Kantara Kannada: ಕಾಂತಾರ ಗೆದ್ದ ಸಂಭ್ರಮದಲ್ಲೇ ಇಂಡಿಯಾದಲ್ಲೇ ರಿಷಬ್ ಶೆಟ್ಟಿ ದಿಢೀರ್ ನಂಬರ್ 1 ಹೀರೋ!
ಕನ್ನಡಿಗ ರಿಷಬ್ ಶೆಟ್ಟಿ ಅವರು ಈಗ ಮುಟ್ಟಿದ್ದೆಲ್ಲಾ ಚಿನ್ನ. ಯಾಕಂದ್ರೆ ರಿಷಬ್ ಶೆಟ್ಟಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನ ನೀಡುವ ಮೂಲಕ, ಇಂಡಿಯಾದ ಮೂಲೆ ಮೂಲೆಯಲ್ಲಿ ಹವಾ ಎಬ್ಬಿಸಿದ್ದಾರೆ. ಕನ್ನಡಿಗ ರಿಷಬ್ ಶೆಟ್ಟಿ ಅವರ ಸಿನಿಮಾ ಕಾಂತಾರ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಬಾಕ್ಸ್ ಆಫಿಸ್ ಉಡಾಯಿಸಿದೆ. ಇಂತಹ ಸಂದರ್ಭದಲ್ಲೇ ನಟ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಇನ್ನೊಂದು ಭರ್ಜರಿ ಸುದ್ದಿ ಸಿಕ್ಕಿದೆ.
ಕಾಂತಾರ ಸಿನಿಮಾ ಈಗಾಗಲೇ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿ ಇದೀಗ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಮುಂದೆ ನುಗ್ಗುತ್ತಿದೆ. ಹಾಗೇ ಮತ್ತೊಂದು ನ್ಯಾಷನಲ್ ಅವಾರ್ಡ್ ಕೂಡ ಗ್ಯಾರಂಟಿ ಆಗಿದೆ. ಕಾಂತಾರ ಸಿನಿಮಾ ರಾಷ್ಟ್ರಪತಿ ಭವನದಲ್ಲೂ ಪ್ರದರ್ಶನ ಕಂಡು ಹೊಸ ಇತಿಹಾಸ ಬರೆದಿದೆ. ಈ ಖುಷಿಯ ಜೊತೆಯಲ್ಲೇ ಕನ್ನಡಿಗ ರಿಷಬ್ ಶೆಟ್ಟಿ ಅವರಿಗೆ ಮತ್ತೊಂದು ಪಟ್ಟವೂ ಸಿಕ್ಕಿದೆ. ಕಾಂತಾರ ಗೆದ್ದ ಸಂಭ್ರಮದಲ್ಲೇ ಇಂಡಿಯಾದಲ್ಲೇ ರಿಷಬ್ ಶೆಟ್ಟಿ ದಿಢೀರ್ ನಂಬರ್ 1 ಹೀರೋ ಆಗಿದ್ದಾರೆ.

ರಿಷಬ್ ಶೆಟ್ಟಿ ನಂಬರ್ 1 ಹೀರೋ!
ಹೌದು, ಕಾಂತಾರ ಸಿನಿಮಾ ಗೆದ್ದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಅವರನ್ನು ನಂಬರ್ 1 ಹೀರೋ ಅಂತಾ ಇಡೀ ಭಾರತದ ಸಿನಿಮಾ ಪ್ರೇಮಿಗಳು ಒಪ್ಪಿಕೊಂಡಿದ್ದಾರೆ. ಇಂಡಿಯಾದಲ್ಲೇ ಹೀರೋಗಳ ಪೈಕಿ ಮೊದಲ ಸ್ಥಾನ ಪಡೆದು ರಿಷಬ್ ಶೆಟ್ಟಿ ಅವರು ಮಿಂಚಿದ್ದಾರೆ. ಮತ್ತೊಂದು ಕಡೆ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಭಾರಿ ಕುತೂಹಲ ಕೆರಳಿದೆ. ಇನ್ನೂ ದೊಡ್ಡ ಮಟ್ಟದಲ್ಲಿ ರಿಷಬ್ ಸಿನಿಮಾ ಮಾಡಲಿ, ಕನ್ನಡ ಸಿನಿಮಾ ರಂಗವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲಿ ಅಂತಾ ಇದೀಗ ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications