Bigg Boss: ಮನೆಯ ಸ್ಪರ್ಧಿಗಳಿಗೆ ಕರೆಂಟ್ ಶಾಕ್ ಕೊಟ್ಟ ಸುದೀಪ್: ಹೆದರಿ ಬಾತ್‌ರೂಂ ಸೇರಿದ ಹನುಮಂತ

ಬಿಗ್‌ಬಾಸ್‌ ಮನೆಯಲ್ಲಿ ಪ್ರಸ್ತುತ ವಾರದ ಕತೆ ಕಿಚ್ಚನ ಜೊತೆಗೆ ನಡೆಯುತ್ತಿದೆ. ಶನಿವಾರ ತುಂಬಾ ಗಂಭೀರವಾದ ಚರ್ಚೆಗಳು ನಡೆದ ಬಳಿಕ ಭಾನುವಾರ ಅಂದರೆ ಇಂದು ಕಿಚ್ಚನ ಶಾಕ್ ಟ್ರೀಟ್‌ಮೆಂಟ್ ಶುರುವಾಗಿದೆ. ಇದಕ್ಕೆ ಹೆದರಿದ ಹನುಮಂತ ಬಾತ್‌ ರೂಂ ಸೇರಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಖತ್ ಕಾಮಿಡಿಯಾಗಿದೆ.

ಹೌದು... ಕಲರ್ಸ್‌ ಕನ್ನಡ ವಾಹಿನಿ ಇಂದು ಬಿಗ್‌ಬಾಸ್ ಮನೆಯ ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋ ಕ್ಲಿಪ್‌ನಲ್ಲಿ ಕಿಚ್ಚ ಸುದೀಪ್ ಕೇಳುವ ಪ್ರಶ್ನೆಗೆ ಉತ್ತರ ಕೊಡಬೇಕು. ಸೋತವರಿಗೆ ವಿಭಿನ್ನವಾದ ಶಿಕ್ಷೆ ನೀಡಲಾಗುತ್ತದೆ. ಅದೇನೆಂದರೆ ಕರೆಂಟ್ ಶಾಕ್ ಶಿಕ್ಷೆ. ಇದು ಬಿಗ್‌ಬಾಸ್‌ ಸ್ಪರ್ಧಿಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದೆ. ವಿಶೇಷವಾಗಿ ಹನುಮಂತ ಮತ್ತೊಬ್ಬ ಸ್ಪರ್ಧಿಗೆ ಕರೆಂಟ್ ಶಾಕ್ ಕೊಡುವುದನ್ನು ಕಂಡು ಭಯಭೀತರಾಗಿ ಕಿಚ್ಚ ಸುದೀಪ್ ಅವರ ಬಳಿ ಬಾತ್‌ ರೂಂ ಹೋಗಲು ಅನುಮತಿ ಪಡೆದು ಬಾತ್‌ರೂಂಗೆ ಹೋಗಿದ್ದು ಕಂಡು ಬಂದಿದೆ.

Kichcha sudeep gave electric shock to bigg boss contestants hanumantha went bathroom in fear

ಸ್ಪರ್ಧಿಗಳಿಗೆ ಕಿಚ್ಚನ ಶಾಕ್ ಟ್ರೀಟ್‌ಮೆಂಟ್

ಈ ವೀಡಿಯೋ ಸಖತ್ ಕಾಮಿಡಿಯಾಗಿದ್ದು ಕಿಚ್ಚ ಸುದೀಪ್ ಹನುಮಂತ ಬಾತ್‌ರೂಂ ಹೋಗಲು ಅನುಮತಿ ಕೋರುತ್ತಿದ್ದಂತೆ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ. ಸುದೀಪ್ ಮಾತ್ರವಲ್ಲ ಬಿಗ್‌ಬಾಸ್‌ ವೀಕ್ಷಕರೂ ಕೂಡ ಈ ವೀಡಿಯೋ ನೋಡಿ ಸಖತ್ ಎಂಜಾಯ್ ಮಾಡಿದ್ದಾರೆ. ಅಷ್ಟಕ್ಕೂ ವೈರಲ್ ವೀಡಿಯೋದಲ್ಲಿ ಏನಿದೆ? ಕಿಚ್ಚಾ ಸುದೀಪ್ ಕೇಳಿದ ಪ್ರಶ್ನೆಗಳು ಏನು? ಯಾರಿಗೆಲ್ಲಾ ಕರೆಂಟ್ ಶಾಕ್ ಶಿಕ್ಷೆ ಕೊಡಲಾಗುತ್ತದೆ? ಎಲ್ಲವನ್ನು ತಿಳಿಯೋಣ.

