Bigg Boss: ವಾರದ ಕಥೆ ಕಿಚ್ಚನ ಜೊತೆ; ಬಿಗ್ ಬಾಸ್ ಬಿಗ್ ಟ್ವಿಸ್ಟ್!
Bigg Boss: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಒಂದಾಗಿದೆ. 11ನೇ ಸೀಸನ್ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಅದರಲ್ಲೂ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನೋಡಲು ಕೊಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ಈ ವಾರದ ಪ್ರೋಮೋದಲ್ಲಿ ಚರ್ಚೆ ವೇಳೆ ಕಿಚ್ಚ ಸುದೀಪ್ ಅವರು ಬೇಸರದಿಂದ ವೇದಿಕೆಯಿಂದ ದಿಢೀರ್ ಹೊರನಡೆದಿದ್ಧಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್‌ನ ಫಿನಾಲೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಸದ್ಯ ಇದೀಗ ದೊಡ್ಮನಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳು ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಿ ಭಾವುಕರಾದರು. ಇನ್ನು ಮನೆಯ ಅಡುಗೆ ತಿಂದು ಮೈಮರೆತು ಮಾತನಾಡಿರುವವರು ಇದ್ದಾರೆ.

ಈ ಹಿನ್ನೆಲೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದ ವಾಗ್ದಾವದಳೇನೂ ನಡೆದಿಲ್ಲ. ಆದ್ದರಿಂದ, ವಾರಾಂತ್ಯ ಯಾವ ವಿಷಯದ ಮೇಲೆ ಚರ್ಚೆ ನಡೆಯಲಿದೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಈ ನಡುವೆಯೇ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಹೊರಬಿದ್ದಿದ್ದು, ಈ ವೇಳೆ ಕೆಲ ಸ್ಪರ್ಧಿಗಳಿಗೆ ಸುದೀಪ್ ಪ್ರಶ್ನೆ ಕೇಳಿ ಬೆವರಿಳಿಸಿದ್ದಾರೆ.
ಎಂಟರ್‌ಟೈನ್‌ಮೆಂಟ್ ವಿಚಾರದಲ್ಲಿ ಹನುಮಂತಣ್ಣ ಇದರೊಳಗಿದ್ದರೆ ಉತ್ತಮ ಅನಿಸುತ್ತದೆ ಎಂದು ಭವ್ಯಾ ಹೇಳಿದ್ದ ಮಾತನ್ನು ನೆನಪಿಸಿದ್ದಾರೆ. ಸುದೀಪ್ ಪ್ರಶ್ನೆಗೆ ಉತ್ತರಿಸಿದ ಭವ್ಯಾ, ನನಗಿಂತ ಉತ್ತಮ ಅವರಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅವರು, ಎಲ್ಲಾ ವಿಷಯದಲ್ಲೂ ಸಾಮರ್ಥ್ಯ ಇರುವವರು ಈ ಕಪ್ ಗೆಲ್ಲಬೇಕು ಭವ್ಯಾ ಅವರೇ. ನೀವು ಫಿಟ್ ಇಲ್ಲ ಎಂಬುದನ್ನು ನೀವೇ ಘೋಷಣೆ ಮಾಡಿದ್ದೀರಿ ಎಂದು ಟಾಂಗ್ ಕೊಟ್ಟರು.
ಬಳಿಕ ಮಾತು ಆರಂಭಿಸಿದ ಉಗ್ರಂ ಮಂಜು ತ್ರಿವಿಕ್ರಂ ಒಂದು ಹೇಳಿಕೆ ಕೊಡುತ್ತಾರೆ. ನಾನೇನು ಅನ್ನುವುದನ್ನ ಸಾಬೀತು ಮಾಡಿದ್ದೇನೆ. ನೀವೇನು ಅನ್ನುವುದನು ಸಾಬೀತುಪಡಿಸಿ ಅನ್ನುವ ಮಾತು ಬಂದಿದೆ ಎಂದು ತಿಳಿಸಿದ್ದಾರೆ. ಬಳಿಕ ಮಾತು ಆರಂಭಿಸಿದ ಹನುಮಂತು, ಇಷ್ಟು ವಾರ ಊಟ ಹಾಕಿದ್ದೀವಿ, ಈಗ ಗೆದ್ದು ನೀವು ಊಟ ಹಾಕಿ ಎನ್ನುವ ಮಾತು ಬಂದಿದೆ ಅಂತಾ ತಿಳಿಸಿದ್ದಾರೆ.
