ಪ್ರಶಾಂತ್ ನೀಲ್ ಕನ್ನಡ ಬಿಟ್ಟು ಹೋಗಿದ್ದು ಯಾಕೆ ಗೊತ್ತಾ? ಕೆಜಿಎಫ್ ಸ್ಟಾರ್ ಯಶ್ ಕಾರಣ ತಿಳಿಸಿದ್ದಾರೆ ಇಲ್ಲಿ ಕೇಳಿ!
ಪ್ರಶಾಂತ್ ನೀಲ್ ಈಗ ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ಪರಭಾಷೆಗೆ ಎಂಟ್ರಿ ಕೊಟ್ಟಿದ್ದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹೀಗೆ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ಹೋಗಿದ್ದು ಯಾಕೆ? ಅನ್ನೋ ಪ್ರಶ್ನೆ ಕನ್ನಡಿಗರನ್ನ ಈಗ ಕಾಡುತ್ತಿದೆ. ಇದೇ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪ್ರಶಾಂತ್ ನೀಲ್ ಅವರ ಸಿನಿಮಾ ಜೀವನದ ನೋವುಗಳನ್ನು ಬಿಡಿಸಿಟ್ಟಿದ್ದಾರೆ.
ಕನ್ನಡಿಗ ಯಶ್ ಸಖತ್ ಸುದ್ದಿಯಲ್ಲಿದ್ದಾರೆ ತಮ್ಮ ಮುಂದಿನ ಸಿನಿಮಾ ಅಂದ್ರೆ 'ಯಶ್-19' ಬಗ್ಗೆ ಅಪ್‌ಡೇಟ್ ಕೊಟ್ಟ ಬಳಿಕ, ರಾಕಿಭಾಯ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಟೈಟಲ್ ನೋಡಿ ಸಂಭ್ರಮವು ಮೇಳೈಸಿದೆ. ಈ ಸಮಯದಲ್ಲಿ ಪ್ರಶಾಂತ್ ನೀಲ್ ಅವರ ನಿರ್ದೇಶನದ 'ಸಲಾರ್' ಸಿನಿಮಾ ಕೂಡ ಭರ್ಜರಿ ಹಣ ಮಾಡಿದೆ. ಇಷ್ಟೆಲ್ಲದರ ನಡುವೆ ನಟ ಯಶ್ ಅವರು ತಮ್ಮ ಸ್ನೇಹಿತನ ಜಿಮ್ ಉದ್ಘಾಟನೆ ವೇಳೆ ಪ್ರಶಾಂತ್ ನೀಲ್, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಹಾಗೇ ಪ್ರಶಾಂತ್ ನೀಲ್ ಉಗ್ರಂ ಸಿನಿಮಾಗೆ ಎಷ್ಟೆಲ್ಲಾ ಕಷ್ಟಪಟ್ಟರು? ಅನ್ನೋದನ್ನೂ ತಿಳಿಸಿದ್ದಾರೆ.

ಪ್ರಶಾಂತ್ ನೀಲ್ ಕಷ್ಟಗಳು ಹೀಗಿವೆ
ಕೆಜಿಎಫ್ ಸಿನಿಮಾ ಸರಣಿ ಬಳಿಕ ಯಶ್ ವರ್ಲ್ಡ್ ಲೆವೆಲ್ ಹೀರೋ ಆಗಿ ಬೆಳೆದರೆ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಿಂತರು ಪ್ರಶಾಂತ್ ನೀಲ್. ಹೀಗಿದ್ದಾಗ 'ಕೆಜಿಎಫ್-2' ನಂತರ ರಾಕಿಂಗ್ ಸ್ಟಾರ್ ಯಶ್ & ಪ್ರಶಾಂತ್ ನೀಲ್ ಒಟ್ಟಿಗೆ ಯಾವುದೇ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ. ಆದರೂ ಈ ಸಮಯದಲ್ಲೇ ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅನುಭವಿಸಿದ್ದ ಕಷ್ಟದ ಬಗ್ಗೆ ಯಶ್ ಅವರು ತಿಳಿಸಿದ್ದಾರೆ. ಅದ್ರಲ್ಲೂ ಪ್ರಶಾಂತ್ ನೀಲ್ ಅವರು 'ಉಗ್ರಂ' ಸಿನಿಮಾ ಮಾಡಿ ಮೊದಲಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದ ವೇಳೆ ಸಾಕಷ್ಟು ಸಮಸ್ಯೆ ಎದುರಿಸಿ ಪರದಾಡಿದ್ದರು. 'ಉಗ್ರಂ' ಸಿನಿಮಾ ಸ್ಯಾಟಲೈಟ್ಸ್ ರೈಟ್ಸ್ ಮಾರಾಟ ಆಗದೆಯೇ 3ನೇ ವ್ಯಕ್ತಿಗೆ ಮಾರುವ ಪರಿಸ್ಥಿತಿ ಬಂದಿತ್ತು ಎಂದಿದ್ದಾರೆ.
ಹೊಸಬರನ್ನು ಪ್ರೋತ್ಸಾಹಿಸಿ ಎಂದರು ಯಶ್
ಹಾಗೇ ಯಶ್ ತಮ್ಮ ಮಾತು ಮುಂದುವರಿಸಿ, ನಾವು ಪ್ರಶಾಂತ್ ನೀಲ್ ಅವರನ್ನು ನಂಬಿ 'ಕೆಜಿಎಫ್' ಸಿನಿಮಾ ಮಾಡಿದ್ದೆವು. ಹೀಗಾಗಿ ಮುಂದೆ ಒಳ್ಳೆಯದೇ ಆಯ್ತು, ಅಕಸ್ಮಾತ್ ಈ ರೀತಿ ಬೇರೆ ಡೈರೆಕ್ಟರ್‌ಗೆ ಆಗಿದ್ದೇ ಆದರೆ ಅದರಿಂದ ದೊಡ್ಡ ಸಮಸ್ಯೆ ಎದುರಾಗಲ್ವಾ? ಹಾಗೆ ಸಿನಿಮಾ ಸೋತ ಕಾರಣಕ್ಕೆ ಆ ಡೈರೆಕ್ಟರ್ ಬೇರೆ ಇಂಡಸ್ಟ್ರಿಗೆ ಹೋಗೋದಿಲ್ವಾ? ಎಂದು ಈ ವೇಳೆ ನಟ ಯಶ್ ಅವರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರುವ ಹೊಸಬರನ್ನು ಪ್ರೋತ್ಸಾಹಿಸಿ ಎಂದು ಕೋರಿದ್ದಾರೆ ನಟ ಯಶ್.
'ಕೆಜಿಎಫ್-3' ಯಾವಾಗ ಬರುತ್ತೆ?
ಈಗಿನ ಮಾಹಿತಿ ಪ್ರಕಾರ 'ಕೆಜಿಎಫ್-3' ಬರೋದು ಗ್ಯಾರಂಟಿ, ಇದಕ್ಕೋಸ್ಕರ ಪ್ರಶಾಂತ್ ನೀಲ್ ಕಥೆಯನ್ನು ಕೂಡ ಸಿದ್ಧಮಾಡಿ ಇಟ್ಟುಕೊಂಡಿದ್ದಾರೆ. ಆದರೆ ನಿರ್ದೇಶನದ ಜವಾಬ್ದಾರಿ ಯಾರು ವಹಿಸುತ್ತಾರೆ? ಅನ್ನೋದು ಕನ್ಫರ್ಮ್ ಆಗಿಲ್ಲ. ಇದು ಕುತೂಹಲ ಕೆರಳಿಸಿದೆ ಆದ್ರೆ ಕೋಟ್ಯಂತರ ಫ್ಯಾನ್ಸ್ ಮಾತ್ರ ಕೆಜಿಎಫ್-3 ಸಿನಿಮಾ ನೋಡಲು ಕುತೂಹಲದಿಂದ ಕಾಯ್ತಿದ್ದಾರೆ. ಅವರ ಆಸೆ ಇನ್ನೂ ಕೆಲವೇ ವರ್ಷದಲ್ಲಿ ನಿಜ ಕೂಡ ಆಗುವ ನಿರೀಕ್ಷೆ ಇದೆ.
ಯಶ್ ಅಂದ್ರೆ ಭರ್ಜರಿ ಹವಾ!
ಕೆಜಿಎಫ್ ಸ್ಟಾರ್ ನಟ ಯಶ್ ಅವರು ಈಗ ಏನೇ ಮಾಡಿದ್ರೂ ಟ್ರೆಂಡ್. ಅದರಲ್ಲೂ ಯಶ್ ಅವರ ಜೊತೆಗೆ ನಟನೆ ಮಾಡಬೇಕು ಅಂತಾ ದೊಡ್ಡ ದೊಡ್ಡ ಬಾಲಿವುಡ್ ನಟ & ನಟಿಯರ ದಂಡೇ ಕಾಯುತ್ತಿರುತ್ತದೆ. ಇಂತಿಪ್ಪ ಯಶ್ ಅವರು ಮಾತ್ರ ಕನ್ನಡ ಸಿನಿಮಾ ಇಂಡಸ್ಟ್ರಿ ಪರವಾಗಿ, ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹಾಗೇ ಕನ್ನಡದ ಹೊಸಬರ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಹೀಗೆ ರಾಕಿಂಗ್ ಸ್ಟಾರ್ ಯಶ್ ಅವರ ಈ ಮಾತಿಗೆ, ಕನ್ನಡ ಸಿನಿಮಾ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ಅಲ್ಲದೆ ಇದೇ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರಾಗಿ ಬಂದಾಗ, ಪಟ್ಟಿದ್ದ ಕಷ್ಟ ಎಂತಹದ್ದು? ಎಂಬುದನ್ನೂ ಬಿಡಿಸಿ ಹೇಳಿದ್ದಾರೆ ಯಶ್.
