ಕಿಚ್ಚ ಸುದೀಪ್‌ ಹೊಸ ಸಿನಿಮಾಗೆ ಬಿಗ್‌ ಶಾಕ್‌, ಏನಿದು ಮಾರ್ಕ್‌ ವಿವಾದ?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್‌ (Kichcha Sudeep) ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಮುಂದಿನ ಸಿನಿಮಾಗಳ ಪೋಸ್ಟರ್‌, ಟೈಟಲ್‌ ರಿವೀಲ್‌ ಆಗಿತ್ತು. ಸದ್ಯ ಬಿಲ್ಲ ರಂಗ ಬಾಷ (ಬಿಆರ್‌ಬಿ) ಹಾಗೂ ಮಾರ್ಕ್‌ ಸಿನಿಮಾ ಬಗ್ಗೆ ಅಪ್ಡೇಟ್‌ ನೀಡಲಾಗಿತ್ತು. ಕಿಚ್ಚ ಸುದೀಪ್‌ ನಟನೆಯ ಹೊಸ ಸಿನಿಮಾಗೆ "ಮಾರ್ಕ್‌" ಎಂಬ ಟೈಟಲ್‌ ಇಡಲಾಗಿದೆ. ಇತ್ತೀಚೆಗಷ್ಟೇ ಸಿನಿಮಾದ ಹೆಸರು ಘೋಷಣೆಯಾಗಿತ್ತು. ಮ್ಯಾಕ್ಸ್‌ ಬಳಿಕ ಮಾರ್ಕ್‌ ಕೂಡ ಚೆನ್ನಾಗಿದೆ ಎಂದು ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ಈಗ ಇದೇ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ 'ಮಾರ್ಕ್' ಸಿನಿಮಾ ಟೈಟಲ್ ರಿವೀಲ್ ಆಗಿತ್ತು. ಆಯಿತು. ಇದು ಕಿಚ್ಚ ನಟಿಸುತ್ತಿರುವ 47ನೇ ಸಿನಿಮಾ. ಮೊದಲಿಗೆ ಈ ನಂಬರ್‌ನಿಂದಲೇ ಹೊಸ ಸಿನಿಮಾ ಘೋಷಣೆಯಾಗಿತ್ತು. ಈಗಾಗಲೇ ಈ ಸಿನಿಮಾದ ಶೂಟಿಂಗ್‌ ಕೂಡ ಬಹುಪಾಲು ಪೂರ್ಣಗೊಂಡಿದ್ದು, ಟೈಟಲ್‌ ಘೋಷಣೆ ಮಾಡಲಾಗಿದೆ. ಈ ಸಿನಿಮಾ ಇದೇ ಡಿಸೆಂಬರ್‌ ಕ್ರಿಸ್‌ಮಸ್‌ ವೇಳೆಗೆ ರಿಲೀಸ್‌ ಆಗುವ ನಿರೀಕ್ಷೆ ಇದ್ದು, ಇದರ ಬೆನ್ನಲ್ಲೇ ಟೈಟಲ್‌ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ.

Kiccha Sudeep New Film Mark Title Controversy

ವಿಜಯ್ ಕಾರ್ತಿಕೇಯನ್ ಅವರು ಮಾರ್ಕ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಗ್‌ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಈ ಕ್ರಿಸ್‌ಮಸ್ ವೇಳೆಗೆ "ಮಾರ್ಕ್" ಸಿನಿಮಾ ರಿಲೀಸ್‌ ಮಾಡುವುದಾಗಿ ಘೋಷಣೆಯೂ ಆಗಿದೆ. ಟೈಟಲ್‌ ಟೀಸರ್ ನೋಡಿ ಕಿಚ್ಚ ಫ್ಯಾನ್ಸ್‌ ಕೂಡ ಫಿದಾ ಆಗಿದ್ದರು. ಇದೇ ಸಿನಿಮಾಗಾಗಿ ಸುದೀಪ್‌ ತಮ್ಮ ಹೇರ್‌ಸ್ಟೈಲ್‌ ಕೂಡ ಬದಲಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದಕ್ಕೆ ಮಾರ್ಕ್‌ ಎನ್ನುವ ಟೈಟಲ್‌ ಫಿಕ್ಸ್‌ ಮಾಡಲಾಗಿದೆ. ಆದರೆ ಈ ಟೈಟಲ್‌ ನಮ್ಮದು ಎಂದು ಆರೋಪಿಸಿದ್ದಾರೆ.

'ಆ ಟೈಟಲ್‌ ನಮ್ದು'

ಈ ಬಗ್ಗೆ ನಟ ಮನು ರಾಜ್‌ ಎಂಬುವವರು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು, 'ಗೌರವ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಾವು "ಮಾರ್ಕ್" ಎಂಬ ಸಿನಿಮಾ ಮಾಡಲು ಮುಂದಾಗಿದ್ವಿ. ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಿದ್ದೀವಿ. ಇದೀಗ ಸುದೀಪ್ ಸರ್ ಚಿತ್ರಕ್ಕೂ ಅದೇ ಟೈಟಲ್ ಇಟ್ಟಿರುವುದು ನಮಗೆ ಶಾಕ್‌ ನೀಡಿದೆ. ಈಗಾಗಲೇ ನಾವು ಟೈಟಲ್ ಪಡೆದಿದ್ದರೂ ಬೇರೆಯವರಿಗೆ ಅದೇ ಟೈಟಲ್ ಕೊಡಲು ಹೇಗೆ ಸಾಧ್ಯ? ಎಂದು ಕೇಳಿದ್ದಾರೆ. ಕೂಡಲೇ ಗೊಂದಲ ಪರಿಹರಿಸಿ ನಮಗೆ ಟೈಟಲ್ ಕೊಡಬೇಕು' ಎಂದು ಕೇಳಿಕೊಂಡಿದ್ದಾರೆ.

Kiccha Sudeep New Film Mark Title Controversy

'ಇದೇ ವರ್ಷ ಮಾರ್ಕ್ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ, ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ' ಎಂದು ಶೇರ್‌ ಮಾಡಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾರ್ಕ್ ಟೈಟಲ್ ಕೇಳಿ ಗೌರವ್ ಮೂವಿ ಮೇಕರ್ಸ್ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಸುದೀಪ್‌ ಅವರ ಚಿತ್ರಕ್ಕೂ ಅದೇ ಟೈಟಲ್‌ ಇಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಟೈಟಲ್‌ ವಿವಾದಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+