Kiccha Sudeep: ಬಿಗ್ ಬಾಸ್ ಕನ್ನಡ ಸೀಸನ್ 12 ನಡೆಸೋದ್ಯಾರು; ಕಿಚ್ಚ ಸುದೀಪ್ ಗುಡ್ ನ್ಯೂಸ್
Kiccha Sudeep: ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕೂಡ ಒಂದಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸ್ವತಃ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಕನ್ನಡ ಸೀಸನ್ 12 ಅನ್ನು ನಾನು ಮಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದೀಗ ಈ ಬಗ್ಗೆ ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
12ನೇ ಸೀಸನ್ ನಡೆಸಿಕೊಡುವುದಿಲ್ಲ ಎಂದು ಸುದೀಪ್ ಅವರು ಹೇಳಿದ ಬೆನ್ನಲ್ಲೇ ಈ ವೇದಿಕೆಗೆ ಯಾರು ಸೂಕ್ತ ಎನ್ನವ ಪ್ರಶ್ನೆಗಳು ಜನರಲ್ಲಿ ಕಾಡತೊಡಗಿದ್ದವು. ಇದರ ನಡುವೆಯೇ ರಿಷಬ್ ಶೆಟ್ಟಿ ಅವರ ಹೆಸರು ಕೇಳಿಬಂದಿದ್ದು. ಆಗ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಸುದೀಪ್, ಅವರು ನನ್ನ ತಮ್ಮ ಇದ್ದಂತೆ. ಅವರೇ ನಡೆಸಿಕೊಟ್ಟರೂ ನನಗೆ ತುಂಬಾ ಸಂತೋಷ ಎಂದು ಹೇಳಿದ್ದರು.

ಆದರೆ, ಸುದೀಪ್ ಅವರು ಮುಂದಿನ ಬಾರಿ ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ವಿಚಾರ ತಿಳಿದ ಅಭಿಮಾನಿಗಳು ಹಾಗೂ ಕನ್ನಡದ ಜನತೆ ಬೇಸರ ವ್ಯಕ್ತಪಡಿಸಿದ್ದರು. ಅವರು ಬಿಟ್ಟರೆ, ಈ ಸ್ಥಾನಕ್ಕೆ ಯಾರೂ ಅರ್ಹರಲ್ಲ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಇದೀಗ ಮತ್ತೆ ಕಿಚ್ಚ ಸುದೀಪ್ ಅವರು ಮಹತ್ವದ ವಿಚಾರವೊಂದನ್ನು ಹೊರಹಾಕಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಸದ್ಯ ಮ್ಯಾಕ್ಸ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರದ ಹಿನ್ನೆಲೆ ನಡೆದ ಸಂದರ್ಶನದಲ್ಲಿ ಅವರಿಗೆ ಮಾಧ್ಯಮದವರು ಒಂದು ಪ್ರಶ್ನೆ ಕೇಳಿದರು. ಬಿಗ್ ಬಾಸ್ ನೀವು ಮಾಡೋದಿಲ್ಲವಾ ಅಥವಾ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ನಟಿ-ನಿರೂಪಕಿ ಜಾಹ್ನವಿ ನಡೆಸಿರುವ ಸಂದರ್ಶನದಲ್ಲೂ ಕೂಡ ಸುದೀಪ್ ಇದೇ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ಸೂಕ್ತ ಉತ್ತರ ನೀಡುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಸೀಸನ್ 11 ಆರಂಭವಾಗುವ ಮುನ್ನವೇ ಸುದೀಪ್ ಅವರು ಬಿಗ್ ಬಾಸ್ ಮಾಡುವುದಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ, ಅದು ಸೀಸನ್ 11 ಆರಂಭ ಆಗುತ್ತಿದ್ದಂತೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿ ಮುಂದಿನ ಸೀಸನ್ ನಾನು ಇರುವುದಿಲ್ಲ ಎಂದು ತಿಳಿಸಿದ್ದರು.
ಇನ್ನು ಇದೀಗ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ನಿರ್ಧಾರವನ್ನು ನಾನು ಹೇಳಿದ್ದೇನೆ. ಟ್ವಿಟರ್‌ನಲ್ಲೂ ಬರೆದುಕೊಂಡಿದ್ದೇನೆ. ಬಿಗ್ ಬಾಸ್ ಸಾಕು ಅನಿಸುತ್ತಿದೆ. ಅದಕ್ಕೆ ಮುಂದೆ ಮಾಡುವುದಿಲ್ಲ ಅಂತಲೇ ಹೇಳಿಕೊಂಡಿದ್ದೇನೆ. ಆದರೆ, ಕಲರ್ಸ್ ಕನ್ನಡ ವಾಹಿನಿ ಅದನ್ನು ಇನ್ನೂ ಒಪ್ಪಿಕೊಳ್ಲೂತ್ತಿಲ್ಲ ಬಿಡಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಸೀಸನ್ 12 ಇನ್ನೂ ಆರಂಭವಾಗಿಲ್ಲ. ಅದು ಆದಾಗ ನೋಡೋಣ. ಮತ್ತೆ ಮಾಡಲೇಬೇಕು ಅನಿಸಿದರೆ, ಯೋಚನೆ ಮಾಡುತ್ತೇನೆ. ಆದರೆ, ಟ್ವೀಟ್ ಮಾಡಿದ್ದೇನೆ. ಅದಕ್ಕೆ ಮಾಡುವುದಿಲ್ಲ ಎಂದು ದೃಢ ನಿರ್ಧಾರ ಮಾಡುವುದಿಲ್ಲ. ಆ ಸಮಯಕ್ಕೆ ಏನು ಅನಿಸುತ್ತದೆಯೋ ಅದನ್ನೇ ಮಾಡುತ್ತೇನೆ ಎಂದು ಸುದೀಪ್ ಅವರು ಹೇಳಿಕೊಂಡಿದ್ದಾರೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಬಿಗ್ ಬಾಸ್ ಮಾಡಲೇಬಾರದು ಎಂದೆನಿಸಿದು. ಆಯೋಚನೆ ಬಂದಾಗ ಸುಮ್ಮಬೆ ಇರಲಿಲ್ಲ. ಬದಲಾಗಿ ಬೆಳಗ್ಗೆವರೆಗೂ ಕಾದು ನೋಡೋಣ ಅಂತಾ ಯೋಚನೆ ಕೂಡ ಮಾಡಲಿಲ್ಲ. ಬೆಳಗ್ಗೆ ಮನಸು ಬದಲಾಗಬಹುದು ಎಂದು ರಾತ್ರಿನೇ ಟ್ವೀಟ್ ಮಾಡಿದ್ದೇನೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ. ಸದ್ಯಕ್ಕೆ ಬಿಗ್ ಬಾಸ್ ಸಾಕು ಅನಿಸಿದೆ. ಸೀಸನ್ 12 ಅಂತಾ ಬಂದಾಗ ನೋಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಗ್ ಬಾಸ್ ವಿಚಾರದ ಪ್ರಶ್ನೆಗೂ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಬಿಗ್ ಬಾಸ್ ಇನ್ನೂ ಸುಧಾರಿಸಬೇಕಿದೆ. ಬೇರೆ ಭಾಷೆಯ ಬಿಗ್ ಬಾಸ್‌ಗೆ ಹೋಲಿಸಿದ್ರೆ, ಸ್ವಲ್ಪ ಕೊರತೆ ಕಾಣಿಸುತ್ತದೆ. ಅದು ಬದಲಾಗಬೇಕಿದೆ ಎಂದು ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ 12 ಯಾರು ಮಾಡುತ್ತಾರೆ ಎನ್ನುವು ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ. ಆದರೆ, ಬಹುತೇಕ ಮಂದಿ ಮತ್ತೆ ಈ ಸ್ಥಾನ ತುಂಬಲು ಅವರನ್ನು ಬಿಟ್ಟರೆ ಯಾರೂ ಸಾಧ್ಯ. ಅವರೇ ಇದ್ದರೆ ಸೂಕ್ತ ಎನ್ನುವ ಮಾತುಗಳು ಜೀರಾಗಿ ಕೇಳಿಬರುತ್ತಿವೆ.












Click it and Unblock the Notifications