Kantara Chapter 1: 'ಒಂದೇ' ದಿನಾಂಕ 'ಒಂದೇ' ತಿಂಗಳಲ್ಲಿ 'ಒಂದೇ' ಕಾರಣಕ್ಕೆ 2 ಸಾವು, ರಿಲೀಸ್ ಡೇಟ್ ಬದಲಾವಣೆ?
ಬೆಂಗಳೂರು, ಜೂನ್ 12: 'ಕಾಂತಾರಾ' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ ಕನ್ನಡ ನೆಲದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹವಾ ಎಬ್ಬಿಸಿತ್ತು. ನೋಡ ನೊಡುತ್ತಿದ್ದಂತೆ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲದೇ ಡೈರೆಕ್ಟರ್ ಎಂಬ ಹಣೆಪಟ್ಟಿ ಸಹ ಪಡೆದುಕೊಂಡರು. ಇದೀಗ ಅವರ 'ಕಾಂತಾರಾ ಚಾಪ್ಟರ್ 01' (Kantara Chapert 1 film updates) ಬಿಡುಗಡೆ ದಿನಾಂಕದಲ್ಲೇನಾದರೂ ಬದಲಾವಣೆ ಆಗುತ್ತಾ? ಎಂಬ ಅನುಮಾನ ಕಾಡತೊಡಗಿದೆ. ಇದಕ್ಕೆ ಸೂಕ್ತ ಕಾರಣಗಳು ಇವೆ.
ಪ್ರಿಕ್ವೆಲ್ 'ಕಾಂತಾರಾ 1' ಈ ಸಿನಿಮಾ ಕೇವಲ ನಟ ರಿಷಬ್ ಶೆಟ್ಟಿ ಅವರಿಗೆ ಮಾತ್ರ ಸ್ಪೆಷಲ್ ಅವರ, ಇಡೀ ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಸಿನಿಮಾ ಹೀಗಾಗಿಯೇ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಹೀಗಿರುವಾಗಲೇ ಚಿತ್ರೀರಣ ಮುಗಿಯುತ್ತಾ ಬಂದಂತೆ ನೆಗಟಿವ್ ಸುದ್ದಿಗಳು, ಮೇಲಾಗಿ ಸಾವುಗಳು ಈ ಕಾಂತಾರಾ-1 ಸುತ್ತ ಸುತ್ತುತ್ತಿವೆ. ಬಡ ಕಲಾವಿದರು ಪ್ರಾಣ ಬಿಟ್ಟಿದ್ದಾರೆ.

ಕರಾವಳಿ ಭಾಗದ ದೈವಗಳ ಕುರಿತ ಸಿನಿಮಾ ಇದಾಗಿದೆ. ಪಂಜುರ್ಲಿ ದೈವದ ಆದೇಶದೊಂದಿಗೆ ರಿಷಬ್ ಶೆಟ್ಟಿಯವರು ಸಿನಿಮಾ ಆರಂಭಿಸಿದ್ದಾರೆ. ಇತ್ತೀಚೆಗೆ ಇದೇ ದೈವವು ನಟ ರಿಷಬ್‌ಗೆ ಎಚ್ಚರಿಕೆ ನೀಡಿತ್ತು. ಈ ಮಧ್ಯೆ ಒಂದರ ಮೇಲೊಂದರಂತೆ ಅವಘಡಗಳು ಸಂಭವಿಸುತ್ತಿವೆ. ಕಾಂತಾರಾಗಾಗಿ ಹಗಲಿರುಳು ಶ್ರಮಿಸಿದ ಕಿರಿಯ ಕಲಾವಿದರ ಸರಣಿ ಸಾವುಗಳು ಸಂಭವಿಸಿವೆ. ಹೀಗಾಗಿ ಸಿನಿಮಾ ರಚನೆ ಬೇಗ ಪೂರ್ಣಗೊಳಿಸಿ ಅಕ್ಟೋಬರ್ 02ರ ಬದಲಾಗಿ ಇನ್ನಷ್ಟು ಬೇಗ ರಿಲೀಸ್ ಮಾಡಿದರೂ ಅಚ್ಚರಿ ಇಲ್ಲ.
ಮೇ 12 & ಜೂನ್ 12: 01 ತಿಂಗಳಲ್ಲಿ ಹೃದಯಾಘಾತ, 2 ಸಾವು
ಏಕೆಂದರೆ ಎದುರಾಗುತ್ತಿರುವ ಅಪಾಯಗಳು, ಜೀವ ಹಾನಿಗಳನ್ನು ನೋಡಿದರೆ ಸಿನಿಮಾವನ್ನು ತ್ವರಿತವಾಗಿ ಮುಗಿಸುವುದು ಒಳಿತ ಎನ್ನಲಾಗುತ್ತಿದೆ. 'ಕಾಂತಾರಾ 1' ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಮೇ 12 ರಂದು ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದಲೇ ನಿಧನವಾಗಿದ್ದರು ಅದಾಗಿ ಸರಿಯಾಗಿ ಒಂದು ತಿಂಗಳ ಅಂತಾರದಲ್ಲಿ ಅಂದರೆ ಜೂನ್ 12ರಂದು ಮತ್ತೊಬ್ಬ ಕಲಾವಿದ ವಿಜು ವಿಕೆ ಎಂಬುವವರು ಶಿವಮೊಗ್ಗದ ಆಗುಂಬೆ ಹೋಂ ಸ್ಟೇನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಇಬ್ಬರು ಒಂದೇ ದಿನಾಂಕಕ್ಕೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ರಿಲೀಸ್ ದಿನಾಂಕ ಬದಲಾವಣೆ ಏಕೆ?
ಈ ಹಿಂದೆ ಇದೇ ಸಿನಿಮಾದ ಕಲಾವಿದ ಕಲಾವಿದ ಮೇ ಮೊದಲ ವಾರ ಕಪಿಲ್ ಎಂಬ ಸಹ ಕಲಾವಿದ ನೀರಲ್ಲಿ ಮುಳುಗಿ ನಿಧನರಾಗಿದ್ದರು. ಇದಕ್ಕು ಮೊದಲು ಅರಣ್ಯ ನಾಶ ಸಂಬಂಧ ದೂರು ದಾಖಲಾಗಿತ್ತು. ಕಾಂತಾರಾ ಕಲಾವಿದರು ತೆರಳುತ್ತಿದ್ದ ವಾಹನ ಅಪಘಾತವಾಗಿ ಕಲಾವಿದರಿಗೆ ಗಾಯಗಳಾಗಿದ್ದವು. ಇದೆಲ್ಲ ನೋಡಿದರೆ ಕಾಂತಾರಾ-1ಕ್ಕೆ ಕಂಟಕ ಎದುರಾಗಿರುವುದು ಖಚಿತ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಬೇರಾವುದೇ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸಿನಿಮಾವನ್ನು ಅಕ್ಟೋಬರ್ 02ರ ಬದಲಾಗಿ ಬಹುಬೇಗ ರಿಲೀಸ್ ಆದರೆ ಒಳಿತು ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಚಿತ್ರತಂಡ ಈ ಬಗ್ಗೆ ನಿರ್ಧರಿಸಿದರೆ, ರಿಲೀಸ್ ದಿನಾಂಕದಲ್ಲಿ ಬದಲಾವಣೆ ಸಾಧ್ಯತೆ ಇದೆ.












Click it and Unblock the Notifications