ಹನುಂತು ಮಾತನಾಡುತ್ತಿದ್ದಂತೆ ತ್ರಿವಿಕ್ರಂ ಮಾತು ಆರಂಭಿಸಿದ್ದಾರೆ. ವಾರದ ಜೊತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಚರ್ಚೆ ಮಾಡುವ ವೇಳೆ ಸ್ಪರ್ಧಿಗಳು ಕೈ ಎತ್ತಿ ಸುದೀಪ್ ಅವರಿಂದ ಅನುಮತಿ ಪಡೆದ ಬಳಿಕ ಮಾತಿಗಿಳಿಯುತ್ತಾರೆ. ಆದರೆ, ಹನುಮಂತು ಮಾತಾಡುತ್ತಿದ್ದಂತೆ ತ್ರಿವಿಕ್ರಂ ಎಂದಿನಂತೆ ಅನುಮತಿ ಪಡೆಯದೆ ಮಾತು ಆರಂಭಿಸಿದ ಹಿನ್ನೆಲೆ ಸುದೀಪ್ ಗರಂ ಆಗಿ ವೇದಿಕೆಯಿಂದ ಹೊರನಡೆದಿದ್ಧಾರೆ.
ಹಲೋ ಒಂದ್ ಕೆಲ್ಸ ಮಾಡಿ, ನೀವ್ ನೀವೇ ಮಾತಾನಾಡಿಕೊಳ್ಳಿ ಎಂದು ತಿಳಿಸಿ ನೇರವಾಗಿ ವೇದಿಕೆಯಿಂದ ಹೊರನಡೆದಿದ್ದಾರೆ. ಆಗ ಕೂಡಲೇ ತ್ರಿವಿಕ್ರಂ ಕೈ ಎತ್ತಿ ಸಾರಿ ಅಣ್ಣಾ, ಸಾರಿ ಎಂದು ತಿಳಿಸಿದ್ದಾರೆ. ಸುದೀಪ್ ಹೊರನಡೆದಿದ್ದು, ಇದೀಗ ಮತ್ತೆ ವಾಪಸ್ ಬರುತ್ತಾರೆಯಾ ಅನ್ನೋದೇ ಪ್ರೇಕ್ಷಕರ ಪ್ರಶ್ನೆಯಾಗಿದೆ. ಆದ್ದರಿಂದ ಇಂದಿನ ಸಂಚಿಕೆಯನ್ನು ವೀಕ್ಷಿಸಲು ಕೊಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕುಟುಂಬಸ್ಥರ ಸಲಹೆಗಳೇನು?: ಬಿಗ್ ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳೆಲ್ಲ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನು ಕೇಳಿ ಎಚ್ಚರ ಆದವರೂ ಇದ್ದಾರೆ. ಇನ್ನು ಗೌತಮಿ ಅವರ ಗಂಡ ಬಂದು ಸಮಯ ಬಂದಾಗ ನೀವು ಅವರನ್ನು ತುಳಿದುಕೊಂಡು ಮುಂದಕ್ಕೆ ಹೋಗಬೇಕೆಂದು ಸಲಹೆ ಕೂಡ ಕೊಟ್ಟಿದ್ದರು.
ಉಗ್ರಂ ಮಂಜು ಅವರ ಕುಟುಂಬಸ್ಥರು ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ಈ ವೇಳೆ ಯಾರ ಬಾಲವನ್ನೂ ಹಿಡಿಯುವುದಕ್ಕೆ ಹೋಗಬೇಡ. ನಿನ್ನನ್ನ ದಾಟಿ ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಅದನ್ನ ನೀನು ತಡೆಯುವುದನ್ನು ನಾವು ನೋಡಬೇಕು ಎಂದು ಹೇಳಿದರು.











Click it and Unblock the Notifications