Kiccha Sudeep: ಬನ್ನಿ.. ಬಿಗ್‌ಬಾಸ್ ನಡ್ಸಿಕೊಡೋದೇ ಹುಚ್ಚ ಎಂದಿದ್ಯಾಕೆ ಕಿಚ್ಚ ಸುದೀಪ್ ?!

Kiccha Sudeep: ಕನ್ನಡ ಬಿಗ್‌ಬಾಸ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ಬಂದಿದೆ. ನಟ ಕಿಚ್ಚ ಸುದೀಪ್ ಅವರು, ಕನ್ನಡ ಬಿಗ್‌ಬಾಸ್ ಸೀಸನ್‌ 12 ನಿರೂಪಣೆ ಮಾಡುವುದಾಗಿ ಹೇಳಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದೆ. ಬಿಗ್‌ಬಾಸ್ ಪ್ರಾರಂಭವಾಗುವುದಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಸಮಯವಿದೆ. ಈ ರೀತಿ ಇರುವಾಗಲೇ ಕೆಲವೊಂದು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಹುಚ್ಚರ ಸಂತೆ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ಅವರು ಈ ಶೋ ನಡೆಸಿಕೊಡುವುದೇ ಹುಚ್ಚ ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ಗೆ ಯಾರು ಬರಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಕಳೆದ ಬಾರಿ ಬಿಗ್‌ಬಾಸ್ ನಿರೂಪಣೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಮುಂದಿನ ಸೀಸನ್‌ನಿಂದ ನಾನು ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲ ಅಂತಲೇ ಕಿಚ್ಚ ಸುದೀಪ್ ಅವರು ಹೇಳಿದ್ದರು. ಇದೀಗ ಈ ವಿಚಾರವಾಗಿ ಮಾತನಾಡಿರುವ ಅವರು ಜನರ ಪ್ರೀತಿ & ವಿಶ್ವಾಸದ ಕಾರಣಕ್ಕೆ ನಾನು ವಾಪಸ್‌ ಬಂದಿದ್ದೇನೆ. ತುಂಬಾ ಜನ ಪ್ರೀತಿಯಿಂದ ಕರೆದ ಕಾರಣಕ್ಕೆ ನಾನು ಬಂದಿದ್ದೇನೆ. ಬಿಗ್‌ಬಾಸ್ ತಂಡದವರು ಪದೇ ಪದೇ ಮನವೊಲಿಸಿದ್ದಾರೆ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

Kiccha Sudeep s surprising statement about contestants coming to Bigg Boss Kannada Season 12

ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ಗೆ ಬರುವುದು ಕನ್ಫರ್ಮ್ ಆಗಿರುವ ಬೆನ್ನಲ್ಲೇ ಅವರು ಈ ಬಾರಿಯ ಸೀಸನ್‌ನ ಬಗ್ಗೆಯೂ ಮಾತನಾಡಿದ್ದಾರೆ. ಕಳೆದ ಬಾರಿಯ ಬಿಗ್‌ಬಾಸ್ ಸೀಸನ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಗ್‌ಬಾಸ್ ಸೀಸನ್‌ನಲ್ಲಿ ನಡೆದ ಗಲಾಟೆಯಿಂದ ಇಬ್ಬರು ಹೊರ ನಡೆದಿದ್ದರು. ಬಿಗ್‌ಬಾಸ್‌ನಲ್ಲಿ ಕೆಲವೊಂದು ವಿವಾದಗಳು ಸಹ ಸೃಷ್ಟಿಯಾಗಿದ್ದವು. ಹೀಗಾಗಿ, ಈ ಬಾರಿಯ ಸೀಸನ್ ಯಾವ ರೀತಿ ಇರಲಿದೆ ಹಾಗೂ ಯಾರು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲಗಳು ಇವೆ. ಇದಕ್ಕೆ ಹಾಸ್ಯವಾಗಿಯೇ ಕಿಚ್ಚ ಸುದೀಪ್ ಅವರು ರಿಯಾಕ್ಟ್‌ ಮಾಡಿದ್ದಾರೆ.

ಹುಚ್ಚರ ಸಂತೆ: ಬಿಗ್‌ಬಾಸ್‌ ಸೀಸನ್ 12ರ ಬಗ್ಗೆ ಪತ್ರಕರ್ತರು ಕೇಳಿರುವ ಕೆಲವೊಂದು ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಅವರು ನಗುತ್ತಲ್ಲೇ ಅವರದ್ದೇ ಶೈಲಿಯಲ್ಲಿ ಮಾತನಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಈ ವರ್ಷ ನಿಮ್ಮ ಎಷ್ಟು ಸಿನಿಮಾಗಳು ಬರಲಿವೆ ಹಾಗೂ ಈ ಬಾರಿಯ ಆಯ್ಕೆ ಹೇಗೆ ಇರಲಿದೆ ಎನ್ನುವುದು ಸೇರಿದೆ.

ಸೋಷಿಯಲ್ ಮೀಡಿಯಾದಲ್ಲಿ ಹುಚ್ಚರ ಸಂತೆ ಶುರುವಾಗಿದೆ. ಬಿಗ್‌ಬಾಸ್‌ಗೆ ಬರಬೇಕು ಎನ್ನುವ ಕಾರಣಕ್ಕೆ ಸೋಷಿಯಲ್ ಮೀಡಿಯಾ ಹಾಗೂ ಇನ್ಸ್‌ಟಾದಲ್ಲಿ ಕೆಲವರು ವಿಚಿತ್ರವಾದ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ "ಬಿಗ್‌ಬಾಸ್‌ಗೆ ಬರಬೇಕು ಎನ್ನುವ ಕಾರಣಕ್ಕೆ ಹುಚ್ಚರ ಸಂತೆ ಶುರುವಾಗಿದೆ" ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದು. ಇದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ್ ಅವರು, ಬನ್ನಿ... ನೀವು ಹೇಳಿದ್ರಿ ಹುಚ್ಚರ ಸಂಖ್ಯೆ ಅಂತ.. ಹುಚ್ಚನೇ ನಡೆಸಬೇಕಾದರೆ, ಸಂಖ್ಯೆ ಬಗ್ಗೆ ಏನಿದೆ. ಬನ್ನಿ ಅಂತ ಕಿಚ್ಚ ಸುದೀಪ್ ಅವರು ನಕ್ಕಿದ್ದಾರೆ.

ಅಲ್ಲದೇ ಒಂದೂವರೆ ವರ್ಷಕ್ಕೆ ಮೂರು ಸಿನಿಮಾ ಅಂತ ಈ ಹಿಂದೆ ಹೇಳಿದ್ರಿ, ಈಗ ಬಿಗ್‌ಬಾಸ್‌ಗೆ ಬಂದರೆ ಸಿನಿಮಾ ಸಾಧ್ಯವೇ ಎನ್ನುವ ಪ್ರಶ್ನೆಗೆ ಕಾದು ನೋಡಿ ಅಂತ ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+