ಬಿಗ್‌ಬಾಸ್‌ ಕನ್ನಡ ಸೀಸನ್ 11 ಈಗಾಗಲೇ ಫಿನಾಲೆ ಹಂತ ತಲುಪುತ್ತಿದೆ. ಮನೆಯ ಸ್ಪರ್ಧಿಗಳಿಗೆ ಆಟ ಕಠಿಣವಾಗುತ್ತಿದೆ. ಶನಿವಾರ ತಪ್ಪು ಮಾಡಿದ ಎಲ್ಲಾ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡ ಸುದೀಪ್ ಇಂದು ತಪ್ಪು ಹೇಳುವ ಸ್ಪರ್ಧಿಗಳಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ.

ಕರೆಂಟ್ ಶಾಕ್ ಗೇಮ್ ಹೇಗಿದೆ?

ಬಿಗ್‌ಬಾಸ್‌ ಕನ್ನಡ ಸೀಸನ್ 11ರದುದ್ದಕ್ಕೂ ನಡೆದ ಘಟನೆಗಳ ಬಗ್ಗೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಪ್ರಶ್ನೆ ಕೇಳುತ್ತಾರೆ. ಪ್ರಶ್ನೆಗೆ ಉತ್ತರ ನೀಡುವ ಸ್ಪರ್ಧಿಯನ್ನು ಒಂದು ಖುರ್ಚಿ ಮೇಲೆ ಕೂಡಿಸಿ ಪವರ್‌ ಶಾಕ್ ಕೊಡುವ ಬೆಲ್ಟ್‌ ಅನ್ನು ಕೈಗೆ ಹಾಕಲಾಗುತ್ತದೆ. ಬಳಿಕ ಒಂದು ಸ್ಲೇಟ್ ಹಾಗೂ ಮಾರ್ಕರ್ ಪೆನ್ ಅನ್ನು ನೀಡಲಾಗುತ್ತದೆ. ಕಿಚ್ಚ ಕೇಳುವ ಪ್ರಶ್ನೆಗೆ ಸ್ಪರ್ಧಿ ಸ್ಲೇಟ್‌ ಮೇಲೆ ಉತ್ತರ ಬರೆದು ತೋರಿಸಬೇಕು. ತಪ್ಪಾಗಿ ಉತ್ತರ ನೀಡುವ ಸ್ಪರ್ಧಿಗೆ ಕರೆಂಟ್ ಶಾಕ್ ಕೊಡಲಾಗುತ್ತದೆ.

ಸುದೀಪ್ ಪ್ರಶ್ನೆ ಹೀಗಿತ್ತು:

ಈಗ ಇರುವ ಒಂಬತ್ತು ಸ್ಪರ್ಧಿಗಳಲ್ಲಿ ಕೊನೆಯಲ್ಲಿ ಎಂಟ್ರಿ ಆಗಿದ್ದು ಯಾರು? ಉಳಿದಿರುವ ಸ್ಪರ್ಧಿಗಳಲ್ಲಿ ಯಾರು ಯಾರು ಜೈಲಿಗೆ ಹೋಗಿಲ್ಲ? ಇಲ್ಲಿ ತಪ್ಪಾಗಿ ಉತ್ತರ ನೀಡುವ ಸ್ಪರ್ಧಿಗೆ ಮಾತ್ರವಲ್ಲ ಉತ್ತರ ಸರಿ ಇದ್ದವರಿಗೂ ಕಿಚ್ಚ ಕರೆಂಟ್ ಶಾಕ್ ಕೊಡಲು ಹೇಳುತ್ತಾರೆ. ಹೀಗಾಗಿ ಈ ಆಟ ಮತ್ತಷ್ಟು ಇಂಟ್ರಸ್ಟಿಂಗ್ ಆಗಿರುತ್ತದೆ.

