Kavya Shashtri: ಈ ನಟಿ ಅನ್‌ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದೆ! ಯಾಕೆ ಅಂತಾ ಗೊತ್ತಾದ್ರೆ ದೇಶಪ್ರೇಮಿಗಳು ಶಾಕ್ ಆಗ್ತಾರೆ
ಬೆಂಗಳೂರು, ಜೂನ್ 18: ಧಾರವಾಹಿ, ವೇದಿಕೆ ಕಾರ್ಯಕ್ರಮ ಹಾಗೂ ಕೆಲವು ಸಿನಿಮಾಗಳಲ್ಲಿ ತಮ್ಮದೇ ಆದ ಅಭಿನಯ, ಮಾತುಗಳ ಮೂಲಕ ಗಮನ ಸೆಳೆದಿರುವ ಕನ್ನಡದ ನಟಿ ಕಾವ್ಯಾಶಾಸ್ತ್ರಿ ಅವರಿಗೆ ಅನ್‌ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ ಸುಮಾರು ಒಂದು ಸಾವಿರದಷ್ಟು ಫಾಲೋವರ್ಸ್ ಹೆಚ್ಚಾಗುವುದು ಕಂಡು ಬರುತ್ತಿತ್ತು. ಆದರೆ ಇತ್ತೀಚೆಗೆ ನಿತ್ಯ ಅನ್‌ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಈ ಅನ್‌ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಅಂತಲೂ ತಿಳಿಸಿದ್ದು, ಇದು ರಾಷ್ಟ್ರಪ್ರೇಮಿಗಳನ್ನು ಗಂಭೀರ ಯೋಚನೆ ತಳ್ಳಿದೆ.
ಅನ್‌ಫಾಲೋವರ್ಸ್ ಹೆಚ್ಚಾಗುತ್ತಿದ್ದರ ಬಗ್ಗೆ ನಟಿ ಕಾವ್ಯಾ ಶಾಸ್ತ್ರಿ ಅವರೇ ರೀಲ್ಸ್ ವಿಡಿಯೋ ಮಾಡಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಿಳಿಸಿದ ಕಾರಣ, ವಿಷಯ ಕೇಳಿದರೆ ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರ ಈ ರೀತಿಯ ಜನರು ನಮ್ಮ ಮಧ್ಯ ಇದ್ದಾರಾ ಎಂದು ಆಶ್ಚರ್ಯವಾಗುತ್ತದೆ.

ಇತ್ತೀಚೆಗೆ ದೇಶದ ಗಡಿ ರಾಜ್ಯ ಕಾಶ್ಮೀರದಲ್ಲಿ ಪೆಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಭಾರತೀಯ ಸೇನೆಯಿಂದ ಉಗ್ರರ ವಿರುದ್ಧ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆದಿತ್ತು. ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿತ್ತು. ಈ ಬೆಳವಣಿಗೆ ಬಗ್ಗೆ, ಭಾರತ ದೇಶ, ಧರ್ಮ, ಸೈನ್ಯದ ಬಗ್ಗೆ, ಸಾವಿನ ಮೂಲಕ ನಮಗಾದ ಅನ್ಯಾಯದ ಬಗ್ಗೆ ನಟಿ ಕಾವ್ಯಾ ಶಾಸ್ತ್ರಿ ಅವರು ರಿಲ್ಸ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಕೆಲವು ವಿಷಯಗಳನ್ನು ಪ್ರಸ್ತಾಪಿ ಭಾರತದ ಪರ ಮಾತನಾಡಿದ್ದರು.
