Kantara Chapter 1: ಕಾಂತಾರ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ; ರಿಷಬ್ ಶೆಟ್ಟಿ ಇರುವ ಬೋಟ್‌...

ಅಯ್ಯಯ್ಯೋ 'ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರೀಕ್ವೆಲ್ ಶೂಟಿಂಗ್ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ಚಿತ್ರ ತಂಡದಲ್ಲಿ ನಿರಂತರವಾಗಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಕಾಂತಾರ ಚಾಪ್ಟರ್‌ 1 ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ ವೇಳೆ ಈಗಾಗಲೇ ನಾಲ್ಕು ದುರಂತಗಳು ಸಂಭವಿಸಿದ್ದು, ಮೂವರು ಕಲಾವಿದರು ಮೃತಪಟ್ಟಿದ್ದಾರೆ, ಮೂರನೇ ಕಲಾವಿದ ಮೃತಪಟ್ಟಿರುವುದು ಚಿತ್ರತಂಡಕ್ಕಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಈ ಸಾವು ಶಾಕಿಂಗ್ ಆಗಿದೆ. ಈ ಸಾವಿನ ನೋವು ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದ್ದು,ಮತ್ತಷ್ಟು ಆತಂಕ ಎದುರಾಗಿದೆ.

ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ ಚಾಪ್ಟರ್ 2 ಈಗಾಗಲೇ ಭರ್ಜರಿ ಯಶಸ್ಸು ಕಂಡಿದ್ದು, ಇದೀಗ ಕಾಂತಾರ ಚಾಪ್ಟರ್1 ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆ ಒಂದರ ಹಿಂದೊಂದರಂತೆ ಭಾರೀ ಅವಘಡಗಳು ಸಂಭವಿಸುತ್ತಲೇ ಇವೆ. ಸಿನಿಮಾನಲ್ಲಿ ನಟಿಸಿದ್ದ ಮೂವರು ಕಲಾವಿದರು ಈಗಾಗಲೇ ಪ್ರಾಣ ಬಿಟ್ಟಿದ್ದಾರೆ. ಇದೀಗ ಮತ್ತೊಂದು ದೊಡ್ಡ ಅವಘಡ ನಡೆದಿದ್ದು, ಸಿನಿಮಾ ಚಿತ್ರಿಕರಣ ಯಾವಾಗ ಮುಗಿಯುತ್ತೋ ಎಂಬ ಆತಂಕದಲ್ಲಿ ಅಭಿಮಾನಿಗಳಿದ್ದಾರೆ.

Kantara Chapter 1 movie shooting boat capsized

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ನಂತರ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಇನ್ನೂ ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃತಪಟ್ಟರು. ಇದೀಗ ದೋಣಿಯೇ ಮುಗಿಚಿದೆ.

'ಕಾಂತಾರ ಚಾಪ್ಟರ್ 1' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಾಪಾಯ ನಡೆದಿರುವ ವರದಿ ಆಗಿಲ್ಲ. ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಬೋಟ್ ಒಂದು ಮುಗಿಚಿದೆಯಂತೆ. ಆದರೆ, ಬೋಟ್​​ನಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಇದ್ದರೆಂದು ವರದಿ ಆಗಿದೆ. ಚಿತ್ರೀಕರಣ ಮಾಡುವಾಗಲೇ ಒಂದು ಬೋಟು ಮುಗಿಚಿದೆ ಆದರೆ ಯಾವುದೇ ಜೀವ ಹಾನಿ ಆಗಿಲ್ಲ. ಕಲಾವಿದರು, ತಂತ್ರಜ್ಞರೆಲ್ಲರೂ ಈಜಿಕೊಂಡು ದಡಕ್ಕೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

'ಕಾಂತಾರ ಚಾಪ್ಟರ್ 1' ಸಿನಿಮಾಗಾಗಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲ ದೃಶ್ಯಗಳಿಗಾಗಿ ಕತ್ತಲಿನಲ್ಲೇ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. ದೋಣಿ ಮುಗಿಚಿದರೂ ಕಲಾವಿದರು ಮತ್ತು ತಂತ್ರಜ್ಞರು ಸೇಫ್ ಆಗಿದ್ದಾರಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ಈ ವೇಳೆ ನೀರು ಪಾಲಾಗಿವೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಆರಂಭದ ದಿನದಿಂದಲೂ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿದ್ದು, ಈಗಾಗಲೇ ಕಾಂತಾರ ಚಿತ್ರತಂಡ ಹೆದರಿದ್ದು, ಒಬ್ಬ ಕಲಾವಿದ ಮೃತ ಪಟ್ಟು ಒಂದು ವಾರ ಕಳೆಯುವ ಮೊದಲೇ ಮತ್ತೊಂದು ಅವಘಡ ಸಂಭವಿಸಿರುವುದಕ್ಕೆ ಚಿತ್ರತಂಡ ಮತ್ತಷ್ಟು ಹೆದರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+