ಕರ್ಣ ಸೀರಿಯಲ್ ಕಿರಣ್ ರಾಜ್ ಹೆಂಡ್ತಿ ಆಗೋಳಿಗೆ ಈ ಗುಣಗಳೆಲ್ಲಾ ಇರಲೇ ಬೇಕಂತೆ
Kiran Raj: ನಟ ಹಾಗೂ ಕರ್ಣ ಸೀರಿಯಲ್ನ ಮುಖ್ಯ ಪಾತ್ರಧಾರಿ ಕಿರಣ್ ರಾಜ್ ಅವರು ಮದುವೆ ಆಗುವ ಹುಡುಗಿ ಹೇಗೆ ಇರಬೇಕು ಎನ್ನುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕನ್ನಡ ಸೀರಿಯಲ್ಗಳಲ್ಲಿ ಮಿಂಚುತ್ತಿರುವ ಕಿರಣ್ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕನ್ನಡತಿ ಹಾಗೂ ಕರ್ಣ ಸೀರಿಯಲ್ಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತ ಆಗಿರುವ ಕಿರಣ್ ರಾಜ್ ಅವರು, ಹೆಂಡ್ತಿ ಆಗೋಳಿಗೆ ಈ ಗುಣಗಳೆಲ್ಲಾ ಇರಲೇ ಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. Zeekannadanews ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ.
ಮದುವೆ ಆಗುವ ಹುಡುಗಿ ಹೇಗೆ ಇರಬೇಕು ಎನ್ನುವ ಬಗ್ಗೆ ಕಿರಣ್ ರಾಜ್ ಅವರು ಮಾತನಾಡಿದ್ದಾರೆ. ಕಾದಂಬರಿಗಳಲ್ಲಿ ಹಾಗೂ ಭಾರತೀಯ ಸಿನಿಮಾಗಳಲ್ಲಿ ಭಾರತೀಯ ನಾರಿ ಎಂದು ವರ್ಣಿಸುತ್ತಾರಲ್ಲ ಆ ರೀತಿ ಇರಬೇಕು ಅಷ್ಟೇ ಅಂತ ಕಿರಣ್ ರಾಜ್ ಅವರು ಹೇಳಿದ್ದಾರೆ. ಒಂದೇ ಸಾಲಿನಲ್ಲಿ ಸಂಪ್ರದಾಯವಂತೆ ಹಾಗೂ ಭಾರತೀಯ ನಾರಿಯಂತೆ ಇರಬೇಕು ಎಂದು ಕರ್ಣ ಖ್ಯಾತಿಯ ಕಿರಣ್ ರಾಜ್ ಅವರು ಹೇಳಿದ್ದಾರೆ. ಅಂದ್ರೆ ಟ್ರೆಡಿಷನ್ ಅಂತ ಮಾತ್ರವಲ್ಲ. ಟ್ರೆಡಿಷನ್ ಎನ್ನುವುದು ಜೀವನ ಶೈಲಿ ನಾನು ಅದನ್ನು ಮಾತ್ರ ಹೇಳುತ್ತಿಲ್ಲ. ನಮ್ಮ ಸಂಸ್ಕೃತಿಯ ಬಗ್ಗೆ ನಾನು ಮದುವೆ ಆಗುವ ಹುಡುಗಿಗೆ ಜ್ಞಾನ ಇರಬೇಕು ಎಂದು ಹೇಳಿದ್ದಾರೆ.

ಮುಂದುವರಿದು ಎಲ್ಲಿ, ಯಾವ ರೀತಿ ಹೇಗೆ ಹಾಗೂ ಯಾವುದನ್ನು ಮಾಡಬೇಕು ಎನ್ನುವ ಬಗ್ಗೆ ನಾನು ಮದುವೆ ಆಗುವ ಹುಡುಗಿಗೆ ಸಾಮಾನ್ಯ ಜ್ಞಾನ ಇರಬೇಕು ಅಂತಲೂ ಕಿರಣ ರಾಜ್ ಅವರು ಹೇಳಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿರಣ್ ರಾಜ್ ಅವರ ವೀಡಿಯೋ ವೈರಲ್ ಆಗುತ್ತಿದೆ.
ಇನ್ನು ಕರ್ಣ ಸೀರಿಯಲ್ನ ನಟ ಕಿರಣ್ ರಾಜ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ಕಿರಣ್ ರಾಜ್ ಅವರು ನಿಜ ಜೀವನದಲ್ಲಿ ಈಗಲೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ. ಕರ್ಣ ಸೀರಿಯಲ್ನಲ್ಲಿ ನಿಧಿ - ನಿತ್ಯಾ ಅವರ ನಡುವೆ ಕರ್ಣನ ಪ್ರೀತಿಗೆ ಪೈಪೋಟಿ ನಡೆದಿತ್ತು. ಇದೀಗ ಕೊನೆಗೂ ನಿತ್ಯಾ ಮತ್ತು ಕರ್ಣ ಒಂದಾಗಿದ್ದಾರೆ. ಆದರೆ ನಿಜ ಜೀವನದಲ್ಲಿ ಕರ್ಣ ಬೇರೆಯೇ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಈಚೆಗೆ ಹೇಳಿಕೊಂಡಿದ್ದರು. ಕರ್ಣ ಅಲಿಯಾಸ್ ಕಿರಣ್ ರಾಜ್ ಅವರಿಗೆ ಪ್ರೇಕ್ಷಕರ ಡಿಮ್ಯಾಂಡ್ ಹಾಗೂ ಕೆಲವೊಂದು ಮನವಿಗಳು ತಲೆಬಿಸಿಯನ್ನೂ ತಂದಿದೆ ಅಂತ ಹೇಳಿಕೊಂಡಿದ್ದಾರೆ. ಈ ಮಜವಾದ ಅನುಭವವನ್ನು ಕಿರಣ್ ಅವರೇ ಹಂಚಿಕೊಂಡಿದ್ದರು.
ಇನ್ನು ಕರ್ಣ ಶೂಟಿಂಗ್ ಸೆಟ್ಗೆ ಬರುವ ಕೆಲವು ಅಭಿಮಾನಿಗಳು, ನನ್ನನ್ನು ನೋಡಿ ನನ್ನ ಮಗಳನ್ನು ಮದುವೆಯಾಗಿ ಎನ್ನುತ್ತಾರೆ. ನನ್ನ ಬಗ್ಗೆ ಹಿಂದೆ - ಮುಂದೆ ಗೊತ್ತಿರಲ್ಲ. ನಟನಾಗಿದ್ದೇನೆ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಾರೆ. ತಮ್ಮ ಮಗಳಿಗೆ ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಅವರು ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ ಅಂತ ತೋರಿಸುತ್ತೆ ಅಂತಲೂ ಕಿರಣ್ ರಾಜ್ ಅವರು ಈಚೆಗೆ ಹೇಳಿಕೊಂಡಿದ್ದರು.













Click it and Unblock the Notifications