ಬಡ ಸ್ನೇಹಿತನ ಮನೆಗೆ ಬಂದು ಮಗುವಿಗೆ ಚಿನ್ನದ ಹಾರ ಹಾಕಿದ ಕೆಜಿಎಫ್ ರಾಕಿಭಾಯ್ ಯಶ್ & ರಾಧಿಕಾ ಪಂಡಿತ್!
ನಟ ಯಶ್ ಅದೆಷ್ಟೇ ಎತ್ತರಕ್ಕೆ ಹೋದರೂ ತಾವು ಬೆಳೆದು ಬಂದಿದ್ದ ಹಾದಿಯನ್ನ ಮಾತ್ರ ಮರೆಯಲ್ಲ. ಈ ಮಾತನ್ನ ಆಗಾಗ ಅವರು ಪ್ರೂವ್ ಮಾಡ್ತಾನೆ ಇದ್ದಾರೆ. ಅದರಲ್ಲೂ ನಟ ಯಶ್ ಅವರು ತಮ್ಮ ಸ್ನೇಹಿತರಿಗೆ ಇಂದಿಗೂ ಅದೇ ಪ್ರೀತಿ, ವಿಶ್ವಾಸ ತೋರಿಸುತ್ತಾರೆ. ಹೀಗೆ ತಮ್ಮ ಜೊತೆ ಕೆಲಸ ಮಾಡುವವರಿಗೂ ಪ್ರೀತಿ ತೋರಿಸುತ್ತಾರೆ. ಈಗ ಬಡ ಸ್ನೇಹಿತನ ಮನೆಗೆ ಹೋಗಿ ಪುಟಾಣಿ ಮಗುವಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ.
ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳು ತಮ್ಮ ಖ್ಯಾತಿ & ಬಲವನ್ನ ಕಳೆದುಕೊಳ್ಳುತ್ತಿವೆ, ಎಂಬ ಆರೋಪ ಇತ್ತು. ದೊಡ್ಡ ದೊಡ್ಡ ನಟರು ಆರ್ಭಟಿಸಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಸೊರಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದ್ರೆ ಈ ಮಾತನ್ನ ನಟ ಯಶ್ ಅವರು 2018ರಲ್ಲಿ ಸುಳ್ಳು ಮಾಡಿ, ಕನ್ನಡ ಸಿನಿಮಾ ಜಗತ್ತಿನ ಗತ್ತು ಏನು? ಅನ್ನೋದನ್ನು ಜಗತ್ತಿಗೆ ತೋರಿಸಿದರು.

ಯಶ್ ಭಾರತದಲ್ಲಿ ಮಾತ್ರವಲ್ಲ...
ಇದೀಗ ನಟ ಯಶ್ ಭಾರತದಲ್ಲಿ ಮಾತ್ರವಲ್ಲ, ಹೊರ ದೇಶದಲ್ಲೂ ಸಿಕ್ಕಾಪಟ್ಟೆ ಫೇಮಸ್. ಈ ನಟನ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ರಿಲೀಸ್ ಆಗುತ್ತವೆ. ಹೀಗಿದ್ದರೂ ಯಾವುದೇ ರೀತಿಯ ಸೊಕ್ಕು ತೋರಿಸದೆ, ಬಡವನ ಮನೆಗೆ ಸಾಮಾನ್ಯ ವ್ಯಕ್ತಿಯಂತೆ ಹೋಗಿ ಮುಗುವಿಗೆ ಆಶೀರ್ವಾದ ಮಾಡಿದ್ದಾರೆ. ಹೀಗಿದ್ದಾಗ ತಮ್ಮ ಬಡ ಸ್ನೇಹಿತನಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಹೇಗಿತ್ತು ಯಶ್ & ರಾಧಿಕಾ ಎಂಟ್ರಿ?
ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಜೊತೆಗೆ ಸ್ನೇಹಿತನ ಮನೆಗೆ ಹೊಗಿ, ಮಗುವಿಗೆ ಆಶೀರ್ವಾದ ಮಾಡಿದ್ದಾರೆ. ಹಾಗೇ ಈ ವೇಳೆ ಪುಟಾಣಿ ಮಗುವಿನ ಕತ್ತಿಗೆ ಚಿನ್ನದ ಚೈನ್ ಹಾಕಿದ್ದಾರೆ. ಮುದ್ದಾದ ಮಗುವನ್ನ ನೋಡಿ ನಟ ಯಶ್ ನಸು ನಗೆ ಬೀರಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅದರಲ್ಲೂ ನಟ ಯಶ್ ಅವರ ಈ ಉತ್ತಮ ಗುಣಕ್ಕೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಗುಣದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಹಾಡಿ ಹೊಗಳಿದ್ದಾರೆ.

1000 ಕೋಟಿ ರೂಪಾಯಿ ಸರದಾರ!
'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿತ್ತು, ಇದಾದ ನಂತರ 2022ರಲ್ಲಿ 'ಕೆಜಿಎಫ್-2'ಗೆ ಸಿಕ್ಕ 1000 ಕೋಟಿ ರೂಪಾಯಿ ಗೆಲುವು ಜಗತ್ತನ್ನ ಇತ್ತ ತಿರುಗಿ ನೋಡುವಂತೆ ಮಾಡಿತ್ತು ಇದೇ ವೇಳೆ ಯಶ್ ಮತ್ತೆ ಅಬ್ಬರಿಸಲು ಸಿದ್ಧವಾಗಿದ್ದು, ಕನ್ನಡಿಗರಿಗೆ 'ಆಸ್ಕರ್'ನ ಕೊಡಿಸಲು ಸಜ್ಜಾಗಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಹಾಲಿವುಡ್ ಲೆವೆಲ್‌ಗೆ ಮಿಂಚುವ ನಿರೀಕ್ಷೆಗಳು ದಟ್ಟವಾಗಿವೆ. ಇನ್ನು ಯಶ್ ಅವರು ಈಗಾಗಲೇ ಮೊದಲ ಹಂತದ ಶೂಟಿಂಗ್ ಕೆಲಸಗಳನ್ನ ಮುಗಿಸಿ ಬಂದಿದ್ದು, ಇನ್ನೇನು ಸಿನಿಮಾ ರಿಲೀಸ್‌ಗೆ ಸಿದ್ಧತೆಗಳು ಸಾಗಲಿವೆ.
ಕನ್ನಡ ಸಿನಿಮಾಗಳಿಗೆ ಭರ್ಜರಿ ಗತ್ತು!
ಉತ್ತರ ಭಾರತದ ನೆಲದಲ್ಲಿ ಕನ್ನಡ ಸಿನಿಮಾ ಓಡುವುದು ಬಿಡಿ ನಮ್ಮ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಲೂ ಯೋಚಿಸುವ ಸ್ಥಿತಿ ಇತ್ತು. ವರನಟ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜ ನಟರು & ಪುಟ್ಟಣ್ಣ ಕಣಗಾಲ್ & ಶಂಕರ್ ನಾಗ್ ಸೇರಿ ದೊಡ್ಡ, ದೊಡ್ಡ ಲೆಜೆಂಡ್ ನಿರ್ದೇಶಕರ ತವರು ನಮ್ಮ ಭೂಮಿ. ಆದರೂ ಎಲ್ಲೋ ಒಂದು ಕಡೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೀಮಿತ ಮಾರುಕಟ್ಟೆ ಇದೆ ಅನ್ನೋ ಮಾತು ಕೇಳಿಬರುತ್ತಿತ್ತು.