ಹಾಲಿವುಡ್ ಕಡೆ ಪ್ರಶಾಂತ್ ನೀಲ್?
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಹಲವು ಬಾರಿ ಸ್ವತಃ ನಟ ಯಶ್ ಅವರೇ ಪ್ರಶಾಂತ್ ನೀಲ್ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಹಾಗೇ ಪ್ರಶಾಂತ್ ನೀಲ್ ಅವರು ಹಾಲಿವುಡ್ ಸಿನಿಮಾ ನಿರ್ದೇಶನ ಮಾಡಬೇಕು, ಅವರ ಟ್ಯಾಲೆಂಟ್ ಜಾಗತಿಕ ಮಟ್ಟದಲ್ಲಿ ಇದೆ ಎಂದಿದ್ದರು. ಈಗ ಕೂಡ ಅಷ್ಟೇ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆರಂಭದ ದಿನಗಳಲ್ಲಿ, ಉಗ್ರಂ ಸಿನಿಮಾ ವಿಚಾರಕ್ಕೆ ಅನುಭವಿಸಿದ್ದ ನೋವನ್ನು ಕೂಡ ಬಿಡಿಸಿಟ್ಟಿದ್ದಾರೆ ನಟ ಯಶ್. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹೊಸಬರನ್ನು ಬೆಂಬಲಿಸುವಂತೆ, ನಟ ಯಶ್ ಕೋರಿಕೊಳ್ಳುತ್ತಿದ್ದಾರೆ.
ಸ್ನೇಹಕ್ಕೆ ಬೆಲೆ ನೀಡಿದ ಯಶ್!
ನಟ ಯಶ್ ಅಂದುಕೊಂಡ ಗುರಿ ಸಾಧಿಸುವ ತನಕ ನಿಲ್ಲಲ್ಲ ಅಂತಾ ಎಲ್ಲರಿಗೂ ಗೊತ್ತಿದೆ. ಈ ನಟ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನ ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಕೀರ್ತಿಗೂ ಪಾತ್ರರಾಗುತ್ತಾರೆ. ಯಶ್ ತಮ್ಮ 19ನೇ ಸಿನಿಮಾಗೆ ಸಿದ್ಧವಾಗಿದ್ದು, 'ಹೊಡೆದರೆ ಆನೆಯನ್ನೇ ಹೊಡೆಯಬೇಕು' ಅಂತಾ ಮುನ್ನುಗ್ಗುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಗೆಳೆಯನಿಗೆ ಕೂಡ ಸಾಥ್ ನೀಡಿರುವ ಅವರು, ಸ್ನೇಹಿತ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಬಂದಿದ್ದರು. ಇದೇ ವೇಳೆ ಪ್ರಶಾಂತ್ ನೀಲ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಇದೀಗ ಯಶ್ ಅವರ ಈ ಮಾತುಗಳು ವೈರಲ್ ಆಗುತ್ತಿವೆ.
ಹಾಲಿವುಡ್ ಲೆವೆಲ್ ಸಿನಿಮಾ ಗ್ಯಾರಂಟಿ?
ಈ ಮೂಲಕ ಏನ್ ಹೇಳಬಹುದು ಅಂದ್ರೆ ನಟ ಯಶ್ ಏನೇ ಮಾಡಿದ್ರು ಅದಕ್ಕೆ ವರ್ಷಗಟ್ಟಲೆ ಪ್ರಿಪೇರ್ ಆಗುತ್ತಾರೆ, ತಾನು ಅದರಲ್ಲಿ ಪರ್ಫೆಕ್ಟ್ ಅನ್ನೋದನ್ನು ತಿಳಿದ ನಂತರವಷ್ಟೇ ಅವರು ಮುನ್ನುಗ್ಗುತ್ತಾರೆ. ಈಗಲೂ ಅಷ್ಟೇ ರಾಜಕೀಯ ಬೇಡ, ಸಿನಿಮಾ ಮಾತ್ರ ಬೇಕು ಅಂತಾನೇ ದೊಡ್ಡ ಮಟ್ಟದ ಸಾಧನೆ ಮಾಡಲು ಮುನ್ನುಗ್ಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ಲೆವೆಲ್ ಸಿನಿಮಾಗೂ ಅವರು ಸಜ್ಜಾಗಿದ್ದಾರೆ. ಈಗಿನ ಮಾಹಿತಿಗಳ ಪ್ರಕಾರ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಹಾಲಿವುಡ್ ಲೆವೆಲ್ ರೀಚ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ.












Click it and Unblock the Notifications