ಸ್ಟಾರ್ ಹೋಟೆಲ್‌ಗೆ ಬಾ ಎಂದು ಕರೆದ, ಕೆಟ್ಟ ಮೆಸೇಜ್ ಕಳಿಸಿದ: ಖ್ಯಾತ ನಟಿಗೆ ಕಾಂಗ್ರೆಸ್ ಶಾಸಕ ಕಿರುಕುಳ
ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಆ ರಾಜಕಾರಣಿ ನನ್ನನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಬರುವಂತೆ ಕರೆದಿದ್ದಾನೆ ಎಂದು ಖ್ಯಾತ ನಟಿಯೊಬ್ಬರು ಆರೋಪ ಮಾಡಿದ್ದಾರೆ. ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಯುವ ರಾಜಕಾರಣಿಯೊಬ್ಬರು ನನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ಮೇಲೆ ನಟಿ ಈ ಆರೋಪ ಮಾಡಿದ್ದಾರೆ.
ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕ ಹಲವು ಬಾರಿ ನನಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ. ಆತ ನನ್ನನ್ನು ಹೋಟೆಲ್‌ಗೆ ಬರುವಂತೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ನಿಮ್ಮ ಪಕ್ಷದವರಿಗೆ ತಿಳಿಸುತ್ತೇನೆ ಎಂದು ನಟಿ ಬೆದರಿಸಿದಾಗ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಮಾಡಿಕೋ ಎಂದಿದ್ದಾನೆ.

ಮೊದಲಿಗೆ ರಿನಿ ಯಾವುದೇ ಪಕ್ಷದ ಹೆಸರು ಅಥವಾ ರಾಜಕಾರಣಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಈ ಆರೋಪದ ನಂತರ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ಮೇಲೆ ಕ್ರಮ ಜರುಗಿಸಲಾಗಿದೆ. ನಟಿ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಪಕ್ಷದ ನಾಯಕರಿಗೆ ತಿಳಿಸಲಾಗಿದೆ ಎಂದು ರಿನಿ ಹೇಳಿದ್ದಾರೆ. 'ನನಗೆ ಮಾತ್ರವಲ್ಲ, ಹಲವಾರು ರಾಜಕಾರಣಿಗಳ ಪತ್ನಿಯರು ಮತ್ತು ಹೆಣ್ಣುಮಕ್ಕಳ ಜೊತೆಗೂ ಇದೇ ರೀತಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ' ಎಂದು ನಟಿ ಆರೋಪ ಮಾಡಿದ್ದಾರೆ.
'ಅವನು ನನಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಿದ. ಮೊದಲಿಗೆ ನಾನು ಅವರನ್ನು ನಿರ್ಲಕ್ಷಿಸಿದ್ದೆ. ಅದು ನನಗೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಹಾಗಾಗಿ ಕೇಸ್ ದಾಖಲಿಸಲಿಲ್ಲ. ಇತ್ತೀಚೆಗೆ ಅನೇಕ ಮಹಿಳೆಯರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಯಾರೂ ಬಹಿರಂಗವಾಗಿ ಮಾತನಾಡಿಲ್ಲ. ಇದಕ್ಕಾಗಿ ನಾನು ಕೊನೆಗೆ ಮಾತನಾಡಬೇಕಾಯಿತು. ತಮ್ಮ ಕುಟುಂಬದ ಮಹಿಳೆಯರನ್ನೇ ರಕ್ಷಿಸಲು ಸಾಧ್ಯವಾಗದ ಈ ರಾಜಕಾರಣಿಗಳು ಯಾವ ಮಹಿಳೆಯನ್ನು ರಕ್ಷಿಸುತ್ತಾರೆ ಎಂದು ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಹಿಳೆಯರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನೇ ಅವರೆಲ್ಲರ ಪರವಾಗಿ ಮಾತನಾಡಿದೆ' ಎಂದಿದ್ದಾರೆ.
'ಆಕೆ ನನ್ನ ಫ್ರೆಂಡ್ ಎಂದ ರಾಹುಲ್'
ನಟಿ ರಿನಿ ಆನ್ ಜಾರ್ಜ್ ಅವರ ಕಿರುಕುಳ ಆರೋಪದ ನಂತರ ರಾಹುಲ್ ಮಮ್ಕೂಟತಿಲ್ ಯುವ ಕಾಂಗ್ರೆಸ್ ಕೇರಳ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 'ನಾನು ಯಾವುದೇ ತಪ್ಪು ಮಾಡಿಲ್ಲ, ಆದರೆ ಪಕ್ಷದ ಕಾರ್ಯಕರ್ತರು ಅವರನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಜಾರ್ಜ್ ಅವರು ನನ್ನ ಫ್ರೆಂಡ್' ಎಂದಿದ್ದಾರೆ. ನನ್ನ ವಿರುದ್ಧ ಯಾವುದೇ ಕೇಸ್ ಇಲ್ಲ. ಆ ಮಹಿಳೆ ನನ್ನ ಹೆಸರನ್ನ ಹೇಳಿಲ್ಲ. ಆದರೂ ನಾನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷವು ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications