ಕಾಂತಾರ ಚಾಪ್ಟರ್ 1: ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಬೆಂಚ್ ಮಾರ್ಕ್ ಸೃಷ್ಟಿ ನಟ ಯಶ್!

ಭಾರತೀಯ ಸಿನಿಮಾರಂಗದಲ್ಲಿ ಕಾಂತಾರ ಚಾಪ್ಟರ್ 01 ಭಾರೀ ಸುದ್ದಿ ಮಾಡುತ್ತಿದೆ. ದೈವದ ಹಿನ್ನೆಲೆ - ಪುರಾಣ, ಧರ್ಮ - ಅಧರ್ಮಗಳ ಈ ಕಥಾ ಹಂದರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಕಾಂತಾರಗೆ ಕನ್ನಡ ಚಿತ್ರರಂಗದ ನಟರು ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಭಾರತದ ವಿವಿಧ ಚಿತ್ರರಂಗದ ನಟ - ನಟಿಯರು, ನಿರ್ದೇಶಕರು ಸೇರಿದಂತೆ ಹಲವರು ಶುಭಕೋರುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಸಹ ಕಾಂತಾರ ಚಾಪ್ಟರ್ 1ರ ಬಗ್ಗೆ ವಿಶೇಷವಾದ ಟ್ವೀಟ್ ಮಾಡಿದ್ದಾರೆ.

ಕಾಂತಾರ ಚಾಪ್ಟರ್ 1: ಕನ್ನಡ ಮತ್ತು ಭಾರತೀಯ ಸಿನಿಮಾಕ್ಕೆ ಹೊಸ ಬೆಂಚ್ ಮಾರ್ಕ್ ಕ್ರಿಯೇಟ್ ಮಾಡಿದೆ. ನಟ ರಿಷಬ್ ಶೆಟ್ಟ ಅವರೇ ನಿಮ್ಮ ದೃಢನಿಶ್ಚಯ, ಸವಾಲುಗಳನ್ನು ಮೀರುವ ಬದ್ಧತೆ ಮತ್ತು ಸಂಪೂರ್ಣ ಭಕ್ತಿ ಪ್ರತಿ ಫ್ರೇಮ್‌ನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ಬದಲಾಗಿದೆ. ವಿಜಯ್ ಕಿರಗಂದೂರ್ ಸರ್ ಮತ್ತು ಹೊಂಬಾಳೆ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿಮ್ಮ ದೃಷ್ಟಿಕೋನ ಮತ್ತು ಅಭೂತಪೂರ್ವ ಬೆಂಬಲ ನಿರಂತರವಾಗಿ ಚಿತ್ರರಂಗ ಉದ್ಯಮದ ಮಟ್ಟವನ್ನು ಹೆಚ್ಚಿಸುತ್ತಿದೆ.

Kantara Chapter 1 Yash Says Film Sets a New Benchmark in Indian Cinema

ರುಕ್ಮಿಣಿ ವಸಂತ್ ಹಾಗೂ ಗುಲ್ಶನ್ ದೇವಯ್ಯ ಅವರು ನೀವು ಸಿನಿಮಾದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದೀರಿ. ಅಜನೀಶ್ ಅವರೇ ನಿಮ್ಮ ಸಂಗೀತವು ಆ ಫ್ರೇಮ್‌ಗಳಿಗೆ ಜೀವ ತುಂಬುತ್ತದೆ. ಅರವಿಂದ್ ಕಶ್ಯಪ್, ನಿಮ್ಮ ಅದ್ಭುತ ಕ್ಯಾಮೆರಾ ಕೆಲಸವು ಇದಕ್ಕೆ ಜೀವ ತುಂಬಿದೆ. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮತ್ತು ಇಡೀ ಸಿನಿಮಾ ತಂಡ ಮತ್ತು ಸಿಬ್ಬಂದಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಈ ಚಿತ್ರದಲ್ಲಿ ದಿವಂಗತ ರಾಕೇಶ್ ಪೂಜಾರಿ ಅವರಿಗೆ ಕೊಟ್ಟಿರುವ ಗೌರವವು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ಒಟ್ಟಾಗಿ, ನೀವೆಲ್ಲರೂ ಸಂಪೂರ್ಣವಾಗಿ ಅದ್ಭುತ ಸಿನಿಮಾವನ್ನು ರಚಿಸಿದ್ದೀರಿ! 👏 ಎಂದು ನಟ ಯಶ್ ಅವರು ಸುದೀರ್ಘವಾಗಿ ಟ್ವೀಟ್ ಮಾಡಿ ಕಾಂತಾರ ಚಾಪ್ಟರ್ 1ಕ್ಕೆ ಶುಭಕೋರಿದ್ದಾರೆ.

ಅಭಿಮಾನಿಗಳು ಫಿದಾ: ಇನ್ನು ನಟ ಯಶ್ ಅವರ ಟ್ವೀಟ್‌ಗೆ ಕನ್ನಡಿಗರು, ಸಿನಿಮಾ ಪ್ರಿಯರು ಹಾಗೂ ಯಶ್ & ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟ ಯಶ್ ಅವರು ಮನಸ್ಸು ಬಿಚ್ಚಿ ಶುಭಕೋರಿರುವುದು ಸಂತೋಷವನ್ನುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+