಸ್ಥಾನ ತುಂಬಿರುವ ಚಿಕ್ಕಣ್ಣ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಹಿನ್ನೆಲೆ ಕನ್ನಡ ಸಿನಿಮಾ ಪ್ರೇಕ್ಷಕರು ಉಪಾಧ್ಯಕ್ಷ ಸಿನಿಮಾಗಾಗಿ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+