ಆದರೆ ನಟ ಯಶ್ & ಪ್ರಶಾಂತ್ ನೀಲ್ ಜೋಡಿ ಈ ಮಾತುಗಳನ್ನೆಲ್ಲ ಸುಳ್ಳು ಮಾಡಿದರು. ಈಗ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ದೊಡ್ಡ ಮಟ್ಟದಲ್ಲಿ ಗುರುತಿಸುವಂತೆ ಮಾಡೋಕೆ ಯಶ್ ಅವರು ಪ್ಲಾನ್ ಮಾಡಿದ್ದಾರೆ. ಇದು ಕನ್ನಡಿಗರ ಹೆಮ್ಮೆ ಅಂತಿದ್ದಾರೆ ಫ್ಯಾನ್ಸ್, ಹೀಗೆ ಯಶ್ ಅವರ ಮುಂದಿನ ಸಿನಿಮಾ ಅಂದ್ರೆ 19ನೇ ಸಿನಿಮಾ ಇನ್ನೂ ಹಲವು ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆ ಇದೆ.
ಹಾಲಿವುಡ್ ಲೆವೆಲ್ ಸಿನಿಮಾ ಗ್ಯಾರಂಟಿ?
ನಟ ಯಶ್ ಯಾವುದೇ ಸಿನಿಮಾ ಮಾಡಿದ್ರು ಅದಕ್ಕೆ ವರ್ಷಗಟ್ಟಲೆ ಪ್ರಿಪೇರ್ ಆಗುತ್ತಾರೆ, ತಾನು ಅದರಲ್ಲಿ ಪರ್ಫೆಕ್ಟ್ ಅನ್ನೋದನ್ನು ತಿಳಿದ ನಂತರವಷ್ಟೇ ಅವರು ಮುನ್ನುಗ್ಗುತ್ತಾರೆ. ಈಗಲೂ ಅಷ್ಟೇ ರಾಜಕೀಯ ಬೇಡ, ಸಿನಿಮಾ ಮಾತ್ರ ಬೇಕು ಅಂತಾನೇ ದೊಡ್ಡ ಮಟ್ಟದ ಸಾಧನೆ ಮಾಡಲು ಮುನ್ನುಗ್ಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ಲೆವೆಲ್ ಸಿನಿಮಾಗೂ ಅವರು ಸಜ್ಜಾಗಿದ್ದಾರೆ. ಈಗಿನ ಮಾಹಿತಿಗಳ ಪ್ರಕಾರ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಹಾಲಿವುಡ್ ಲೆವೆಲ್ ರೀಚ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ.
'ಕೆಜಿಎಫ್-3' ಯಾವಾಗ ಬರುತ್ತೆ?
ಈಗಿನ ಮಾಹಿತಿ ಪ್ರಕಾರ 'ಕೆಜಿಎಫ್-3' ಬರೋದು ಗ್ಯಾರಂಟಿ, ಇದಕ್ಕೋಸ್ಕರ ಪ್ರಶಾಂತ್ ನೀಲ್ ಕಥೆಯನ್ನು ಕೂಡ ಸಿದ್ಧಮಾಡಿ ಇಟ್ಟುಕೊಂಡಿದ್ದಾರೆ. ಆದರೆ ನಿರ್ದೇಶನದ ಜವಾಬ್ದಾರಿ ಯಾರು ವಹಿಸುತ್ತಾರೆ? ಅನ್ನೋದು ಕನ್ಫರ್ಮ್ ಆಗಿಲ್ಲ. ಇದು ಕುತೂಹಲ ಕೆರಳಿಸಿದೆ ಆದ್ರೆ ಕೋಟ್ಯಂತರ ಫ್ಯಾನ್ಸ್ ಮಾತ್ರ ಕೆಜಿಎಫ್-3 ಸಿನಿಮಾ ನೋಡಲು ಕುತೂಹಲದಿಂದ ಕಾಯ್ತಿದ್ದಾರೆ. ಅವರ ಆಸೆ ಇನ್ನೂ ಕೆಲವೇ ವರ್ಷದಲ್ಲಿ ನಿಜ ಕೂಡ ಆಗುವ ನಿರೀಕ್ಷೆ ಇದೆ.












Click it and Unblock the Notifications