100 ಕೋಟಿ ಸಂಭಾವನೆ, 1000 ಕೋಟಿ ರೂಪಾಯಿ ಟಾರ್ಗೆಟ್: ಹೀಗಿದೆ ಕನ್ನಡಿಗ ಯಶ್ ‘ರಾಮಾಯಣ’ ಸಿನಿಮಾ ಗುರಿ!

ಯಶ್ ಅಂದ್ರೆ ಕ್ಲಾಸ್... ಯಶ್ ಅಂದ್ರೆ ಮಾಸ್... ಯಶ್ ಅಂದ್ರೆ ಈಗ ಬಾಲಿವುಡ್ ಬಾಸ್! ಸಮಾಧಾನ.. ಸಮಾಧಾನ.. ಈ ಮಾತನ್ನು ನಾವು ಹೇಳ್ತಾ ಇಲ್ಲ, ಈ ಡೈಲಾಗ್ ಹೇಳುತ್ತಾ ಇರೋದು ರಾಕಿಭಾಯ್ ಯಶ್ ಅವರ ಅಭಿಮಾನಿಗಳು. ಯಶ್ ಅವರ ಫ್ಯಾನ್ಸ್ ಹೀಗೆ ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾದ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಯಶ್ 'ರಾಮಾಯಣ' ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋ ವಿಚಾರ ಗೊತ್ತಾಗಿದೆ!

ಯಶ್ ಕನ್ನಡ ಸಿನಿಮಾ ರಂಗಕ್ಕೆ ಬಂದು ಸುಮಾರು 20 ವರ್ಷ ಕಳೆದಿದೆ. ಹೀಗೆ ಯಶ್ ಈ 20 ವರ್ಷ ಅವಧಿಯಲ್ಲಿ ಎಲ್ಲಾ ರೀತಿಯ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು 'ಕೆಜಿಎಫ್' ಸಿನಿಮಾ ಮೂಲಕ ಯಶ್ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ. ಇಂತಿಪ್ಪ ಯಶ್ ಅವರು ಇದೀಗ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಯಶ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ರೂಪಾಯಿ? ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

https kannada oneindia com news bengaluru bjp-leader-bhaskar-rao-injured-in-major-road-accident-354917 html

ರಾಕಿಭಾಯ್ ಯಶ್ ಸಂಭಾವನೆ 100...

ಈ ಸ್ಪೆಷಲ್ ಸಿನಿಮಾಗಾಗಿ ಯಶ್ ಬರೋಬ್ಬರಿ 100 ಕೋಟಿ ಸಂಭಾವನೆ ಕೂಡ ಪಡೆಯುತ್ತಾರೆ ಅನ್ನೋ ಮಾತು ಓಡಾಡುತ್ತಿದೆ. ಅಲ್ಲದೆ ಈ ಸಿನಿಮಾಗೆ ಯಶ್ ಕೂಡ ಬಂಡವಾಳ ಹಾಕಿ, ನಿರ್ಮಾಣ ಕೂಡ ಮಾಡುತ್ತಿದ್ದು. 'ರಾಮಾಯಣ' ಸಿನಿಮಾದ ಲಾಭದಲ್ಲೂ ಯಶ್ ಅವರಿಗೆ ಪಾಲು ಸಿಗಲಿದೆ ಎಂಬ ಮಾತು ಓಡಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಿದ್ದಾಗ ಯಶ್ ರಾವಣನ ಪಾತ್ರ ಮಾಡಲು ಹೇಗೆ ತಯಾರಿ ನಡೆಸುತ್ತಿದ್ದಾರೆ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

15 ಕೆಜಿ ತೂಕ ಹೆಚ್ಚಳ!

ಯಶ್ ಅವರು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ಇದೀಗ 15 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಆದರೆ ಯಶ್ ಅವರಿಗೆ ಸಿಕ್ಸ್ ಪ್ಯಾಕ್ ಇರುವುದಿಲ್ಲ ಎಂಬ ಮಾತು ಕೂಡ ಓಡಾಡುತ್ತಿದೆ. ಯಾಕಂದ್ರೆ, ರಾವಣ ಬದುಕಿದ್ದ ಸಮಯದಲ್ಲಿ ಸಿಕ್ಸ್ ಪ್ಯಾಕ್ಸ್ ಅಥವಾ 8 ಪ್ಯಾಕ್ಸ್ ಅನ್ನೋ ಕಾನ್ಸೆಪ್ಟ್ ಇರಲಿಲ್ಲ. ಹೀಗಾಗಿ ಯಶ್ ಅವರು ನೈಜವಾಗಿ ರಾವಣನ ಪಾತ್ರ ಮಾಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ಹಳ್ಳಿಯಿಂದ ಹಿಡಿದು, ದಿಲ್ಲಿ ತನಕ ಯಶ್ ಅವರ ರಾಮಾಯಣ ವಿಚಾರವೇ ಚರ್ಚೆಯಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+