Darshan Thoogudeepa Bail: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಒಪ್ಪಿಗೆ-ಮಾಹಿತಿ ಇಲ್ಲಿದೆ
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಗ್ ಜೈಲು ಪಾಲಾಗಿದೆ. ಅಕ್ಟೋಬರ್ 14ರಂದು ಜಾಮೀನು ಅರ್ಜಿಯನ್ನು ಬೆಂಗಳೂರಿನ 57ಮೇ ಸಿಸಿಎಚ್ ಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಅಕ್ಟೋಬರ್ 22ಕ್ಕೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಒಪ್ಪಿಗೆ ನೀಡಿದೆ.
ಹೈಕೋರ್ಟ್‌ನಲ್ಲಿ ಅಕ್ಟೋಬರ್ 22ರಂದು ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಟ ದರ್ಶನ್ ಪರ ವಾದ ಮಂಡನೆ ಮಾಡಲಿರುವ ವಕೀಲ ಎಸ್.ಸುನೀಲ್ ಅವರು, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಪೀಠಕ್ಕೆ ಜಾಮೀನು ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದರ್ಶನ್ ಮತ್ತು ಆಪ್ತರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯವು ಸೋಮವಾರ (ಅಕ್ಟೋಬರ್ 15) ವಜಾಗೊಳಿಸಿತ್ತು. ಆರೋಪಿ ದರ್ಶನ್, ರೇಣುಕಸ್ವಾಮಿ ಹಲ್ಲೆ ಹಾಗೂ ಹತ್ಯೆ ವೇಳೆ ಘಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ಸಿಡಿಆರ್ ಸಾಕ್ಷ್ಯ ಇದೆ. ದರ್ಶನ್ ಡಿಎನ್‌ಎ ಪರೀಕ್ಷೆಯಿಂದ ಘಟನಾ ಸ್ಥಳದಲ್ಲಿದ್ದರು ಎಂಬುದು ಪತ್ತೆಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದೆಂದು ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಇನ್ನು ವಾದ-ಪ್ರತಿವಾದವನ್ನು ಆಲಿಸಿದ್ದ 57ನೇ ಸಿಸಿಎಂ ಕೋರ್ಟ್ ನಟ ದರ್ಶನ್ & ಪವಿತ್ರಾ ಗೌಡ ಇಬ್ಬರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅದಾದ ಬಳಿಕ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್‌ನಲ್ಲಿ ಅಕ್ಟೋಬರ್ 22ರಂದು ಏನಾಗಲಿದೆ ಎಂದು ಕಾದುನೋಡಬೇಕಿದೆ.
ದರ್ಶನ್ ಪರ ವಕೀಲರ ವಾದ: ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು. ಹಾಗಾದರೆ ದರ್ಶನ್ ಫೋಟೋ ಹೇಗೆ ಬಂತು? ದರ್ಶನ್ ಪೋಟೋ ತೆಗೆದುಕೊಂಡು ಎಡಿಟ್ ಮಾಡಿ ತೋರಿಸಲಾಗಿದೆ. ರೇಣುಕಾಸ್ವಾಮಿ ದೇಹದ ಮೇಲೆ 1 ಸೆಂಟಿ ಮೀಟರ್ ಗಾಯ ಇತ್ತು. ದೇಹದ ಮೇಲೆ 39 ಗಾಯಗಳಿದ್ದವು ಎಂದು ವೈದ್ಯರು ಹೇಳಿದ್ದಾರೆ. ತಲೆಗೆ ಬಲವಾಗಿ ಹೊಡೆದರೆ ರಕ್ತ ಧಾರಕಾರವಾಗಿ ಸುರಿಯಲ್ಲ, ಚಿಮ್ಮುತ್ತದೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.
ಶೆಡ್ ಕೆಲಸಗಾರ ಕಿಶೋರ್ ಹೇಳಿಕೆ ದಾಖಲಿಸಲು ತಡ ಮಾಡಿದ್ಯಾಕೆ? ಸ್ಟೋನಿಬ್ರೂಕ್ ಪಬ್ ಸ್ಥಳವನ್ನು ಅಪರಾಧ ಜಾಗವಾಗಿ ತೋರಿಸಿದ್ದಾರೆ. ಇದೇನಾ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ್ದರು.
ಪ್ರಸನ್ನಕುಮಾರ್ ವಾದ: ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿ ಮಾಡಿಲ್ಲ. ಕೇವಲ ಐಪಿ ಅಡ್ರೆಸ್‌ನಿಂದ ಈ ವರದಿ ಸಿದ್ಧಪಡಿಸಿಲ್ಲ. ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧವಾಗಿದೆ. ದರ್ಶನ್ ಸಿಮ್ ಹೇಮಂತ್‌ಗೆ ಸೇರಿದ್ದು ಅಂತಾ ಸಿ.ವಿ.ನಾಗೇಶ್ ಹೇಳುತ್ತಾರೆ. 'ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬಿ' ಎನ್ನುವಂತಹ ಮೆಸೇಜ್‌ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ? ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆಯಾಗಿದೆ. ಸಂಚು ರೂಪಿಸಿ ಕೊಲೆ ಮಾಡಿದ ಹಿನ್ನೆಲೆ ದರ್ಶನ್ ಬಂಧನವಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದರು.












Click it and Unblock the Notifications