Bigg Boss: ಶಿವಣ್ಣ, ಸುದೀಪ್‌, ಉಪೇಂದ್ರ ಬಿಗ್‌ ಬಾಸ್‌ ಮನೆಯೊಳಗೆ: ಮುಂದೇನಾಗುತ್ತೆ?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಬಳಿಕ ನಾನು ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಹೋಸ್ಟ್‌ ಕಿಚ್ಚ ಸುದೀಪ್ ಈಗಾಗಲೇ ಘೋಷಿಸಿದ್ದಾರೆ. ಸುದೀಪ್ ಮುಂದಿನ ಬಿಗ್‌ ಬಾಸ್‌ ಸೀಜನ್‌ನಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಹೋಗುತ್ತಾರೆ. ಹೀಗಾಗಿ ಅವರು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಲ್ಲ ಎನ್ನುವ ಗಾಸಿಪ್‌ ಎಲ್ಲೆಡೆ ಹರಿದಾಡುತ್ತಿದೆ. ಈ ಗಾಳಿ ಮಾತಿಗೆ ನಟ ಕಿಚ್ಚ ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

ಮಿರ್ಚಿ ಕನ್ನಡ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, ನಾನು ಬಿಗ್‌ ಬಾಸ್‌ ಬಿಡುತ್ತೇನೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಬಿಗ್‌ ಬಾಸ್‌ ಸ್ಪರ್ಧಿಯಾಗಿ ಮನೆಯ ಒಳಗೆ ಹೋಗುತ್ತೇನೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ನಾನು ಬಿಗ್‌ ಬಾಸ್‌ ಮನೆಯೊಳಗೆ ಹೋದರೆ ನನ್ನ ಸಹ ಸ್ಪರ್ಧಿಯಾರಾಗುತ್ತಾರೆ ಎಂದು ಕಿಚ್ಚ ಸುದೀಪ್‌ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ನಿರೂಪಕರು ಕೆಲವು ಸಿನಿಮಾ ನಟ-ನಟಿಯರ ಹೆಸರುಗಳನ್ನು ಕೊಟ್ಟಿದ್ದು, ಅವರೊಂದಿಗೆ ಬಿಗ್‌ ಬಾಸ್‌ ಮನೆಗೆ ಹೋದರೆ ಏನಾಗುತ್ತದೆ ಎನ್ನುವುದನ್ನು ಕಿಚ್ಚ ಸುದೀಪ್‌ ವಿವರಿಸಿದ್ದಾರೆ.

Kiccha Sudeep Discusses About Participation In Bigg Boss Kannada

ಒಂದು ವೇಳೆ ಶಿವಣ್ಣ ಬಿಗ್‌ ಬಾಸ್‌ನಲ್ಲಿ ಸಹ ಸ್ಪರ್ಧಿಯಾದರೆ ನಾವೇ ಅವರನ್ನು ಗೆಲ್ಲಿಸುತ್ತೇವೆ. ಅವರು ಏನೂ ಶ್ರಮ ಪಡುವುದೇ ಬೇಡ. ಶಿವಣ್ಣ ಗೆಲ್ಲಬೇಕು ಅಂತಾ ನಾವೇ ಗೆಲ್ಲಿಸುತ್ತೇವೆ. ಧ್ರುವ ಸರ್ಜಾ ಸಹ ಸ್ಪರ್ಧಿಯಾದರೆ ನಾನೇ ಅವರನ್ನು ಕರೆದು ಹೇಳುತ್ತೇನೆ. ನಾನೇ ಗೆಲ್ಲಬೇಕು ಸುಮ್ಮನೆ ಸೈಡ್‌ಗೆ ಬಾ ಅಂತಾ. ಮರ್ಯಾದೆ ಉಳಿಸಿಕೊಳ್ಳೋಣ ಅಂತಾ ಹೇಳುತ್ತೇವೆ. ಅವರು ಖಂಡಿತಾ ಆಯ್ತು ಎನ್ನುತ್ತಾರೆ ಎಂದು ಸುದೀಪ್ ಹೇಳಿದರು.

Kiccha Sudeep Discusses About Participation In Bigg Boss Kannada

ರಮ್ಯಾ ಅವರು ಬಿಗ್‌ ಬಾಸ್‌ನಲ್ಲಿ ನನ್ನ ಸಹ ಸ್ಪರ್ಧಿಯಾದರೆ ಬಿಗ್‌ ಬಾಸ್‌ ಮನೆಯ ಬಾಗಿಲಿನ ಮತ್ತೊಂದು ಕೀಯನ್ನು ನಾನೇ ಇಟ್ಟುಕೊಂಡಿರುತ್ತೇನೆ. ಯಾಕೆಂದರೆ ಒಂದೇ ಅವರು ಓಡೊಹೋಗುತ್ತಾರೆ. ಇಲ್ಲ ನಾನೇ ಓಡಿ ಹೋಗುತ್ತೇನೆ. ನಾವಿಬ್ಬರು ತುಂಬಾ ಒಳ್ಳೆ ಸ್ನೇಹಿತರು. ನಾವೇನಿದ್ದರೂ ಸ್ಪಲ್ಪ ಸಮಯ ಕಳೆಯಲು ಅಷ್ಟೇ ಎಂದು ಹೇಳಿದರು.

Kiccha Sudeep Discusses About Participation In Bigg Boss Kannada

ಒಂದು ವೇಳೆ ಉಪೇಂದ್ರ ಅವರು ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾದರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್‌, ಉಪ್ಪಿ ಸರ್‌ ಇರುವ ಕಡೆ ಬಿಗ್‌ ಬಾಸ್‌ಗೆ ಏನು ಕೆಲಸ ಎನ್ನುವುದನ್ನು ಯೋಚನೆ ಮಾಡಬೇಕಾಗುತ್ತದೆ. ಟಾಸಕ್‌ ಅವರೊಂದು ಕೊಟ್ಟರೆ, ಇವರೊಂದು ಮಾಡುತ್ತಿರುತ್ತಾರೆ. ಬಿಗ್‌ ಬಾಸ್‌ ಕೊಟ್ಟಿರುವುದು ಟಾಸ್ಕ್‌ ಅಲ್ಲ ಅವರು ಕೊಟ್ಟಿರುವೇ ತಪ್ಪು. ಅವರು ಮಾಡುವುದೇ ತಪ್ಪು, ಬಿಗ್‌ ಬಾಸ್‌ ತಪ್ಪು ಎನ್ನುತ್ತಾರೆ. ಉಪೇಂದ್ರ ಅವರು ಬಿಗ್‌ ಬಾಸ್‌ ಮನೆಯೊಳಗಡೆ ಇದ್ದರೆ ಉಳಿದ ಎಲ್ಲಾ ಸ್ಪರ್ಧಿಗಳು ಕಳಪೆಗೆ ಹೋಗುತ್ತಾರೆ ಎಂದರು. ಇನ್ನು ಇದೇ ವೇಳೆ ಹುಚ್ಚ ವೆಂಕಟ್‌ ಬಗ್ಗೆ ಮಾತನಾಡಿದ ಸುದೀಪ್‌, ಹುಚ್ಚ ವೆಂಕಟ್‌ ಒಬ್ಬ ಒಳ್ಳೆಯ ಮನುಷ್ಯ. ಅವರಿಗೆ ಸಹಾಯ ಬೇಕಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+