Kantara-1 OTT Release: ಕಾಂತಾರ ಚಾಪ್ಟರ್-1 ಒಟಿಟಿ ರಿಲೀಸ್ ದಿನಾಂಕ ಘೋಷಣೆ, ಯಾವಾಗ?
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-1 ಸಿನಿಮಾ ಮತ್ತೊಮ್ಮೆ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತೆ ಮಾಡಿದೆ. ಕಾಂತಾರದಂತೆಯೇ ಪ್ರೀಕ್ವೆಲ್ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಾ ಕಲೆಕ್ಷನ್‌ನಲ್ಲಿಯೂ ದಾಖಲೆಗಳನ್ನು ಉಡೀಸ್ ಮಾಡಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಈ ಬಗ್ಗೆ ಬಿಗ್ ಅಪ್‌ಡೇಟ್ ಇಲ್ಲಿದೆ.
ನಿರೀಕ್ಷೆಯಂತೆಯೇ ಕಾಂತಾರ ಚಾಪ್ಟರ್-1 ಕೂಡ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕೂಡ ಮಿಂಚಿನ ಓಟ ಪ್ರದರ್ಶಿಸಿದೆ. ಈ ಮೂಲಕ ಕೆಜಿಎಫ್ ಸಿನಿಮಾದ ದಾಖಲೆಗಳನ್ನು ಮುರಿದು, ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. ಸದ್ಯ ಕನ್ನಡದ ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂದು ಕೂಡ ಕರೆಸಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಓಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ.

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ: ಚಾಪ್ಟರ್-1 ಈ ವರ್ಷದ ಅತಿದೊಡ್ಡ ಬಾಕ್ಸ್ ಆಫೀಸ್ ಯಶಸ್ಸಿನ ಸಿನಿಮಾ ಆಗಿದೆ. ಈ ಭಾರೀ ಯಶಸ್ಸನ್ನು ಸಾಧಿಸಿದ ನಂತರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಹೌದು ಅಮೆಜಾನ್ ಪ್ರೈಮ್‌ನಲ್ಲಿ ರಿಷಬ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಮೆಜಾನ್ ಪ್ರೈಮ್ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗುಡ್‌ನ್ಯೂಸ್ ಕೊಟ್ಟಿದೆ.
ಈ ಸಿನಿಮಾ ವಿಶ್ವದಾದ್ಯಂತ 800 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾದ ವಾರಗಳ ನಂತರವೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಈ ಅದ್ಭುತ ಪ್ರದರ್ಶನದ ನಂತರ OTT ಬಿಡುಗಡೆಯನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ, ಅದರ ಡಿಜಿಟಲ್ ಪ್ರೀಮಿಯರ್‌ಗಾಗಿ ಕಾಯುವಿಕೆ ಶೀಘ್ರದಲ್ಲೇ ಮುಗಿಯಬಹುದು ಎಂದು ಅಮೇಜಾನ್ ಪ್ರೈಮ್ ಸುಳಿವು ನೀಡಿದೆ.

ರಿಲೀಸ್ ಡೇಟ್ ಯಾವಾಗ?
ಈ ಸಿನಿಮಾ ಈ ಚಿತ್ರವು ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ ಅಮೆಜಾನ್ ಪ್ರೈಮ್ ಟ್ವೀಟ್ ಮಾಡಿದೆ. ಅಕ್ಟೋಬರ್ 31ರಂದು ಬೆಮ್ರೆಯ ಲೆಜೆಂಡರಿ ಸಾಹಸವನ್ನು ವೀಕ್ಷಿಸಲು ಸಿದ್ಧರಾಗಿ ಎಂದು ತಿಳಿಸಿದೆ. ಸದ್ಯ ಜಾಗತಿಕವಾಗಿ 800 ಕೋಟಿ ರೂ. ಗಳಿಸಿದೆ ಎಂದು ಉದ್ಯಮದ ಡೇಟಾ-ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಕೇವಲ 24 ದಿನಗಳಲ್ಲಿ ಈ ಚಿತ್ರವು ಭಾರತದಲ್ಲಿ 579 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ ಎಂದು ವರದಿ ಮಾಡಿದೆ.












Click it and Unblock the Notifications