ಕಾಂತಾರ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಸಿನಿಮಾ ಮಾಡಲ್ಲ ಅಂತಾ... Rishab Shetty
ಕನ್ನಡಿಗರ 'ಕಾಂತಾರಾ' ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಈಗ ಇಡೀ ಇಂಡಿಯಾ ಪೂರ್ತಿ ಮಿಂಚಿ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂತಹ ಸಮಯದಲ್ಲೇ ಕನ್ನಡಿಗರು ರಿಷಬ್ ಶೆಟ್ಟಿ ಅವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರು, ಕನ್ನಡ ನಾಡಿನ ಎಲ್ಲೆಲ್ಲೂ ರಿಷಬ್ ಶೆಟ್ಟಿ ಅವರ ಆ ಒಂದು ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು....
ರಿಷಬ್ ಶೆಟ್ಟಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ರಿಷಬ್‌ರ ಸಿನಿಮಾ ಕರಿಯರ್ ದೊಡ್ಡ ಮಟ್ಟದಲ್ಲಿ ರಾರಾಜಿಸುತ್ತಿದೆ. ಅದ್ರಲ್ಲೂ ಕಾಂತಾರ ಸಿನಿಮಾಗೆ ಸಿಕ್ಕ ಅಭೂತಪೂರ್ವ ಬೆಂಬಲ ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡಿದೆ. ಅಲ್ಲದೆ ಪ್ರಪಂಚದ ಮಟ್ಟಕ್ಕೆ ಬೆಳೆಯಲು ರಿಷಬ್ ಶೆಟ್ಟಿ ದೊಡ್ಡ, ದೊಡ್ಡ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೀಗಿದ್ದಾಗಲೇ ಕಾಂತಾರ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಸಿನಿಮಾ ಮಾಡಲ್ಲ ಅಂತಾ...

ಕಾಂತಾರ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್....
ರಿಷಬ್ ಶೆಟ್ಟಿ ಅವರು ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗದಲ್ಲಿ ಇನ್ನೂ ದೊಡ್ಡ ಹೆಸರು ಮಾಡಲು, ಬಾಲಿವುಡ್ ಅಖಾಡಕ್ಕೆ ಎಂಟ್ರಿಯನ್ನು ಕೊಟ್ಟಿದ್ದಾರೆ ಎಂಬ ಸುದ್ದಿ ಸಿಕ್ಕಿತ್ತು. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಮುಂದಾಗಿದ್ದರು. ಆದರೆ ಕನ್ನಡಿಗರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, ಕಾಂತಾರ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಸಿನಿಮಾ ಮಾಡಲ್ಲ ಅಂತಾ...
ಕನ್ನಡಿಗ 'ಕಾಂತಾರಾ' ರಿಷಬ್ ಶೆಟ್ಟಿ...
ಹೌದು, ರಿಷಬ್ ಶೆಟ್ಟಿ ಅವರು ಯಾವಾಗ ಮರಾಠ ಸಾಮ್ರಾಜ್ಯದ ರಾಜ ಛತ್ರಪತಿ ಶಿವಾಜಿಯ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಸಿಕ್ಕಿತ್ತೋ ಆಗಲೇ ಕನ್ನಡ ನಾಡಿನ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ರಿಷಬ್ ಶೆಟ್ಟಿ ಅವರು ಈ ಬಗ್ಗೆ ಪೋಸ್ಟರ್ ಒಂದನ್ನ ರಿಲೀಸ್ ಮಾಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಆರಂಭವಾಗಿತ್ತು, ಅಲ್ಲದೆ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಸಿನಿಮಾ ಮಾಡುವ ಬದಲು ಕನ್ನಡದ ರಾಜ ಇಮ್ಮಡಿ ಪುಲಿಕೇಶಿ ಸಿನಿಮಾ ಮಾಡಬೇಕು ಎಂಬ ಒತ್ತಾಯ ಮಾಡಿದ್ದರು. ಇದೀಗ ಈ ಬಗ್ಗೆ ರಿಷಬ್ ಶೆಟ್ಟಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ!
ಅಂದಹಾಗೆ ಕನ್ನಡ ನಾಡಿನಲ್ಲಿ ಛತ್ರಪತಿ ಶಿವಾಜಿ ಸಿನಿಮಾ ಮಾಡಲು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕನ್ನಡಿಗ 'ಕಾಂತಾರಾ' ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಸಿನಿಮಾ ಕೈಬಿಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕಾಂತಾರ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಸಿನಿಮಾ ಮಾಡಲ್ಲ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ರಿಷಬ್ ಶೆಟ್ಟಿ ಅವರಿಂದ ಆಗಲಿ ಅಥವಾ ಛತ್ರಪತಿ ಶಿವಾಜಿ ಸಿನಿಮಾ ತಂಡದಿಂದಲೇ ಆಗಲಿ ಸಿಕ್ಕಿಲ್ಲ. ಹೀಗಾಗಿ ಭಾರಿ ದೊಡ್ಡ ಚರ್ಚೆ ಶುರುವಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನಿರೀಕ್ಷೆ ಮಾಡುತ್ತಿದ್ದಾರೆ ಅಭಿಮಾನಿಗಳು ಕನ್ನಡಿಗರು.












Click it and Unblock the Notifications