ಯಾರಿಗೆಲ್ಲಾ ಕರೆಂಟ್ ಶಾಕ್:-

ಮೊದಲಿಗೆ ತಪ್ಪು ಉತ್ತರ ನೀಡಿದ್ದಕ್ಕಾಗಿ ರಜತ್‌ಗೆ ಕರೆಂಟ್ ಶಾಕ್ ಕೊಡಲಾಗುತ್ತದೆ. ಇದರಿಂದ ಬೆಚ್ಚಿ ಬಿದ್ದ ಮನೆ ಮಂದಿ ಫುಲ್ ತಂಡಾ ಹೊಡೆಯುತ್ತಾರೆ. ಘಟಾನುಘಟಿ ರಜತ್‌ ಕಿರುಚಿದ ರೀತಿ ಕಂಡು ಹನುಮಂತ ಸೈಲೆಂಟಾಗಿ ಹೋಗುತ್ತಾರೆ. ಬಳಿಕ ಧನ್‌ರಾಜ್, ಗೌತಮಿ, ಮಂಜುಗೆ ಕರೆಂಟ್ ಶಾಕ್ ಕೊಡಲಾಗುತ್ತದೆ.

ಫುಲ್ ತಂಡಾ ಹೊಡೆದ ಹನುಮಂತ

ಇವೆರೆಲ್ಲರ ಬಳಿಕ ಹನುಮಂತನನ್ನು ಕರೆಯಲಾಗುತ್ತದೆ. ಆಗ ಹನುಮಂತ ಸಣ್ಣ ಮಕ್ಕಳಂತೆ ಸುದೀಪ್ ಅವರಿಗೆ-' ಸರ್ ನಾನು ಬಾತ್‌ರೂಮ್‌ಗೆ ಹೋಗಿ (ಉ...) ಬರ್ಲಾ ಸರ್..' ಎಂದು ಕೇಳುತ್ತಾರೆ. ಹನುಮಂತ ಈ ಮಾತನ್ನು ಕೇಳಿದ ರೀತಿ ಶಾಲೆಯಲ್ಲಿ ಶಿಕ್ಷಕರು ಹೊಡೆಯುವ ಮುನ್ನ ಮಕ್ಕಳು ಹೇಗೆ ವರ್ತಿಸುತ್ತಾರೋ ಹಾಗೆ ಇತ್ತು. ಇದಕ್ಕೆ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ನಗಾಡಿದ್ದಾರೆ. ಹನುಮಂತನಿಂದ ಈ ಮಾತನ್ನು ನಿರೀಕ್ಷೆ ಮಾಡದ ಕಿಚ್ಚ ಸುದೀಪ್ ಕೂಡ ಕಣ್ಣೀರು ಬರುವಷ್ಟು ನಗಾಡಿದ್ದಾರೆ.

ಅವರವರ ಕಷ್ಟ ಅವರಿಗೆ ಗೊತ್ತು ಅನ್ನೋ ಹಾಗೆ ಇಲ್ಲಿ ಹನುಮಂತ ಕರೆಂಟ್ ಶಾಕ್ ಕೊಡುವ ಮುನ್ನ ಬಾತ್‌ರೂಂಗೆ ಹೋಗಿದ್ದು, ಅದಕ್ಕಾಗಿ ಅವರು ಸುದೀಪ್ ಅವರನ್ನು ಅನುಮತಿ ಕೋರಿದ ರೀತಿಗೆ ಬಿಗ್‌ಬಾಸ್‌ ವೀಕ್ಷಕರು ಹೊಟ್ಟೆಹುಣ್ಣಾಗುವಷ್ಟು ನಗಾಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಯಾರು ಶಾಕ್ ಹೊಡೆಸಿಕೊಂಡರು ಯಾರು ಶಾಕ್ ಹೊಡೆಸಿಕೊಳ್ಳುವುದಿಲ್ಲ ಎಲ್ಲವೂ ಗೊತ್ತಾಗಲಿದೆ. ಒಟ್ಟಿನಲ್ಲಿ ಇಂದಿನ ಸಂಚಿಕೆ ಸಖತ್ ಮಜವಾಗಿರುವುದು ಮಾತ್ರ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+