Karthik Mahesh: ಬಿಗ್ ಬಾಸ್ 10ನೇ ಸೀಸನ್ ಗೆದ್ದ ಕಾರ್ತಿಕ್ ಮಹೇಶ್
ಬಿಗ್ ಬಾಸ್ ಕನ್ನಡ 10 ರ ಆವೃತ್ತಿಗೆ ತೆರೆ ಬಿದ್ದಿದ್ದು ಕಾರ್ತಿಕ್ ಮಹೇಶ್ ಅವರನ್ನು ವಿಜಯಶಾಲಿಯನ್ನಾಗಿ ಘೋಷಣೆ ಮಾಡಲಾಗಿದೆ. ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗಿನ ಕಠಿಣ ಸ್ಪರ್ಧೆಯ ನಡುವೆಯೂ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ.
ಬಿಗ್ ಬಾಸ್ ವಿನ್ನರ್ ಘೋಷಣೆಗೂ ಮುನ್ನವೇ ಅಭಿಮಾನಿಗಳು ಅವರ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಎಕ್ಸ್‌ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಎಂದು ಟ್ರೆಂಡಿಂಗ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ತಿಕ್ ಮಹೇಶ್ ಅವರಿಗೆ ಅಭಿನಂದನೆಗಳು ಹರಿದುಬರುತ್ತಿವೆ.

"ಅಭಿನಂದನೆಗಳು ಕಾರ್ತಿಕ್ ಮಹೇಶ್" ಮತ್ತು "ಬಿಗ್ ಬಾಸ್ 10 ರ ಟೈಟಲ್ ವಿನ್ನರ್ ಕಾರ್ತಿಕ್ ಮಹೇಶ್" ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿವೆ. ವ್ಯಾಪಕ ಚರ್ಚೆಗಳೊಂದಿಗೆ ಕಾರ್ತಿಕ್ ಗಣನೀಯ ಸಂಖ್ಯೆಯ ಮತಗಳೊಂದಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಪೈಪೋಟಿ ನಡುವೆ ಗೆದ್ದ ಮಹೇಶ್
ಪ್ರತಿಭಾವಂತ ನಟ ಮಹೇಶ್ ಕಾರ್ತಿಕ್ ಟಾಪ್ ಮೂರರ ರೇಸ್‌ನಲ್ಲಿದ್ದರು. ಸಹ ಫೈನಲಿಸ್ಟ್‌ಗಳಾದ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗೆ ಭಾರಿ ಪೈಪೋಟಿ ಇದ್ದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗಿದ್ದರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿದ್ದಾರೆ.
ಕಾರ್ತಿಕ್ ಮಹೇಶ್ ಅವರ ಗೆಲುವಿನ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಅಭಿಮಾನಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಭಿನಂದನಾ ಸಂದೇಶಗಳನ್ನು ಹಂಚಿಕೊಂಡಿದ್ದಾರೆ, ನಟನ ಪ್ರಯಾಣ ಮತ್ತು ಬಿಗ್ ಬಾಸ್ ಮನೆಯಲ್ಲಿ ವಿಜಯೋತ್ಸವವನ್ನು ಆಚರಿಸಿದ್ದಾರೆ. ಅರ್ಹವಾದ ವ್ಯಕ್ತಿಯೇ ಪ್ರಶಸ್ತಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಯಾರು ಈ ಕಾರ್ತಿಕ್ ಮಹೇಶ್?
ನಟ ಕಾರ್ತಿಕ್ ಮಹೇಶ್ ಮೂಲತಃ ಮೈಸೂರಿನವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ. ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದರು, ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದರು. ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ನಟಿಸಿದ್ದರು ನಂತರ ಕಲರ್ಸ್ ಕನ್ನಡ ಅಂತರಪಟ ಧಾರವಾಹಿಯಲ್ಲಿ 'ರವಿ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ 'ಡೊಳ್ಳು' ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅವರು ನಾಯಕನಾಗಿ ನಟಿಸದ ಮೊದಲ ಚಿತ್ರವೇ 2022ರ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆದುಕೊಂಡಿದೆ.












Click it and Unblock the Notifications