ಹೀಗೆ ದೇಶದ ಪರ ಮಾತನಾಡುತ್ತಿದ್ದಂತೆ ಅವರಿಗೆ ಅನ್‌ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿರುವವರು ದೇಶದ ಪರ ಮಾತನಾಡಿದವರನ್ನು ಬೆಂಬಲಿಸಬೇಕು. ರಾಷ್ಟ್ರಪ್ರೇಮ, ದೇಶಭಕ್ತಿ ಮೆರೆಯಬೇಕು. ಆದರೆ ದೇಶದಲ್ಲಿ ಉಲ್ಟಾ ಆಗುತ್ತಿದೆ. ಈ ಕುರಿತು ನಟಿ ಕಾವ್ಯಾ ಅವರು ಕಾರಣ ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ನಟಿ ಕಾವ್ಯಾ ಅವರು ವಿಡಿಯೋದಲ್ಲಿ ''ಸಾಧಾರಣವಾಗಿ ನನಗೆ ದಿನಕ್ಕೆ ಕನಿಷ್ಠ 500 ರಿಂದ 600 ಫಾಲೋವರ್ಸ್‌ಗಳು ಹೆಚ್ಚಾಗುತ್ತಾರೆ. ಒಂದೊಂದು ದಿನ ಫಾಲೋವರ್ಸ್ ಸಂಖ್ಯೆ 1000 ದಷ್ಟು ಹೆಚ್ಚಾಗುತ್ತದೆ. ಅದು ಕಂಟೆಂಟ್ ಮೇಲೆ ಡಿಪೆಂಡ್ ಆಗಿರುತ್ತೆ''.
''ಪೆಹಲ್ಗಾಮ್ ಅಟ್ಯಾಕ್, ದೇಶಕ್ಕೆ ಆದ ಅನ್ಯಾಯ ಸಾವಿನ ಬಗ್ಗೆ ರೀಲ್ ಮಾಡಿದ್ದೆ. ದೇಶದ ಬಗ್ಗೆ ಕಂಟೆಂಟ್ ಹಾಕಿದ್ದೆ. ಅದಾದ ಬಳಿಕ ಪ್ರತಿ ದಿನ ನನ್ನ ಫಾಲೋವರ್ಸ ಸಂಖ್ಯೆ ಕಡಿಮೆ ಆಗುತ್ತಿದ್ದಾರೆ. ಅನ್‌ಫಾಲೋವರ್ಸ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನನಗೆ ನಷ್ಟವೇನು ಇಲ್ಲ. ಆದರೆ ಕೆಲವು ಅಂಶಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು''
ಬ್ಯಾನ್ ಮಾಡಿದ್ರು ನಾನು ದೇಶದ ಪರ: ನಟಿ
''ರಾಷ್ಟ್ರ, ರಾಷ್ಟ್ರೀಯತೆ, ಧರ್ಮ, ಭಾರತ, ಭಾರತ ಯೋಧರ ಬಗ್ಗೆ, ದೇಶದ ಪರವಾಗಿ ಮಾತನಾಡಿದರೆ ಉರುಕೊಂಡು ಅನ್‌ಫಾಲೋ ಮಾಡುತ್ತಾರೆ. ದೇಶಕ್ಕೆ ವಿರೋಧಿಗಳು ಹೊರಗಿಲ್ಲ. ದೇಶದ ಒಳಗೆ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇದು ನನಗೆ ಮಾತ್ರವಲ್ಲ ನನ್ನ ಸೆಲೆಬ್ರೇಟಿ ಸ್ನೇಹಿತೆಗೂ ಇದೇ ರೀತಿ ಆಗುತ್ತಿದೆ''
''ನೀವೆಷ್ಟೇ ಉರುಕೊಳ್ಳಿ, ನಮ್ಮನ್ನು ಅನ್‌ಫಾಲೋ ಮಾಡೋದು ಮಾತ್ರವಲ್ಲ ಬ್ಯಾನ್ ಮಾಡಿ..ನಾನು ಮಾತ್ರ ನನ್ನ ಧರ್ಮದ ಪರ, ರಾಷ್ಟ್ರದ ಪರ ಇದ್ದೇ ಇರುತ್ತೇನೆ'' ಎನ್ನುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಏನೇ ಆದರೂ, ಟ್ರೆಂಡ್ ಆದರೂ ಆಗದಿದ್ದರು, ಕೆಲವು ಸಂಗತಿಗಳು ಹೆಚ್ಚು ಸುದ್ದು ಮಾಡುತ್ತಿವೆ. ಅದರ ನಡುವೆ ಕೆಲವು ಗಂಭೀರ ವಿಷಯಗಳು ಸಹ ನಡೆದಿರುತ್ತವೆ. ಅವುಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುತ್ತದೆ. ಅಂಥದ್ದೇ ಒಂದು ವಿಚಾರವನ್ನು ನಟಿ ಕಾವ್ಯಾ ಅವರು ಹಂಚಿಕೊಂಡಿದ್ದಾರೆ.












Click it and Unblock the Notifications