ಕೆಜಿಎಫ್ ದಾಖಲೆ ಮುರಿದು 20,00,00,00,000 ರೂಪಾಯಿ ಕೆಲೆಕ್ಷನ್ ಮಾಡಲು ಕಾಂತಾರಾ ಸಿನಿಮಾ... Kantara Movie Budget
ಕನ್ನಡ ಸಿನಿಮಾ ಇಂಡಸ್ಟ್ರಿ 100 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದು, ಈಗ ಕನ್ನಡ ಸಿನಿಮಾ ಲೋಕದಲ್ಲೇ ಭರ್ಜರಿ ಬಿರುಗಾಳಿ ಎಬ್ಬಿಸಲು 'ಕಾಂತಾರ' ಸಿನಿಮಾ ಬರ್ತಿದೆ. ರಿಲೀಸ್ ಆಗುವ ಮೊದಲೇ ಕಾಂತಾರಾ ಸಿನಿಮಾ ನೂರಾರು ದಾಖಲೆ ಪುಡಿಪುಡಿ ಮಾಡಿದೆ. ಹೀಗಾಗಿಯೇ ಈಗ ರಿಷಬ್ ಶೆಟ್ಟಿ ಅಭಿಮಾನಿಗಳು & ಕಾಂತಾರಾ ಸಿನಿಮಾದ ಅಭಿಮಾನಿಗಳು ಹೃದಯದ ಬಡಿತ ಕಂಟ್ರೋಲ್ ಮಾಡಿಕೊಂಡು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಕೆಜಿಎಫ್ ದಾಖಲೆ ಮುರಿದು 20,00,00,00,000 ರೂಪಾಯಿ ಕೆಲೆಕ್ಷನ್ ಮಾಡಲು ಕಾಂತಾರಾ ಸಿನಿಮಾ...
ಕಾಂತಾರ.. ಕಾಂತಾರ.. ಕಾಂತಾರ... ಹೀಗೆ ಕನ್ನಡಿಗರ ಸಿನಿಮಾ ಕಾಂತಾರ ಬಗ್ಗೆ ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಮಾತನಾಡುತ್ತಿದ್ದಾರೆ ಜನ. ಕನ್ನಡಿಗರ ಸಿನಿಮಾ ಕಾಂತಾರ ರಿಲೀಸ್ ಆಗುವ ಮೊದಲೇ ಪ್ರಪಂಚದ ಮೂಲೆ ಮೂಲೆಗೂ ತನ್ನ ಹವಾ ಹಬ್ಬಿಸಿತ್ತು. ಅದರಲ್ಲೂ ರಿಷಬ್ ಶೆಟ್ಟಿ ಅವರ ನಿರ್ದೇಶನ ಇಡೀ ಜಗತ್ತನ್ನು ಕನ್ನಡ ನಾಡಿನ ಕಡೆಗೆ ಸೆಳೆದಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ ಮತ್ತಷ್ಟು ಸಂಚಲನ ಸೃಷ್ಟಿಯಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಈ 20,00,00,00,000 ರೂಪಾಯಿ ಕೆಲೆಕ್ಷನ್ ಮಾಡಲು ಕಾಂತಾರಾ ಸಿನಿಮಾ ಮುನ್ನುಗ್ಗಿದೆ ಅಂತಾ ಹೇಳುತ್ತಿದ್ದಾರೆ ಅಭಿಮಾನಿಗಳು.

ಪರಭಾಷೆ ಪ್ರೇಕ್ಷಕರಿಂದಲೂ ಭರ್ಜರಿ ಬೆಂಬಲ!
ರಿಷಬ್ ಶೆಟ್ಟಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ, ರಿಷಬ್ ಅವರ ಸಿನಿಮಾ ಕರಿಯರ್ ದೊಡ್ಡ ಮಟ್ಟದಲ್ಲಿ ರಾರಾಜಿಸುತ್ತಿದೆ. ಅದ್ರಲ್ಲೂ ಕಾಂತಾರ ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ, ಅಭೂತಪೂರ್ವ ಬೆಂಬಲ ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡಿದೆ. ಇಷ್ಟೆಲ್ಲದರ ನಡುವೆ ಇದೀಗ ಕಾಂತಾರ ಸಿನಿಮಾದ ಮುಂದುವರಿದ ಭಾಗ ಸಾವಿರಾರು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿ, ಮಿಂಚಿನ ಸಂಚಲನ ಸೃಷ್ಟಿಸಿದೆ. ಕನ್ನಡಿಗರ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷಿಗರು ಕನ್ನಡ ಸಿನಿಮಾಗೆ ಜೈ ಜೈ ಎಂದಿದ್ದಾರೆ.
ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ... ಕರಾವಳಿ ಸಂಸ್ಕೃತಿಯ ಅಬ್ಬರ ಕಂಡು ಇಡೀ ಇಂಡಿಯಾ ಮಾತ್ರ ಅಲ್ಲ ಇಡೀ ಜಗತ್ತು ಒಂದು ಬಾರಿ ತಲೆಬಾಗಿ ನಮಸ್ಕರಿಸಿದೆ... ಹೌದು, ಕಾಂತಾರ ಸಿನಿಮಾ ಎಲ್ಲೆಲ್ಲೂ ತನ್ನ ಹವಾ ಎಬ್ಬಿಸಿದೆ, ಸಿನಿಮಾ ನೋಡಲು ಟಿಕೆಟ್ ಸಿಗದೆ ಅಭಿಮಾನಿಗಳೂ ಕಾಯುವಂತೆ ಆಗಿದೆ. ಕನ್ನಡ ಸಿನಿಮಾ ನೋಡಿ ತೆಲುಗು, ತಮಿಳು, ಮಲಯಾಳಂ & ಹಿಂದಿ ಸಿನಿಮಾಗಳ ಪ್ರೇಕ್ಷಕ ಪ್ರಭುಗಳು ಕೂಡ ಫಿದಾ ಆಗಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ ಕಾಂತಾರಾ ಪ್ರೇಮಿಗಳಿಗೆ ಇದೀಗ ಸಿಕ್ಕಿದೆ!












Click it and Unblock the Notifications