Karnataka Ratna: ಡಾ.ವಿಷ್ಣುವರ್ಧನ್‌, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

Karnataka Ratna 2026: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ (ಅಕ್ಟೋಬರ್ 30) 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 71 ಸಾಧಕರಿಗೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಹಿರಿಯ ನಟಿ ಬಿ.ಸರೋಜಾದೇವಿ ಹಾಗೂ ಡಾ.ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನ'ವನ್ನು ಮರಣೋತ್ತರವಾಗಿ ಘೋಷಿಸಿರುವುದು ವಿಶೇಷವಾಗಿದೆ.

71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ 71 ಗಣ್ಯರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಅನುಪಮ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಹಿರಿಯ ನಟಿ ಬಿ.ಸರೋಜಾದೇವಿ ಹಾಗೂ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನ'ವನ್ನು ಮರಣೋತ್ತರವಾಗಿ ಘೋಷಣೆ ಮಾಡಿರುವುದು ವಿಶೇಷತೆಯಾಗಿದೆ.

Karnataka Rajyotsava Award 71 Achievers Honoured Karnataka Ratna for Vishnuvardhan B Saroja Devi

ವಿವಿಧ ಕ್ಷೇತ್ರಗಳ ಸಾಧಕರ ವಿವರ

ವಿಕಾಸಸೌಧದಲ್ಲಿ ನಡೆದ ಅಧಿಕೃತ ಸುದ್ದಿಗೋಷ್ಠಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ನಾಡಿನ ವಿವಿಧ ಮೂಲೆಗಳಿಂದ ಶ್ರಮಿಸಿದ ಸಾಧಕರನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಬಾರಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರ ಸಂಖ್ಯೆ

* ಸಮಾಜಸೇವೆ: 9 ಸಾಧಕರು

* ಜಾನಪದ ಮತ್ತು ಸಂಕೀರ್ಣ ಕ್ಷೇತ್ರಗಳು: ತಲಾ 7 ಮಂದಿ

* ರಂಗಭೂಮಿ ಮತ್ತು ಸಾಹಿತ್ಯ: ತಲಾ 6 ಸಾಧಕರು

* ಶಿಕ್ಷಣ ಕ್ಷೇತ್ರ: 4 ಗಣ್ಯರು

* ಸಂಗೀತ, ಚಲನಚಿತ್ರ/ಕಿರುತೆರೆ ಹಾಗೂ ಕ್ರೀಡೆ: ತಲಾ 3 ಸಾಧಕರು

* ಶಿಲ್ಪಕಲೆ, ಕೃಷಿ, ವಿಜ್ಞಾನ/ತಂತ್ರಜ್ಞಾನ, ಮಾಧ್ಯಮ, ವೈದ್ಯಕೀಯ ಮತ್ತು ಆಡಳಿತ: ತಲಾ ಇಬ್ಬರು

* ನೃತ್ಯ, ಯಕ್ಷಗಾನ, ಬಯಲಾಟ, ಕರಕುಶಲ, ಪರಿಸರ, ಛಾಯಾಗ್ರಹಣ, ವಾಸ್ತುಶಾಸ್ತ್ರ, ಇಂಜಿನಿಯರಿಂಗ್, ನ್ಯಾಯಾಂಗ, ಹೊರನಾಡು/ಹೊರದೇಶ ಹಾಗೂ ಚಿತ್ರಕಲೆ ವಿಭಾಗಗಳಿಂದ ತಲಾ ಒಬ್ಬೊಬ್ಬ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಆಹ್ವಾನ

ಈ ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬರುವ ನವೆಂಬರ್ 19ರಂದು ವಿಜೃಂಭಣೆಯಿಂದ ನಡೆಯಲಿದೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಆಚರಿಸಲು ರಾಜ್ಯದ ಸರ್ಕಾರ ತೀರ್ಮಾನಿಸಿದೆ. ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲದೆ, ಡಾ.ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಿದ ಪ್ರಮುಖ ಕಲಾವಿದರು ಮತ್ತು ಚಿತ್ರರಂಗದ ತಂತ್ರಜ್ಞರನ್ನು ವಿಶೇಷವಾಗಿ ಆಹ್ವಾನಿಸಲಾಗುವುದು. ನಾಡಿನಲ್ಲಿ ಈ ಗೌರವಕ್ಕೆ ಅರ್ಹರಾದ ಇನ್ನಷ್ಟು ಮಹನೀಯರಿದ್ದು, ಮುಂಬರುವ ದಿನಗಳಲ್ಲಿ ಅವರಿಗೂ ಹಂತ-ಹಂತವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

'ಕರ್ನಾಟಕ ರತ್ನ' ಪ್ರಶಸ್ತಿಯ ಮಹತ್ವ

'ಕರ್ನಾಟಕ ರತ್ನ' ಪ್ರಶಸ್ತಿಯು ಕರ್ನಾಟಕ ಸರ್ಕಾರದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ, ಚಲನಚಿತ್ರ, ಸಮಾಜಸೇವೆ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಹಾಗೂ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಪ್ರಶಸ್ತಿಯನ್ನು 1991-92ರಲ್ಲಿ ಪ್ರಾರಂಭಿಸಲಾಯಿತು. 1992ರಲ್ಲಿ ಪ್ರಥಮ ಬಾರಿಗೆ ರಾಷ್ಟ್ರಕವಿ ಕುವೆಂಪು (ಸಾಹಿತ್ಯ) ಮತ್ತು ನಟಸಾರ್ವಭೌಮ ಡಾ.ರಾಜ್‌ಕುಮಾರ್ (ಸಿನಿಮಾ) ಅವರಿಗೆ ಈ ಗೌರವವನ್ನು ನೀಡಲಾಯಿತು. ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+