ಕನ್ನಡಿಗ ಯಶ್ ಕನ್ನಡ ಸಿನಿಮಾಗಳ ಬಗ್ಗೆ ಏನ್ ಹೇಳಿದ್ರು ಕೇಳಿ!
ಯಶ್ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹೀಗಾಗಿ ಯಶ್ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹೀಗಿದ್ದರೂ ಯಶ್ ತಾವು ಕನ್ನಡಿಗ ಅನ್ನೋದನ್ನ ಇಂದಿಗೂ ಮರೆತಿಲ್ಲ. ಹಾಗೇ ಹೊರಗಡೆ ಹೋದಾಗ ಕೂಡ ಕನ್ನಡದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಈ ನಟ, ಇಂದು ನಮ್ಮ ಬೆಂಗಳೂರಿನಲ್ಲೇ ನಿಂತು ಕನ್ನಡ ಸಿನಿಮಾ ಇಂಡಸ್ಟ್ರಿ ಹೇಗಿರಬೇಕು ಅಂತಾ ಹೇಳಿದ್ದಾರೆ.
ನಟ ಯಶ್ ಅಂದುಕೊಂಡ ಗುರಿಯ ಸಾಧಿಸುವ ತನಕ ನಿಲ್ಲಲ್ಲ ಅಂತಾ ಎಲ್ಲರಿಗೂ ಗೊತ್ತಿದೆ. ಈ ನಟ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನ ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಕೀರ್ತಿಗೂ ಪಾತ್ರರಾಗುತ್ತಾರೆ. ಯಶ್ ತಮ್ಮ 19ನೇ ಸಿನಿಮಾಗೆ ಸಿದ್ಧವಾಗಿದ್ದು, 'ಹೊಡೆದರೆ ಆನೆಯನ್ನೇ ಹೊಡೆಯಬೇಕು' ಅಂತಾ ಮುನ್ನುಗ್ಗುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಗೆಳೆಯನಿಗೆ ಕೂಡ ಸಾಥ್ ನೀಡಿರುವ ಅವರು, ಸ್ನೇಹಿತ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಬಂದಿದ್ದರು. ಈ ವೇಳೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಭವಿಷ್ಯದ ಬಗ್ಗೆ ಯಶ್ ಮಾತನಾಡಿದ್ದಾರೆ.

ಹೊಸಬರನ್ನ ಬೆಳೆಸಬೇಕು ಕಣ್ರಯ್ಯ!
ಅಂದಹಾಗೆ ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡವರ ಸಿನಿಮಾಗೆ ಮಾತ್ರ, ಪ್ರೋತ್ಸಾಹ ನೀಡುತ್ತಿವೆ. ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾರಕ. ಹೀಗಾಗಿ ಹೊಸಬರ ಸಿನಿಮಾಗಳಿಗೂ ಬೆಂಬಲ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಕನ್ನಡದ ಹೊಸಬರಿಗೆ ಕೂಡ ನಿಮ್ಮ ಪ್ರೋತ್ಸಾಹ ಬೇಕು. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದಿದ್ದಾರೆ. ಯಶ್ ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲೂ ಬಿರುಗಾಳಿ ಎಬ್ಬಿಸಿದೆ.
#YashBOSS wholeheartedly talks about our #KFI ❤️#ToxicTheMovie #TOXIC @TheNameIsYashpic.twitter.com/3DGv3s9DPu
— Virat👑Rocky✨️ (@Virat_Rocky18) February 14, 2024
ಪ್ರತಿಭೆಗಳಿಗೆ ಯಶ್ ಸದಾ ಬೆಂಬಲ
ನಟ ಯಶ್ ಯಾಕೆ ಇಷ್ಟ ಆಗುತ್ತಾರೆ ಅನ್ನೋದು ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ನೇರವಾಗಿ ಮಾತನಾಡುವ ಸ್ವಭಾವ ಯಶ್ ಅವರದ್ದು. ಹಾಗೇ ಒಳ್ಳೆಯವರನ್ನು & ಹೊಸ ಹೊಸಬರ ಸಿನಿಮಾಗಳನ್ನು ಯಶ್ ಅವರು ಸದಾ ಬೆಂಬಲಿಸುತ್ತಾರೆ. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಯಶ್ ಅವರನ್ನು ಪಡೆದಿರುವುದು ಕೂಡ ತುಂಬಾನೆ ದೊಡ್ಡ ಸ್ಪೆಷಲ್ ಎನ್ನಬಹುದು. ಈ ರೀತಿ ಯಶ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬೆನ್ನೆಲುಬಾಗಿ ಬೆಳೆಯುತ್ತಿದ್ದಾರೆ. ಇದೇ ನಟ ಈಗ ಹೊಸಬರ ಸಿನಿಮಾಗೆ ಬೆಂಬಲ ನೀಡಿ ಅಂತಾ ಮಾಧ್ಯಮಗಳಿಗೆ ನೇರವಾಗಿ ಮನವಿ ಮಾಡಿ ಕನ್ನಡಿಗರ ಗಮನ ಸೆಳೆದಿದ್ದಾರೆ.
ಬರ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್!
ಯಶ್ ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾವನ್ನ ಅತ್ಯಂತ ವಿಭಿನ್ನವಾಗಿ & ಕಲರ್ ಫುಲ್ ಆಗಿ ಮಾಡುತ್ತಾರೆ. ಹೀಗಾಗಿ, ಮುಂದಿನ ಸಿನಿಮಾಗೆ ಸಾಕಷ್ಟು ಸಮಯ ತೆಗೆದುಕೊಂಡು 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕವೇ ಗೋವಾ ಡ್ರಗ್ಸ್ ಲೋಕದ 1960-70ರ ಕಥೆ ಹೇಳಲು ಯಶ್ ಹೊರಟಿದ್ದಾರೆ ಅಂತ ಹೇಳಲಾಗಿದೆ. ಈ ಸಿನಿಮಾದ ಮೂಲಕ ಮುಂದೆ ಯಶ್ ಅವರು, ಹಾಲಿವುಡ್‌ನ ಅಂಗಳದಲ್ಲೂ ಮಿಂಚುತ್ತಾರಾ? ಅನ್ನೋ ಕುತೂಹಲ ಕೂಡ ಡಬಲ್ ಆಗಿದೆ.

ಏನೋ ದೊಡ್ಡದಾಗಿದೆ ರಾಕಿ ಐಡಿಯಾ
ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ದರೆ, ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣ ರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಯಶ್ ಅವರು ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications