Karna Serialನಲ್ಲಿ ಅನಿರೀಕ್ಷಿತ ತಿರುವು: ಮುಖ್ಯಪಾತ್ರಧಾರಿ ಸಾವು - ಡಾ.ಕರ್ಣಗೆ ಎದುರಾಯ್ತು ಆಘಾತ; ಸಂಕಷ್ಟ!
ಕರ್ಣ ಸೀರಿಯಲ್‌ನಲ್ಲಿ ನಿತ್ಯ ಪಾತ್ರ ಅಂತ್ಯವಾಗಿದೆ. ಕನ್ನಡ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್‌ನ ಪ್ರಮುಖ ಪಾತ್ರಧಾರಿ ನಿತ್ಯಾ ಪಾತ್ರವನ್ನು ನಮ್ರತಾ ಗೌಡ ಅವರು ಮಾಡುತ್ತಿದ್ದರು. ಈ ಸೀರಿಯಲ್ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ನಿತ್ಯಾ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪಿರುವಂತೆ ತೋರಿಸಲಾಗಿದೆ. ಈ ಸಾವಿಗೆ ಡಾ. ಕರ್ಣನ ಎಡವಟ್ಟೇ ಕಾರಣ ಎನ್ನುವಂತೆ ಬಿಂಬಿಸಲಾಗಿದೆ. ಆದರೆ, ಕರ್ಣ ಸೀರಿಯಲ್‌ನಲ್ಲಿ ಮೊದಲಿನಿಂದಲೂ ನಿತ್ಯಾ ಪಾತ್ರಕ್ಕೆ ನ್ಯಾಯ ನೀಡಿಲ್ಲ ಎನ್ನುವ ಆರೋಪವಿತ್ತು. ಇದೀಗ ನಿತ್ಯಾ ಸಾವನ್ನಪ್ಪಿರುವಂತೆ ತೋರಿಸಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ಣ ಸೀರಿಯಲ್‌ನ ಹೊಸ ಎಪಿಸೋಡ್‌ನಲ್ಲಿ ಏನು ತೋರಿಸಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ಣ ಸೀರಿಯಲ್‌ನಲ್ಲಿ ಅನಿರೀಕ್ಷಿತ ತಿರುವು ಎದುರಾಗಿದೆ. ಆಸ್ಪತ್ರೆಗೆ ನಿತ್ಯಾಳನ್ನು ನೋಡಲು ಬಂದ ನಿಧಿಗೆ ಆಘಾತ ಎದುರಾಗಿದೆ. ಎಲ್ಲರೂ ಆಘಾತದಲ್ಲಿ ಇರುವ ದೃಶ್ಯವನ್ನು ನೋಡಿದ ನಿಧಿ, ಏನಾಯ್ತು ಅಂತ ಕೇಳಿದ್ದಾಳೆ. ಇದಕ್ಕೆ ಎಲ್ಲರೂ ಒಳಗೆ ಹೋಗಿ ನೋಡಿ ಅಂತ ಹೇಳಿದ್ದಾರೆ. ಆಸ್ಪತ್ರೆಯ ಕೋಣೆಯ ಒಳಗೆ ಹೋಗಿ ನೋಡಿದ ನಿಧಿಗೆ ಆಕಾಶವೇ ಕಳಚಿ ಬಿದ್ದಂತೆ ಆಗಿದೆ.

ಕರ್ಣ ಸರ್‌ಗೆ ಏನಾಯ್ತು; ಅಕ್ಕಗೆ ಏನಾಯ್ತು ಅಂತ ನಿಧಿ ಕೇಳಿದ್ದಾಳೆ. ಇದಕ್ಕೆ ಕರ್ಣಗೆ ಪ್ರಜ್ಞೆ ತಪ್ಪಿದ್ದಾನೆ; ನಿಧಿ ನಮ್ಮನ್ನು ಅಗಲಿದ್ದಾಳೆ ಅಂತ ಹೇಳಲಾಗಿದೆ. ಈ ವಿಷಯವನ್ನು ಕೇಳಿ ನಿಧಿ ಕಂಗಾಲಾಗಿದ್ದಾಳೆ. ಆಕಾಶವೇ ಕಳಚಿ ಬಿದ್ದ ಅನುಭವ ಆಗಿದೆ. ಅಕ್ಕ ಪ್ಲೀಸ್ ಎದ್ದೇಳು... ನನ್ನ ಜೊತೆ ಮಾತಾಡೇ ಅಂತ ರಿಕ್ವೆಸ್ಟ್ ಮಾಡಿದ್ದಾಳೆ. ಆದರೆ, ನಿಧಿ ಸಾವನ್ನಪ್ಪಿರುವುದನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ಅನಿರೀಕ್ಷಿತ ತಿರುವು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ನಿತ್ಯಾ ಪಾತ್ರವನ್ನು ಸಾಯಿಸಬಾರದಾಗಿತ್ತು ಅಂತ ಹಲವು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Karna Serial: ಕರ್ಣ ಸೀರಿಯಲ್ ತಿರುವು ನೋಡಿ ವೀಕ್ಷಕರು ಏನಂದ್ರು ?
ಇನ್ನು ಕರ್ಣ ಸೀರಿಯಲ್‌ನ ಅನಿರೀಕ್ಷಿತ ತಿರುವು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪಾತ್ರಕ್ಕೆ ಜೀವ ಕೊಡಬಹುದಿತ್ತು. ನಿತ್ಯಾ ಪಾತ್ರವನ್ನು ಚೆನ್ನಾಗಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿತ್ತು. ಆದರೆ, ಇದು ನಿರೀಕ್ಷಿತವೇ ಆಗಿತ್ತು ಅಂತಲೂ ಕರ್ಣ ಸೀರಿಯಲ್‌ನ ವೀಕ್ಷಕರು ಹೇಳಿದ್ದಾರೆ. ಇನ್ನು ಮುಂದೆ ನಿತ್ಯಾ ಸಾವಿಗೆ ಡಾ. ಕರ್ಣನೇ ಕಾರಣ, ಕರ್ಣನ ಮೇಲೆ ಅಪವಾದ ಬಂದು ಮುಂದೆ ಹೇಗೆ ಸಮಸ್ಯೆ ಆಗಲಿದೆ, ಈ ಕುತಂತ್ರಕ್ಕೆ ಕಾರಣ ಯಾರು ಅದನ್ನು ಹೇಗೆ ಪತ್ತೆ ಮಾಡಲಾಗುತ್ತದೆ ಎನ್ನುವುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಕರ್ಣ ಸೀರಿಯಲ್ ಉತ್ತಮವಾಗಿ ಮೂಡಿ ಬರುತ್ತಿದೆ ಎನ್ನುವಾಗಲೇ ಈ ರೀತಿಯ ತಿರುವು ಬೇಡವಾಗಿತ್ತು. ತಾರಾಗೆ ಶಿಕ್ಷೆ ಆಗಬೇಕು, ನಿತ್ಯಾ ಅವರು ಕೋಮಾಗೆ ಹೋದರು ಅಂತಾದರೂ ತೋರಿಸಬಹುದಾಗಿತ್ತು ಅಂತಲೂ ಹಲವು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕರ್ಣ ಸೀರಿಯಲ್ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ.




Click it and Unblock the Notifications
